
ಈಗಂತೂ ಬುದ್ಧಿವಂತಿಕೆ, ಕಣ್ಣಿನ ಚುರುಕುತನ ಎಷ್ಟಿದೆ ಎಂದು ಪರೀಕ್ಷಿಸಬಹುದಾದ ಅನೇಕ ಒಗಟಿನ ಚಿತ್ರಗಳು ವೈರಲ್ ಆಗುತ್ತಲೇ ಇರುತ್ತದೆ.ಈ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ನೀವು ಈ ಹಿಂದೆ ನಿಮ್ಮ ಯೋಚನಾ ಶಕ್ತಿಗೆ ಸವಾಲು ನೀಡುವ ಈ ಒಗಟನ್ನು ಬಿಡಿಸಿದ್ದೀರಾ. ಆದರೆ ಇದೀಗ ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸುವ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಇಲ್ಲಿದೆ. ಈ ಚಿತ್ರದಲ್ಲಿ ಕೊಳವನ್ನು ಕಾಣಬಹುದಾಗಿದ್ದು ಇದರಲ್ಲಿ ಆಮೆಯನ್ನು (turtle) ಜಾಣತನದಿಂದ ಮರೆಮಾಡಲಾಗಿದೆ. ಈ ಆಮೆಯನ್ನು ಪತ್ತೆ ಹಚ್ಚುವ ಸವಾಲು ಇಲ್ಲಿ ನೀಡಲಾಗಿದೆ. ಈ ಟ್ರಿಕ್ಕಿ ಒಗಟನ್ನು ತಾಳ್ಮೆಯಿಂದ ಬಿಡಿಸಲು ಪ್ರಯತ್ನಿಸಿ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಫೈಂಡ್ ದಿ ಸ್ನೈಪರ್ (r/FindTheSniper) ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಚಿತ್ರವನ್ನು ಮೊದಲು ನೋಡಿದಾಗ ನಿಮ್ಮ ಕಣ್ಣಿಗೆ ಕೊಳವು ಕಾಣಿಸುತ್ತದೆ. ಈ ಕೊಳವನ್ನು ಸಂಪೂರ್ಣವಾಗಿ ಆವರಿಸಿರುವ ದಟ್ಟವಾದ ಜಲಸಸ್ಯಗಳು, ಒಣ ಎಲೆಗಳು ಹಾಗೂ ಕಾಂಡಗಳನ್ನು ನೀವು ಕಾಣಬಹುದು. ಆದರೆ ಇದರ ನಡುವೆ ಆಮೆಯನ್ನು ಜಾಣತನದಿಂದ ಮರೆಮಾಡಲಾಗಿದೆ. ತೀಕ್ಷ್ಣ ಕಣ್ಣುಳ್ಳವರು ಮಾತ್ರ ಐದು ಸೆಕೆಂಡುಗಳಲ್ಲಿ ಈ ಒಗಟನ್ನು ಬಿಡಿಸಬಹುದು.
ಇದನ್ನೂ ಓದಿ: ಹದ್ದಿನ ಕಣ್ಣು ಇರುವವರು ಈ ಚಿತ್ರದಲ್ಲಿ ಅಡಗಿರುವ ಶ್ವಾನವನ್ನು ಗುರುತಿಸಿ
ಕೊಳದಲ್ಲಿ ಅಡಗಿ ಕುಳಿತಿರುವ ಪತ್ತೆ ಹಚ್ಚುವುದು ಎಲ್ಲರಿಗೂ ಸುಲಭವಲ್ಲ. ಈ ಈ ಒಗಟಿನ ಚಿತ್ರಗಳು ನಿಮ್ಮ ಕಣ್ಣನು ಮೋಸಗೊಳಿಸುತ್ತವೆ, ನಿಮ್ಮನ್ನು ಭ್ರಮೆಯಲ್ಲಿ ಸಿಲುಕುವಂತೆ ಮಾಡುತ್ತವೆ. ಈ ಚಿತ್ರದಲ್ಲಿ ಆಮೆಯ ಚಿಪ್ಪು ಹಾಗೂ ತಲೆಯು ಅದರ ಸುತ್ತಲಿನ ಸಸ್ಯಗಳ ಹಸಿರು, ಹಳದಿ ಮತ್ತು ಕಂದು ಬಣ್ಣದ ಸಸ್ಯಗಳಲ್ಲಿ ಬೆರೆತು ಹೋಗಿದ್ದು ಈ ಜೀವಿಯನ್ನು ತಕ್ಷಣ ಗುರುತಿಸುವುದು ತುಂಬಾ ಕಷ್ಟಕರ. ಹೀಗಾಗಿ ಈ ಚಿತ್ರವನ್ನು ಝೋಮ್ ಮಾಡಿ ಸೂಕ್ಷ್ಮವಾಗಿ ಗಮನಿಸಿ. ಒಂದು ವೇಳೆ ನಿಮಗೆ ಆಮೆ ಕಣ್ಣಿಗೆ ಕಾಣಿಸಿಲ್ಲವಾದರೆ ಉತ್ತರವನ್ನು ನಾವೇ ನಿಮಗೆ ಹೇಳುತ್ತೇವೆ. ಆಮೆಯೂ ಮಧ್ಯಭಾಗದಲ್ಲಿರುವ ಮೂರು ಸಸ್ಯಗಳ ಕೆಳಗೆ ಇದೆ. ಕಣ್ಣು ಬಿಟ್ಟು ನೋಡಿದ್ರೆ ಆಮೆಯೂ ನಿಮ್ಮ ಕಣ್ಣಿಗೆ ಖಂಡಿತ ಕಾಣಿಸುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ