Optical illusion: ನೀವು ಜಾಣರಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಮುಖವನ್ನು ಕಂಡು ಹಿಡಿಯಿರಿ ನೋಡೋಣ

ಮೆದುಳಿನ ಚುರುಕುತನ ಹಾಗೂ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಆಪ್ಟಿಕಲ್‌ ಇಲ್ಯೂಷನ್‌ನಂತಹ ಒಗಟಿನ ಆಟಗಳು ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತದೆ. ಇದನ್ನು ಬಿಡಿಸುವುದರಲ್ಲಿ ಇರುವ ಮಜಾನೇ ಬೇರೆ. ಇದೀಗ ಅಂತಹದ್ದೇ ವೈರಲ್ ಆಗಿರುವ ಚಿತ್ರದಲ್ಲಿ ಅಡಗಿರುವ ಮುಖವನ್ನು ಪತ್ತೆಹಚ್ಚಬೇಕು. ನೀವು ಈ ಸವಾಲು ಸ್ವೀಕರಿಸಲು ಸಿದ್ಧವಿದ್ದೀರಾ.

Optical illusion: ನೀವು ಜಾಣರಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಮುಖವನ್ನು ಕಂಡು ಹಿಡಿಯಿರಿ ನೋಡೋಣ
ಆಪ್ಟಿಕಲ್‌ ಇಲ್ಯೂಷನ್
Image Credit source: Social Media

Updated on: Aug 08, 2025 | 1:39 PM

ಬಿಡುವಿಲ್ಲದ ಕೆಲಸದ ನಡುವೆ ಮೈಂಡ್ ರಿಲ್ಯಾಕ್ಸ್ ಆಗಿಸಲು ಹಾಡು ಕೇಳುವುದು ಇಲ್ಲವಾದರೆ ತಮ್ಮ ನೆಚ್ಚಿನ ಕೆಲಸವನ್ನು ಮಾಡುವತ್ತ ಗಮನ ಹರಿಸುತ್ತಾರೆ. ಇನ್ನು ಕೆಲವರು ಈ ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಚಿತ್ರವನ್ನು ಬಿಡಿಸಿ ತಮ್ಮ ಮೆದುಳಿಗೆ ಕೆಲಸ ನೀಡುತ್ತಾರೆ. ಇದು ಮೆದುಳಿನ ತೀಕ್ಷ್ಣತೆ, ಕಣ್ಣಿನ ಚುರುಕುತನವನ್ನು ಪರೀಕ್ಷಿಸುವ ಮೂಲಕ ವೈಯುಕ್ತಿಕ ಸಾಮರ್ಥ್ಯ ಎಷ್ಟಿದೆ ಎಂದು ತಿಳಿಸುತ್ತದೆ. ಇನ್ನು ಕೆಲವು ಚಿತ್ರಗಳು ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ನೀವೇನಾದ್ರೂ ಇಂತಹ ಒಗಟಿನ ಚಿತ್ರವನ್ನು ಬಿಡಿಸಲು ಆಸಕ್ತಿ ತೋರಿಸ್ತೀರಾ ಅಂತಾದ್ರೆ ಇದೀಗ ನೀವು ವೈರಲ್ ಆಗಿರುವ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದತ್ತ ಕಣ್ಣುಹಾಯಿಸಿ. ಇದರಲ್ಲಿರುವ ಸವಾಲು ಈ ಚಿತ್ರದಲ್ಲಿ ಅಡಗಿರುವ ಮುಖವನ್ನು (hidden face) ಗುರುತಿಸುವುದು. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ ಅಂತಾದ್ರೆ ಈಗಲೇ ನಿಮ್ಮ ಸಮಯ ಆರಂಭವಾಗುತ್ತದೆ.

ಈ ಚಿತ್ರದಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಹಚ್ಚಹಸಿರಾದ ಮರ ಹಾಗೂ ಅದರ ಪಕ್ಕದಲ್ಲಿ ನಿಂತ ಗರ್ಭಿಣಿ ಮಹಿಳೆಯನ್ನು ಕಾಣಬಹುದು. ಆದರೆ ಮೊದಲ ನೋಟದಲ್ಲೇ ಇದು ನಿಮ್ಮ ಕಣ್ಣಿಗೆ ಕಾಣಿಸುತ್ತದೆ. ಆದರೆ ಈ ಚಿತ್ರದಲ್ಲಿ ಮುಖವೊಂದು ಅಡಗಿದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿ ಉತ್ತರವನ್ನು ಹೇಳುವ ಸವಾಲನ್ನು ಇಲ್ಲಿ ನೀಡಲಾಗಿದೆ.

ಇದನ್ನೂ ಓದಿ
ಈ ಚಿತ್ರದಲ್ಲಿ ಅಡಗಿರುವ ಒಂಬತ್ತು ಪ್ರಾಣಿಗಳನ್ನು ಹುಡುಕಿ ನೋಡೋಣ
ಜಸ್ಟ್ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಕಾರನ್ನು ಕಂಡುಹಿಡಿಯಿರಿ
ಈ ಚಿತ್ರದಲ್ಲಿ ಅಡಗಿರುವ ಕುದುರೆಯನ್ನು ಹುಡುಕಿ ನೋಡೋಣ
ಈ ಚಿತ್ರದಲ್ಲಿ ಅಡಗಿರುವ ಮೂರನೇ ವ್ಯಕ್ತಿಯ ಮುಖವನ್ನು ಹುಡುಕಬಲ್ಲಿರಾ?

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಈ ಒಗಟಿನ ಚಿತ್ರವನ್ನು ಮೊದಲು ನೋಡಿದಾಗ ಹಚ್ಚ ಹಸಿರಿನ ಮರ ಹಾಗೂ ಗರ್ಭಿಣಿ ಮಹಿಳೆಯನ್ನು ಮಾತ್ರ ನೋಡುತ್ತೀರಿ. ಪ್ರಾರಂಭದಲ್ಲಿ ಈ ಚಿತ್ರ ನೋಡುತ್ತಿದ್ದಂತೆ ಇದು ನಿಮ್ಮ ಕಣ್ಣನ್ನು ಮೋಸಗೊಳಿಸಿ, ಭ್ರಮೆಯನ್ನು ಸಿಲುಕಿಸುತ್ತದೆ. ಹೀಗಾಗಿ ಯಾವುದೇ ಭ್ರಮೆಗೆ ಒಳಗಾಗದೇ ಈ ಚಿತ್ರವನ್ನು ಏಕ್ರಾಗತೆಯಿಂದ ಗಮನಿಸಿ ಒಗಟನ್ನು ಬಿಡಿಸಲು ಪ್ರಯತ್ನಿಸಿ.

ಇದನ್ನೂ ಓದಿ: Optical Illusion: ಹದ್ದಿನ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಒಂಬತ್ತು ಪ್ರಾಣಿಗಳನ್ನು ಹುಡುಕಿ ನೋಡೋಣ

ಉತ್ತರ ಇಲ್ಲಿದೆ

ಈ ಆಪ್ಟಿಕಲ್‌ ಇಲ್ಯೂಷನ್‌ ಒಗಟಿನ ಚಿತ್ರಗಳನ್ನು ಎಷ್ಟೇ ಬಿಡಿಸಲು ಪ್ರಯತ್ನಿಸಿದರೂ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲವೇ ಹೆಚ್ಚು ತಲೆಕೆಡಿಸಿಕೊಳ್ಳುವುದು ಬಿಡಿ. ಈ ಚಿತ್ರದಲ್ಲಿ ಮುಖ ಎಲ್ಲಿದೆ ಎಂದು ನಾವು ನಿಮಗೆ ಹೇಳುತ್ತೇವೆ. ನೀವು ಮೊಬೈಲ್ ಉಲ್ಟಾ ತಿರುಗಿಸಿ ಈ ಚಿತ್ರವನ್ನು ನೋಡಿ. ಆಗ ನಿಮಗೆ ಎರಡು ಕಣ್ಣುಗಳು ಹಾಗೂ ಮುಖವು ಕಾಣಿಸುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ