
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಆಪ್ಟಿಕಲ್ ಇಲ್ಯೂಷನ್ (optical Illusion) ಮೆದುಳಿಗೆ ಕೆಲಸ ನೀಡುವುದರ ಜತೆಗೆ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತದೆ. ಆದರೆ ಕಠಿಣ ಸವಾಲಿನ ಚಿತ್ರವನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಇದೊಂದು ಮೋಜಿನ ಆಟವಾಗಿದ್ದು, ಹಲವರು ಈ ಒಗಟಿನ ಚಟುವಟಿಕೆಗಳನ್ನು ಈಗಾಗಲೇ ಆಡಿರುತ್ತೀರಿ. ಕೆಲವರು ಕ್ಷರ್ಣಾಧದಲ್ಲಿ ಟ್ರಿಕ್ಕಿ ಇಲ್ಯೂಷನ್ ಚಿತ್ರ ಬಿಡಿಸಿ ಉತ್ತರ ಕಂಡು ಕೊಂಡಿರುತ್ತೀರಿ. ಆದರೆ ಇದೀಗ ಸವಾಲಿನ ಫೋಟೋವೊಂದು ವೈರಲ್ ಆಗಿದ್ದು, ಆಮೆಯನ್ನೊಳಗೊಂಡ ಚಿತ್ರದಲ್ಲಿ ಮನುಷ್ಯರ ಮುಖಗಳನ್ನು (human faces) ಜಾಣತನದಿಂದ ಮರೆಮಾಡಲಾಗಿದೆ. ನಿಮ್ಮ ಬುದ್ಧಿವಂತಿಕೆ ಪರೀಕ್ಷಿಸಲು ಇದೊಂದು ಒಳ್ಳೆಯ ಅವಕಾಶ. ಈ ಚಿತ್ರದಲ್ಲಿ ಹತ್ತು ಮುಖಗಳು ಎಲ್ಲಿದೆ ಎಂದು ನೀವು 17 ಸೆಕೆಂಡುಗಳಲ್ಲಿ ಹೇಳಬೇಕು. ಈ ಒಗಟು ಬಿಡಿಸುವುದರಲ್ಲಿ ನೀವು ಯಶಸ್ವಿಯಾದ್ರೆ ನೀವು ಬುದ್ಧಿವಂತರು ಎಂದರ್ಥ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಗಟಿನ ಚಿತ್ರವನ್ನು ನೀವು ಮೊದಲು ಗಮನಿಸಿದಾಗ ನಿಮ್ಮ ಕಣ್ಣಿಗೆ ಮೊದಲು ಕಾಣುವುದೇ ಆಮೆ. ಆದರೆ ಈ ಚಿತ್ರದಲ್ಲಿ ಅಲ್ಲಲ್ಲಿ ಸಣ್ಣ ಪುಟ್ಟ ಸಸ್ಯಗಳಿವೆ. ಸರಳವಾಗಿರುವ ಈ ಚಿತ್ರದಲ್ಲಿ ಮೊದಲ ನೋಟಕ್ಕೆ ನಿಮ್ಮ ಕಣ್ಣಿಗೆ ಹತ್ತು ಮುಖಗಳು ಅಷ್ಟು ಸುಲಭವಾಗಿ ಕಾಣುವುದೇ ಇಲ್ಲ. ಜಾಣತನದಿಂದ ಇದನ್ನು ಮರೆ ಮಾಡಲಾಗಿದೆ. ಹೀಗಾಗಿ ನೀವು ನಿಮ್ಮ ಕಣ್ಣು ಅಗಲಿಸಿ ಈ ಮುಖಗಳನ್ನು ಪತ್ತೆ ಹಚ್ಚಬೇಕು. ನಿಮ್ಮ ದೃಷ್ಟಿ ಸಾಮರ್ಥ್ಯ ಅತ್ಯುತ್ತಮವಾಗಿದ್ರೆ ಮಾತ್ರ ಇಲ್ಲಿ ನೀಡಿರುವ ನಿರ್ದಿಷ್ಟ ಸಮಯದೊಳಗೆ ಒಗಟು ಬಿಡಿಸಲು ನಿಮಗೆ ಸಾಧ್ಯವಾಗುತ್ತದೆ.
ಕಣ್ಣನ್ನು ಮೋಸಗೊಳಿಸುವ ಈ ಇಲ್ಯೂಷನ್ ಚಿತ್ರವು ನಿಮಗೆ ಸರಳವಾಗಿ ಕಾಣಿಸುತ್ತದೆ. ಹಾಗೇನೆ ಈ ಚಿತ್ರವನ್ನು ಏಕಾಗ್ರತೆಯಿಂದ ನೋಡಿದ್ರೆ ಮಾತ್ರ ನಿಮ್ಮ ಕಣ್ಣಿಗೆ ಒಂದಲ್ಲ ಎರಡರಲ್ಲ ಹತ್ತು ಮುಖಗಳು ಕಾಣುತ್ತವೆ. ಈ ಒಗಟನ್ನು ಬಿಡಿಸಲು ನೀವು ಸಿದ್ಧವಿದ್ರೆ ಈ ಚಿತ್ರದತ್ತ ಕಣ್ಣು ಹಾಯಿಸಿ.
ಇದನ್ನೂ ಓದಿ:ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಎರಡನೇ ವ್ಯಕ್ತಿಯನ್ನು ಕಂಡುಹಿಡಿಯಬಲ್ಲಿರಾ
ಭ್ರಮೆಯಲ್ಲಿ ಸಿಲುಕಿಸುವ ಈ ಚಿತ್ರವು ತಲೆ ಕೆರೆದುಕೊಳ್ಳುವಂತೆ ಮಾಡಿರಬಹುದು. ಎಷ್ಟೇ ಹುಡುಕಿದರೂ ಮರೆಮಾಡಲಾಗಿರುವ ಮುಖಗಳನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲವೇ. ಈ ಚಿತ್ರದ ಪ್ರತಿಯೊಂದು ಭಾಗವನ್ನು ಸೂಕ್ಷ್ಮ ವಾಗಿ ಗಮನಿಸಿದರೆ ನಿಮ್ಮ ಕಣ್ಣಿಗೆ ಮನುಷ್ಯನ ಮುಖಗಳು ಕಾಣಬಹುದು. ಒಂದು ವೇಳೆ ಹತ್ತು ಮುಖಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲವೆಂದಾದರೆ ಈ ಕೆಳಗಿನ ಚಿತ್ರದಲ್ಲಿ ಹತ್ತು ಮುಖಗಳನ್ನು ನಾವು ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ