Trending : ಇದಂತೂ ತುಂಬಾ ಕಷ್ಟಕರವಾದದ್ದು ಎನ್ನುತ್ತಿದ್ದಾರೆ ನೆಟ್ಟಿಗರು. ಸುಳಿವು ಕೊಟ್ಟರೂ ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಕೈಚೆಲ್ಲಿ ಕುಳಿತಿದ್ದಾರೆ. ಇಷ್ಟೊಂದು ಬಣ್ಣಬಣ್ಣದ ಬಟ್ಟೆಗಳು, ವಾರ್ಡ್ರೋಬ್ಗಳ ನಡುವೆ ಅದೆಲ್ಲಿ ಅಡಗಿ ಕುಳಿತಿದೆಯೋ ಏನೋ ಬೆಕ್ಕು. ಫೋಟೋ ಆಗಿದ್ದರೆ ಹೇಗೋ ಗುರುತಿಸಬಹುದಿತ್ತು. ಆದರೆ ಇದು ಚಿತ್ರಿಸಿದ್ದು. ಹಾಗಾಗಿ ಹುಡುಕುವುದು ಕಷ್ಟ ಎನ್ನುವುದು ನೆಟ್ಟಿಗರ ಅಳಲು. 15 ಸೆಕೆಂಡಿನೊಳಗೆ ಸಾಧ್ಯವಾಗದಿದ್ದರೆ ಇನ್ನೂ ಹತ್ತು ಸೆಕೆಂಡು ಸಮಯ ತೆಗೆದುಕೊಳ್ಳಿ.
ನೋಡಿ ಮೇಲೆ ಟ್ರಂಕುಗಳನ್ನು ಇಟ್ಟಕಡೆ ಏನಾದರೂ ಅಡಗಿಕೊಂಡಿದೆಯೇ? ಅಥವಾ ಶರ್ಟುಗಳೊಳಗೆ? ಇಲ್ಲಾ ಕೆಳಗೆ ಬೂಟುಗಳಿವೆ ಅಲ್ಲಿ ಏನಾದರೂ ಇದೆಯೇ? ಇಷ್ಟೊಂದು ಬಣ್ಣಬಣ್ಣಗಳ ನಡುವೆ ಕಪ್ಪು ಬೆಕ್ಕು ಹುಡುಕೋದು ಬಹಳೇ ಕಷ್ಟ ಅಲ್ಲವೆ?
ಒಂದು ಸುಳಿವು. ವಾರ್ಡ್ರೋಬಿನ ಬಲಗಡೆಗೆ ನೋಡಿ. ಕೊನೇ ಖಾನೆಯಲ್ಲಿ ಏನಾದರೂ ಕಂಡೀತೇ? ನೇರವಾಗಿ ನಿಮಗೆ ಬೆಕ್ಕು ಕಾಣದು. ಯಾವುದೋ ಜರಿದು ಬಿದ್ದ ಬಟ್ಟೆಯ ಹಿಂದೆ ಅದು ಅಡಗಿಕೊಂಡಿದೆ. ಗೊತ್ತಾಗಲಿಲ್ಲವಾ?
ಸರಿ ಈ ಕೆಳಗಿನ ಈ ಚಿತ್ರವನ್ನು ನೋಡಿ.
ನಿಮಗಷ್ಟೇ ಅಲ್ಲ ಯಾರಿಗೂ ಈ ಚಿತ್ರದಲ್ಲಿ ಬೆಕ್ಕನ್ನು ಕಂಡುಹಿಡಿಯಲು ಆಗಿಲ್ಲ. ಆದರೆ ಹುಡುಕಾಟಕ್ಕೆ ನಿಮ್ಮ ಮನಸ್ಸು ಮೆದುಳು ತೊಡಗಿಕೊಂಡಿತ್ತಾ? ಅಷ್ಟು ಸೆಕೆಂಡುಗಳ ಕಾಲ ಜಗತ್ತನ್ನು ಮರೆತು ಏಕಾಗ್ರತೆ ಸಾಧ್ಯವಾಗಿಸಿಕೊಂಡಿದ್ದೀರಾ? ಅದೇ ಮುಖ್ಯ. ಬೇಕಾಗಿದ್ದು ಸಿಗುತ್ತದೆಯೋ ಇಲ್ಲವೋ ಅದು ಮುಖ್ಯ ಅಲ್ಲವೇ ಅಲ್ಲ. ಎಲ್ಲ ಎಳೆತಗಳ ಮಧ್ಯೆ ನಿಮ್ಮ ಮನಸ್ಸನ್ನು ನಿಮ್ಮೊಳಗೆ ಎಳೆದುಕೊಂಡು ಆಗಾಗ ಹೀಗೆ ಮೆದುಳಿಗೆ ವಿಶ್ರಾಂತಿ ಕೊಟ್ಟು ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಡುವುದು ಮುಖ್ಯ.
ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:31 pm, Sat, 5 November 22