
ಒಗಟುಗಳನ್ನು ಬಿಡಿಸುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಈ ಒಗಟಿನ ಚಿತ್ರಗಳನ್ನು ಬಿಡಿಸುತ್ತಾ ಕುಳಿತರೆ ಸಮಯ ಕಳೆದದ್ದೇ ತಿಳಿಯಲ್ಲ. ಮೆದುಳಿಗೆ ಕೆಲಸ ನೀಡುವಂತಹ ಅನೇಕ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ಪ್ರತಿನಿತ್ಯ ವೈರಲ್ ಆಗುವುದನ್ನು ನೀವು ನೋಡಿರುತ್ತೀರಿ. ಇದೀಗ ಇಲ್ಲೊಂದು ಅಂತಹದ್ದೇ ಒಗಟಿನ ಚಿತ್ರವೊಂದು ವೈರಲ್ ಆಗಿದ್ದು, ಇದರಲ್ಲಿ ಇರುವ ಅನ್ಯಗ್ರಹ ಜೀವಿಯನ್ನು ಹದಿನೈದು ಸೆಕೆಂಡುಗಳೊಳಗೆ ಪತ್ತೆ ಹಚ್ಚಬೇಕು. ನಿಮ್ಮ ಬುದ್ಧಿವಂತಿಕೆಗೆ ಸವಾಲೆಸುಗುವ ಈ ಒಗಟಿನ ಚಿತ್ರ ಬಿಡಿಸಲು ನೀವು ರೆಡಿ ಇದ್ರೆ ಈಗಲೇ ನಿಮ್ಮ ಸಮಯ ಆರಂಭವಾಗುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನೀವು ಮದುವೆಯ ಸುಂದರ ಕ್ಷಣಗಳನ್ನು ನೋಡುತ್ತೀರಿ. ಇಬ್ಬರೂ ಮದುವೆಯಾಗುತ್ತಿದ್ದು, ಉಳಿದ ಮೂವರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಐವರಲ್ಲಿ ಒಬ್ಬರು ಮಾತ್ರ ಏಲಿಯನ್. ಈ ಅನ್ಯಗ್ರಹ ಜೀವಿ ಯಾರೆಂದು ನೀವು ಕಂಡು ಹಿಡಿಯಬೇಕು. ಈ ಒಗಟು ಬಿಡಿಸಲು ನಿಮಗೆ ಇರುವ ಸಮಯವಕಾಶ 15 ಸೆಕೆಂಡುಗಳು ಮಾತ್ರ.
ಇದನ್ನೂ ಓದಿ: ಜೀಬ್ರಾಗಳ ನಡುವೆ ಅಡಗಿರುವ ಸಿಂಹವನ್ನು ನೀವು ಗುರುತಿಸಬಲ್ಲಿರಾ
ಒಗಟುಗಳನ್ನು ಬಿಡಿಸುವಲ್ಲಿ ಅನುಭವಿಗಳಾಗಿದ್ದರೂ ಈ ಟ್ರಿಕ್ಕಿ ಚಿತ್ರ ನೋಡಿದಾಗ ಒಂದು ಕ್ಷಣ ಗೊಂದಲಕ್ಕೆ ಒಳಗಾಗುತ್ತಾರೆ. ಈ ಚಿತ್ರದಲ್ಲಿರುವ ಐವರಲ್ಲಿ ಏಲಿಯನ್ ಯಾರೆಂದು ಕಂಡು ಹಿಡಿಯುವಲ್ಲಿ ಸಾಧ್ಯವಾಗಿದ್ದರೆ ನಿಮಗೆ ಅಭಿನಂದನೆಗಳು. ವಿಫಲರಾಗಿದ್ದೀರಿ ಎಂದಾದರೆ, ಚಿಂತಿಸಬೇಡಿ.ಈ ಐವರಲ್ಲಿ ವಧುವಿನ ಕೈಗಳನ್ನು ನೋಡಿ. ಅವಳಿಗೆ ಮೂರು ಕೈಗಳಿವೆ. ಅಂದರೆ ಅವಳು ಏಲಿಯನ್ ಆಗಿದ್ದು, ಉತ್ತರ ಸಿಕ್ಕಿತು ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ