Optical Illusion: ಈ ಚಿತ್ರದಲ್ಲಿರುವ ಮೂರು ಮುಖಗಳನ್ನು ಗುರುತಿಸಿದ್ರೆ ನೀವು ಬುದ್ಧಿವಂತರು

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ನಂತಹ ಒಗಟಿನ ಆಟಗಳು ಟ್ರೆಂಡಿಂಗ್‌ನಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಕಣ್ಣಾಯಿಸಿದ್ದಲೆಲ್ಲಾ ಒಗಟಿನ ಚಿತ್ರಗಳೇ ಕಾಣಸಿಗುತ್ತವೆ. ಇದೀಗ ನಿಮ್ಮ ಬುದ್ಧಿವಂತಿಗೆ ಸವಾಲೊಡ್ಡುವಂತಹ ಇಲ್ಯೂಷನ್ ಚಿತ್ರ ವೈರಲ್ ಆಗಿದೆ. ಈ ಚಿತ್ರದಲ್ಲಿರುವ ಮೂವರು ವ್ಯಕ್ತಿಗಳ ಮುಖಗಳನ್ನು ಪತ್ತೆ ಹಚ್ಚುವುದೇ ನಿಮ್ಮ ಮುಂದಿರುವ ಸವಾಲು. ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ಒಮ್ಮೆ ನೋಡಿ.

Optical Illusion: ಈ ಚಿತ್ರದಲ್ಲಿರುವ ಮೂರು ಮುಖಗಳನ್ನು ಗುರುತಿಸಿದ್ರೆ ನೀವು ಬುದ್ಧಿವಂತರು
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Social Media

Updated on: Jan 20, 2026 | 10:42 AM

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಚಿತ್ರಗಳನ್ನು ಬಿಡಿಸುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚಿನವರು ಬಿಡುವಿನ ಸಮಯದಲ್ಲಿ ಇಂತಹ ಚಿತ್ರಗಳತ್ತ ಕಣ್ಣಾಯಿಸುತ್ತಾರೆ. ನೀವು ಕೂಡ ಅಂತಹವರಲ್ಲಿ ಒಬ್ಬರಾಗಿದ್ದರೆ ಇದೀಗ ನಿಮಗೊಂದು ಚಾಲೆಂಜ್ ಇದೆ. ದಟ್ಟವಾಗಿ ಹರಡಿಕೊಂಡಿರುವ ಎರಡು ಮರಗಳ ನಡುವೆ ಮೂವರು ವ್ಯಕ್ತಿಗಳು ಅಡಗಿ ಕುಳಿತಿದ್ದಾರೆ.  ಅಂದರೆ ಇಲ್ಲಿ ಮೂರು ಮುಖಗಳಿದ್ದು, ನೀವು 30 ಸೆಕೆಂಡುಗಳಲ್ಲಿ ಈ ಮುಖಗಳನ್ನು ಗುರುತಿಸುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಿ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಸಮಯ ಬಂದಿದೆ.

ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಕಾಣಿಸಿದ್ದೇನು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಇಲ್ಯೂಷನ್ ಚಿತ್ರದಲ್ಲಿ ದಟ್ಟವಾಗಿ ಹಬ್ಬಿ ಕೊಂಡಿರುವ ಎರಡು ಮರಗಳನ್ನು ಕಾಣಬಹುದು. ಈ ಮರಗಳು ಎಲೆಗಳು ಮತ್ತು ರೆಂಬೆ ಕೊಂಬೆಗಳಿಂದ ತುಂಬಿಕೊಂಡಿದೆ. ಆದರೆ ಈ ಮರಗಳ ನಡುವೆ ಮೂರು ಮುಖಗಳಿವೆ. ಬಹಳ ಎಚ್ಚರಿಕೆ ನೋಡಿದರೆ ಈ ಮುಖಗಳು ನಿಮ್ಮ ಕಣ್ಣಿಗೆ ಕಾಣಿಸುತ್ತದೆ.

ಇದನ್ನೂ ಓದಿ:ಈ ಚಿತ್ರದಲ್ಲಿರುವ ಅನ್ಯಗ್ರಹ ಜೀವಿಯನ್ನು 15 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ

ಮೂರು ಮುಖಗಳನ್ನು ಕಂಡು ಹಿಡಿಯಲು ಸಾಧ್ಯವಾಯಿತೇ?

ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಮೂರು ಜನರ ಮುಖಗಳನ್ನು ಕಂಡುಹಿಡಿಯಬೇಕು, ಇದಕ್ಕಿರುವ ಸಮಯಾವಕಾಶ ಮೂವತ್ತು ಸೆಕೆಂಡುಗಳು ಮಾತ್ರ. ಈ ಫೇಸ್‌ಗಳನ್ನು ಕಂಡು ಹಿಡಿಯಲು ಕಷ್ಟ ಪಡುತ್ತಿದ್ದರೆ ಕಣ್ಣು ಅಗಲಿಸಿ ಚಿತ್ರ ನೋಡಿ. ಎಷ್ಟೇ ಸಮಯ ತೆಗೆದುಕೊಂಡರೂ ಒಗಟು ಬಿಡಿಸಲು ಸಾಧ್ಯವಾಗಿಲ್ಲವೇ ಈ ಚಿತ್ರದಲ್ಲಿ ಮೂರು ಜನರ ಮುಖಗಳನ್ನು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:41 am, Tue, 20 January 26