
ಕೆಲವರಿಗೆ ಒಗಟಿನ ಚಿತ್ರವನ್ನು ಬಿಡಿಸುವುದೆಂದರೆ ಅದೇನೋ ಖುಷಿ. ಹೀಗಾಗಿ ಸಮಯ ಸಿಕ್ಕಾಗಲೆಲ್ಲಾ ಈ ಒಗಟಿನ ಚಿತ್ರಗಳನ್ನು ಬಿಡಿಸಲು ಆಸಕ್ತಿ ತೋರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಇಂತಹ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್ (optical illusion) ಹಾಗೂ ಬ್ರೈನ್ ಟೀಸರ್ ನಂತಹ ಚಿತ್ರಗಳು ವೈರಲ್ ಆಗುತ್ತಿರುತ್ತದೆ. ಈ ಚಿತ್ರಗಳು ಮೊದಲಿಗೆ ಗೊಂದಲವನ್ನು ಉಂಟು ಮಾಡಿದರೂ, ಈ ಚಿತ್ರದಲ್ಲಿ ಅಡಗಿರುವ ವಸ್ತುವನ್ನು ಪತ್ತೆ ಹಚ್ಚಿದ ಬಳಿಕ ಆಗುವ ಖುಷಿಯೇ ಬೇರೆ. ಇದೀಗ ವರ್ಣರಂಜಿತ ಅಣಬೆಗಳ ನಡುವೆ ಇಲಿಯೊಂದು ಅಡಗಿ ಕುಳಿತಿದೆ. ಈ ಇಲಿಯನ್ನು (mouse) ಹುಡುಕುವ ಸವಾಲು ನೀಡಲಾಗಿದೆ. ಇಲ್ಲಿ ನಿರ್ದಿಷ್ಟ ಸಮಯ ನೀಡಲಾಗಿಲ್ಲದಿದ್ದರೂ ಆದಷ್ಟು ಬೇಗ ಉತ್ತರ ಕಂಡುಕೊಂಡು ನಿಮ್ಮ ವೀಕ್ಷಣಾ ಕೌಶಲ್ಯ ಪರೀಕ್ಷಿಸಿಕೊಳ್ಳಬಹುದು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೀವು ಗಮನಿಸಬಹುದು. ವರ್ಣರಂಜಿತ ಕೆಂಪು, ಕಂದು ಹಾಗೂ ಹಳದಿ ಚುಕ್ಕೆಗಳನ್ನೊಳಗೊಂಡ ಅಣಬೆಗಳನ್ನು ನೋಡಬಹುದು. ನಿಮ್ಮ ತಾಳ್ಮೆ, ಏಕಾಗ್ರತೆ ಹಾಗೂ ದೃಷ್ಟಿಯನ್ನು ಪರೀಕ್ಷಿಸಲು ಹಳೆಯ ಶೈಲಿಯ ಆಪ್ಟಿಕಲ್ ಚಿತ್ರವಿದಾಗಿದೆ. ಅಣಬೆಗಳಿಂದ ಆವೃತ್ತವಾದ ಪ್ರದೇಶದಲ್ಲಿ ಇಲಿಯನ್ನು ಮರೆಮಾಡಲಾಗಿದೆ. ಈ ಪ್ರಾಣಿಯನ್ನು ನೀವು ಪತ್ತೆ ಹಚ್ಚಿದರೆ ಅಸಾಧಾರಣ ವೀಕ್ಷಣಾ ಕೌಶಲ್ಯ ಹೊಂದಿದ್ದೀರಿ ಎಂದರ್ಥ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಆಕರ್ಷಕ ಅಣಬೆಗಳ ರಾಶಿಯೇ ಇದೆ. ಇದರಲ್ಲಿ ಇಲಿಯೊಂದನ್ನು ಮರೆಮಾಡಲಾಗಿದ್ದು ಇದನ್ನು ಹುಡುಕುವ ಕಠಿಣ ಸವಾಲನ್ನು ನೀಡಲಾಗಿದೆ. ಉತ್ತರ ಹುಡುಕಲು ಸಿದ್ಧವಿದ್ದರೆ ನಿಮ್ಮ ಸಮಯ ಈಗಿನಿಂದಲೇ ಆರಂಭವಾಗುತ್ತದೆ.
ಇದನ್ನೂ ಓದಿ:Optical Illusion: ಹುಲ್ಲಿನ ನಡುವೆ ಅಡಗಿರುವ ಕಪ್ಪೆಯನ್ನು ಕಂಡುಹಿಡಿಯಿರಿ
ಎಷ್ಟೇ ಪ್ರಯತ್ನಿಸಿದರೂ ಒಗಟಿನ ಚಿತ್ರದಲ್ಲಿ ಅಡಗಿರುವ ಇಲಿಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲವೇ? ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಅಣಬೆಗಳ ನಡುವೆ ಅಡಗಿರುವ ಇಲಿ ಎಲ್ಲಿದೆ ಎಂದು ನಾವು ನಿಮಗೆ ಹೇಳುತ್ತೇವೆ. ಈ ಮೇಲಿನ ಚಿತ್ರದಲ್ಲಿ ಅಣಬೆಗಳ ನಡುವೆ ಅಡಗಿರುವ ಇಲಿಯನ್ನು ನೀಲಿ ಬಣ್ಣದಲ್ಲಿ ಗುರುತಿಸಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ