
ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳು ಕಣ್ಣಿಗೆ ಭ್ರಮೆಯನ್ನುಂಟು ಮಾಡುವುದಲ್ಲದೇ ಮೆದುಳಿಗೆ ವ್ಯಾಯಾಮ ನೀಡುವ ಚಿತ್ರಗಳಿವು. ಈ ಚಿತ್ರಗಳನ್ನು ಮೊದಲು ನೋಡಿದಾಗ ನಮ್ಮನ್ನು ಭ್ರಮೆಯಲ್ಲಿ ಸಿಲುಕಿಸಬಹುದು. ಕೆಲವೊಮ್ಮೆ ಈ ಒಗಟನ್ನು ಬಿಡಿಸುವುದು ಕಷ್ಟವಾಗಬಹುದು. ಆದರೆ ಈ ಚಿತ್ರಗಳು ನಿಮ್ಮ ಬುದ್ಧಿವಂತಿಕೆ ಹಾಗೂ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎನ್ನುವುದನ್ನು ಮರೆಯದಿರಿ. ಇದೀಗ ಇಲ್ಲೊಂದು ಇಂತಹದ್ದೇ ಚಿತ್ರವೊಂದು ವೈರಲ್ ಆಗಿದ್ದು, ಕುದುರೆ ಎಲ್ಲಿದೆ ಎಂದು ಏಳು ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು. ಈ ಒಗಟನ್ನು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ನೋಡಿ.
br4inteaserhub ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಶೇರ್ ಮಾಡಿಕೊಳ್ಳಲಾಗಿದೆ. ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ನಿಮಗೆ ಮೊದಲ ನೋಟದಲ್ಲಿ ಕಾಣಿಸುವುದೇ ಆನೆ. ಆದರೆ ಈ ಚಿತ್ರದಲ್ಲಿ ಕುದುರೆಯನ್ನು ಜಾಣತನದಿಂದ ಮರೆ ಮಾಡಲಾಗಿದೆ. ಇದರಲ್ಲಿ ಕುದುರೆ ಎಲ್ಲಿದೆ ಎಂದು ಕಂಡುಹಿಡಿಯಲು ಕಷ್ಟವಾಗಬಹುದು. ಆದರೆ ನಿಮ್ಮ ದೃಷ್ಟಿಕೋನ ಬದಲಾಯಿಸಿಕೊಳ್ಳಿ. ಏಳು ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಕುದುರೆಯನ್ನು ಕಂಡುಹಿಡಿಯಿರಿ. ಆಸಾಧಾರಣಾ ವೀಕ್ಷಣಾ ಕೌಶಲ್ಯ ಹೊಂದಿರುವವರು ಮಾತ್ರ ಈ ಒಗಟನ್ನು ಬಿಡಿಸಲು ಸಾಧ್ಯ.
ಇದನ್ನೂ ಓದಿ:Optical Illusion: ಈ ಚಿತ್ರದಲ್ಲಿ ಪುಟ್ಟ ಹಕ್ಕಿಯೊಂದು ಅಡಗಿದೆ, 15 ಸೆಕೆಂಡುಗಳಲ್ಲಿ ಕಂಡುಹಿಡಿಯಿರಿ
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸಿದರೂ ಕೂಡ ನಿಮಗೆ ಕುದುರೆಯೂ ಕಾಣಿಸುತ್ತಿಲ್ಲವೇ, ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ವೀಕ್ಷಣಾ ಕೌಶಲ್ಯ ಅತ್ಯುತ್ತಮವಾಗಿರುವವರು ಮಾತ್ರ ಕುದುರೆ ಮುಖವನ್ನು ಗುರುತಿಸಲು ಸಾಧ್ಯ. ಉತ್ತರ ಕಂಡು ಕೊಳ್ಳಲು ಸಾಧ್ಯವಾಗಿಲ್ಲ ಅಂದ್ರೆ ನಾವೇ ನಿಮಗೆ ಕೆಲವು ಸುಳಿವನ್ನು ನೀಡುತ್ತೇವೆ. ಈ ಚಿತ್ರದ ಬಲಭಾಗದತ್ತ ಹೆಚ್ಚು ಗಮನ ಹರಿಸಿ. ಈ ಒಗಟು ಬಿಡಿಸಲು ಆನೆಯ ಬಾಲದ ಬಳಿಯಿರುವ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಿ, ಕುದುರೆ ನಿಮ್ಮ ಕಣ್ಣಿಗೆ ಬೀಳುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ