Brain Teaser : ಸನ್ ಗ್ಲಾಸ್ ಧರಿಸಿರುವ ನೂರಾರು ಪಾಂಡಾಗಳ ಮಧ್ಯೆ, ಸನ್ಗ್ಲಾಸ್ ಧರಿಸದ ಮೂರು ಪಾಂಡಾಗಳನ್ನು ಕಂಡುಹಿಡಿಯುವುದೇ ನಿಮ್ಮ ಮೆದುಳಿಗೂ ಕಣ್ಣಿಗೂ ನೀಡಿರುವ ಸವಾಲು. ಹಂಗೇರಿಯನ್ ಕಲಾವಿದ ಗರ್ಗೆಲಿ ಡುಡಾಸ್ (Gergely Dudás) ಎಂದಿನಂತೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಸವಾಲನ್ನು ಎಸೆದಿದ್ಧಾರೆ. ಜಾಲತಾಣಿಗರು ತಲೆ ಕೆರೆದುಕೊಂಡು, ಕನ್ನಡಕ ತೆಗೆದಿಟ್ಟು, ಕನ್ನಡಕ ಹಾಕಿಕೊಂಡು ಈ ಸವಾಲನ್ನು ಬಿಡಿಸುವಲ್ಲಿ ಒದ್ದಾಡುತ್ತಿದ್ದಾರೆ. ಆದರೆ ನಿಮಗಿದು ಬಹಳ ಸರಳ ಎನ್ನುವುದು ನಮ್ಮ ಭಾವನೆ. ಏನಂತೀರಿ?
ನಿನ್ನೆಯಷ್ಟೇ ಇದನ್ನು ಪೋಸ್ಟ್ ಮಾಡಲಾಗಿದೆ. ಈಗಾಗಲೇ ಸುಮಾರು 900 ಜನರು ಲೈಕ್ ಮಾಡಿದ್ದಾರೆ. ಸುಮಾರು 80 ಜನರು ಕಂಡುಕೊಂಡ ಉತ್ತರಗಳನ್ನು ತಿಳಿಸಿದ್ದಾರೆ. 170 ಜನರು ಇದನ್ನು ರೀಶೇರ್ ಮಾಡಿಕೊಂಡಿದ್ದಾರೆ. ನನಗೆ ಎರಡು ಬೋ ಟೈ, ಒಂದು ಗ್ಲಾಸು, ಒಂದು ಸೋಡಾ ಬಾಟಲಿ ಹಿಡಿದುಕೊಂಡಿರುವ ಮತ್ತು ಕೌಬಾಯ್ ಟೋಪಿ, ನೆಕ್‌ಟೈ ಧರಿಸಿರುವ ಪಾಂಡಾಗಳು ಕಂಡವು. ಇದು ಬಹಳ ಮುದ್ದಾಗಿದೆ ಎಂದು ಕಲಾವಿದರಿಗೆ ಧನ್ಯವಾದ ತಿಳಿಸಿದ್ದಾರೆ ಒಬ್ಬರು.
ಇದನ್ನೂ ಓದಿ : Viral Video: ಗುಜರಾತ್; ರಸ್ತೆಯಲ್ಲಿ ಗರ್ಭಾನೃತ್ಯ ಮಾಡಿದ ರೀಲಿಗರನ್ನು ಜೈಲಿಗೆ ಅಟ್ಟಿದ ಪೊಲೀಸರು
ನೋಡಿದ ತಕ್ಷಣ ಇದು ಸುಲಭದ ಸವಾಲು ಅಲ್ಲವೇ ಅಲ್ಲ ಎಂದಿನಿಸಿತು. ಆದರೂ ಎರಡನ್ನು ಹುಡುಕಿದೆ, ಇನ್ನೂ ಒಂದನ್ನು ಹುಡುಕುತ್ತಿರುವೆ ಎಂದಿದ್ದಾರೆ ಇನ್ನೊಬ್ಬರು. ನನಗೆ ಉತ್ತರ ಸಿಗುತ್ತದೆಯೋ ಬಿಡುತ್ತದೆಯೋ ಅನ್ನುವುದು ಮುಖ್ಯವಾಗದೆ, ಪಾಂಡಾಗಳನ್ನು ಚಿತ್ರಿಸಿದ ರೀತಿ ಬಹಳ ಇಷ್ಟವಾಯಿತು ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : Viral Video: 3 ಮೊಟ್ಟೆಗಳನ್ನು ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್ನಲ್ಲಿ ಹಾಕಿ, ಮುಂದೇನಾಗುತ್ತದೆ ನೋಡಿ
ಇದು ತುಂಬಾ ಕಷ್ಟಕರವಾದರೂ ನಾನು ಮೂರನ್ನೂ ಪತ್ತೆ ಹಚ್ಚಿದೆ ಎಂದಿದ್ದಾರೆ ಮಗದೊಬ್ಬರು. ನಾನಂತೂ ಈ ಚಿತ್ರವನ್ನು ಪ್ರಿಂಟ್ ಹಾಕಿಸಿಕೊಂಡು ನನ್ನ ರೂಮಿನ ಗೋಡೆಗೆ ಅಂಟಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ ಎಂದಿದ್ದಾರೆ ಇನ್ನೊಬ್ಬರು. ಆ ಮೂರು ಪಾಂಡಾಗಳನ್ನು ಗುರುತು ಹಿಡಿಯಲು ನಾನು ಬಹಳ ಸಮಯ ವ್ಯಯಿಸಲೇ ಇಲ್ಲ! ಎಂದಿದ್ದಾರೆ ಇನ್ನೂ ಒಬ್ಬರು.
ನಿಮಗೆ ಆ ಮೂರು ಪಾಂಡಾಗಳು ಸುಲಭಕ್ಕೆ ಸಿಕ್ಕವೆ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:18 pm, Tue, 25 July 23