
ಕೆಲವರಿಗೆ ಒಗಟಿನ ಚಿತ್ರಗಳನ್ನು ಬಿಡಿಸುವುದೆಂದರೆ ಅದೇನೋ ಕ್ರೇಜ್. ಹೀಗಾಗಿ ಆಪ್ಟಿಕಲ್ ಇಲ್ಯೂಷನ್ (Optical Illusion) ಬ್ರೈನ್ ಟೀಸರ್ ಸೇರಿದಂತೆ ಇನ್ನಿತ್ತರ ಚಿತ್ರಗಳನ್ನು ಬಿಡಿಸಿ ಒಗಟುಗಳನ್ನು ಹುಡುಕುವುದರಲ್ಲಿ ಆಸಕ್ತಿ ತೋರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಸಾಕಷ್ಟು ಕಣ್ಣನ್ನು ಮೋಸಗೊಳಿಸುವ ಹಾಗೂ ಭ್ರಮೆಯನ್ನುಂಟು ಮಾಡುವ ಚಿತ್ರಗಳು ವೈರಲ್ ಆಗುತ್ತಿರುತ್ತದೆ. ಇದೀಗ ಇಂತಹದ್ದೇ ಒಗಟಿನ ಚಿತ್ರ ವೈರಲ್ ಆಗಿದ್ದು, ಇಲ್ಲೊಂದು ವೃತ್ತಾಕಾರದ ರಚನೆಯನ್ನು ಕಾಣಬಹುದು. ಇದು ಕಪ್ಪು ಬಿಳುಪಿನ ಈ ವೃತ್ತವು ತಿರುಗುವಂತೆ ಕಾಣುತ್ತಲಿದ್ದು, ಇದರಲ್ಲಿ ಸಂಖ್ಯೆಯೊಂದು ಅಡಗಿದೆ. ಈ ಸಂಖ್ಯೆಯೂ ಯಾವುದೆಂದು ಕಂಡುಹಿಡಿಯಬೇಕು. ಆದರೆ ಈ ಒಗಟು ಬಿಡಿಸಲು ಸಮಯಮಿತಿಯಿದ್ದು, ಹತ್ತು ಸೆಕೆಂಡುಗಳ ಒಳಗೆ ಉತ್ತರ ಕಂಡು ಕೊಳ್ಳಲು ಸಾಧ್ಯವೇ ಎಂದು ಪ್ರಯತ್ನಿಸಿ ನೋಡಿ.
ರೆಡ್ಡಿಟ್‌ನಲ್ಲಿ ರಾಸ್ಟ್ರೋಬಾಯ್ ಎಂಬ ಬಳಕೆದಾರ ಸಬ್‌ರೆಡಿಟ್ r/opticalillusions ಹೆಸರಿನ ಖಾತೆಯಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವು ಸಂಪೂರ್ಣವಾಗಿ ನೋಡುಗರ ಗಮನ ಸೆಳೆಯುತ್ತದೆ. ಮೊದಲು ಈ ಚಿತ್ರವನ್ನು ಗಮನಿಸಿದಾಗ ಕಪ್ಪು ಮತ್ತು ಬಿಳಿ ವೃತ್ತಾಕಾರದ ರೇಖೆಗಳು ಒಂದು ಕ್ಷಣ ತಬ್ಬಿಬ್ಬುಗೊಳಿಸುತ್ತದೆ. ಆದರೆ ಇದರಲ್ಲಿ ಸಂಖ್ಯೆಗಳು ಅಡಗಿದ್ದು, ನೋಡಿದ ಕೂಡಲೇ ಆ ಸಂಖ್ಯೆಗಳು ಬಹಿರಂಗಗೊಳ್ಳುವುದಿಲ್ಲ. ಸರಿಯಾದ ಸಂಖ್ಯೆ ಯಾವುದು ಎಂದು ಹೇಳಲು ನೀವು ಎಚ್ಚರಿಕೆಯಿಂದ ಗಮನಹರಿಸಬೇಕು.
ಬಳಕೆದಾರರ ಕಾಮೆಂಟ್‌ಗಳು ಹೀಗಿವೆ
ಒಬ್ಬ ಬಳಕೆದಾರರು ಉಳಿದವರೆಲ್ಲರೂ ಹುಚ್ಚರು, ನಾನು ಮಾತ್ರ ಅದನ್ನು ಸರಿಯಾಗಿ ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ. ಇನ್ನೊಬ್ಬರು ಚಿತ್ರವನ್ನು ಸಣ್ಣದು ಅಥವಾ ನಿಮ್ಮ ಫೋನ್ ಅನ್ನು ಓರೆಯಾಗಿಸುವುದರಿಂದ ಸಂಖ್ಯೆಗಳು ಗೋಚರಿಸುವ ರೀತಿ ಬದಲಾಗಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬರು ನಾನು ಈ ಚಿತ್ರದಲ್ಲಿ 528 ನೋಡಿದೆ, ಸರಿಯಾದ ಸಂಖ್ಯೆ ಗುರುತಿಸಲು ಕಷ್ಟವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಅಡಗಿರುವ ಆಮೆಯನ್ನು 10 ಸೆಕೆಂಡುಗಳಲ್ಲಿ ಗುರುತಿಸಬಹುದೇ?
ಉತ್ತರ ಕಂಡು ಹಿಡಿಯಲು ಸಾಧ್ಯವಾಯಿತೇ?
ಎಷ್ಟೇ ಪ್ರಯತ್ನಿಸಿದರೂ ಸರಿಯಾದ ಉತ್ತರ ಕಂಡುಕೊಳ್ಳಲು ಕಷ್ಟವಾಗುತ್ತಿದೆಯೇ, ನಿರ್ದಿಷ್ಟ ಸಮಯದೊಳಗೆ ಸಂಖ್ಯೆ ಯಾವುದೆಂದು ಹೇಳಲು ಕಷ್ಟವಾಗಿದ್ದರೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮೊದಲು ಈ ಚಿತ್ರದ ಮಧ್ಯಭಾಗದ ಮೇಲೆ ಕೇಂದ್ರೀಕರಿಸಿ, ನಿಧಾನವಾಗಿ ಹೊರಭಾಗವನ್ನು ಸ್ಕ್ಯಾನ್ ಮಾಡಿ, ಸರಿಯಾದ ಸಂಖ್ಯೆ ಹೇಳಲು ಸಾಧ್ಯವಾಗಬಹುದು. ಇಲ್ಲದಿದ್ದರೆ ಈ ಚಿತ್ರವನ್ನು ಚಿಕ್ಕದಾಗಿಸುವುದು ಸಂಖ್ಯೆ ಯಾವುದೆಂದು ಕಂಡು ಕೊಳ್ಳಲು ಸಹಾಯ ಮಾಡುತ್ತದೆ. ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆಯನ್ನು ಹೇಳಲು ಸಾಧ್ಯವಾಗದಿದ್ದರೆ ನಾವೇ ನೀವೇ ಆ ಸಂಖ್ಯೆ ಯಾವುದೆಂದು ಹೇಳುತ್ತೇವೆ. ಈ ಚಿತ್ರದಲ್ಲಿ ಅಡಗಿರುವ ಸಂಖ್ಯೆ 45283. ಒಮ್ಮೆ ದಿಟ್ಟಿಸಿ ನೋಡಿದ್ರೆ ಈ ಸಂಖ್ಯೆಯೂ ನಿಮ್ಮ ಕಣ್ಣಿಗೆ ಬೀಳುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:46 am, Sun, 31 August 25