Optical Illusion: ನಿಮ್ಮ ಕಣ್ಣು ಚುರುಕಾಗಿದ್ದರೆ ಈ ಚಿತ್ರದಲ್ಲಿರುವ ಜಿಂಕೆಯನ್ನು ಕಂಡು ಹಿಡಿಯಿರಿ

ಆಪ್ಟಿಕಲ್‌ ಇಲ್ಯೂಷನ್‌ ಒಗಟಿನ ಚಿತ್ರಗಳು ಸಖತ್‌ ಟ್ರೆಂಡ್ ಆಗುತ್ತಿದೆ. ಈ ಚಿತ್ರಗಳು ಮೆದುಳಿಗೆ ವ್ಯಾಯಾಮವನ್ನು ನೀಡುವುದರ ಜೊತೆಗೆ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತವೆ. ಅಂತಹದ್ದೊಂದು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ಇದೀಗ ವೈರಲ್‌ ಆಗಿದ್ದು, ಈ ಪ್ರದೇಶದಲ್ಲಿ ಅಡಗಿ ಕುಳಿತಿರುವ ಜಿಂಕೆಯನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ.

Optical Illusion: ನಿಮ್ಮ ಕಣ್ಣು ಚುರುಕಾಗಿದ್ದರೆ ಈ ಚಿತ್ರದಲ್ಲಿರುವ ಜಿಂಕೆಯನ್ನು ಕಂಡು ಹಿಡಿಯಿರಿ
ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ
Image Credit source: Social Media

Updated on: Jan 15, 2026 | 10:22 AM

ಒಗಟಿನ ಪ್ರಶ್ನೆಗಳನ್ನು ಬಿಡಿಸುವುದು ಖುಷಿಕೊಟ್ಟರೂ ಇದು ನೂರಕ್ಕೆ ನೂರರಷ್ಟು ನಿಮ್ಮ ಮೆದುಳಿಗೆ ಕೆಲಸ ನೀಡುತ್ತವೆ. ಕೆಲವೊಮ್ಮೆ ಎಷ್ಟೇ ತಾಳ್ಮೆಯಿಂದ ಗಮನ ಹರಿಸಿದ್ರೂ ಉತ್ತರ ಕಂಡುಕೊಳ್ಳಲು ಸಾಧ್ಯವಾಗಲ್ಲ. ಇದೀಗ ವೈರಲ್ ಆಗಿರುವ ಆಪ್ಟಿಕಲ್‌ ಇಲ್ಯೂಷನ್‌ (optical illusion) ಚಿತ್ರದಲ್ಲಿ ಅಡಗಿರುವ ಜಿಂಕೆಯನ್ನು ಕಂಡು ಹಿಡಿಯುವ ಸವಾಲು ನಿಮ್ಮ ಮುಂದಿದೆ. ಆದರೆ ನೀವು ಈ ಒಗಟನ್ನು 5 ಸೆಕೆಂಡುಗಳಲ್ಲಿ ಬಿಡಿಸಲು ಸಾಧ್ಯವೇ ಎಂದು ನೋಡಿ.

ಈ ಚಿತ್ರ ನೋಡಿದಾಗ ಏನು ಕಾಣಿಸಿತು?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸುಲಭವಾಗಿ ಕಂಡರೂ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಚಿತ್ರವನ್ನು ನೋಡಿದಾಗ ನಿಮ್ಮ ಕಣ್ಣಿಗೆ ಕಾಣುವುದೇ ಹಿಮಭರಿತ ಪ್ರದೇಶ. ಈ ಪ್ರದೇಶದಲ್ಲಿ ಮೂವರು ಮಕ್ಕಳು ಮರಗಳ ನಡುವೆ ಆಟವಾಡುತ್ತಿದ್ದಾರೆ. ಇಲ್ಲಿ ಜಿಂಕೆಯೊಂದು ಅಡಗಿ ಕುಳಿತಿದೆ. ನೀವು ಎಚ್ಚರಿಕೆಯಿಂದ ನೋಡಿದ್ರೆ ಮಾತ್ರ ಈ ಜಿಂಕೆ ನಿಮ್ಮ ಕಣ್ಣಿಗೆ ಕಾಣಿಸುತ್ತದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಈ ಚಿತ್ರ ನೋಡಿ ಒಗಟು ಬಿಡಿಸಲು ಪ್ರಯತ್ನಿಸಿ. ನೀವು ಈ ಸವಾಲನ್ನು ಸ್ವೀಕರಿಸಿದ್ದೀರಿ ಎಂದು ನಾವು ಭಾವಿಸುತ್ತೇವೆ.

ಇದನ್ನೂ ಓದಿ: ಈ ಕಾಡಿನಲ್ಲಿ ಮರೆ ಮಾಡಲಾಗಿರುವ ಛತ್ರಿಯನ್ನು ಹುಡುಕಬಲ್ಲಿರಾ

ಜಿಂಕೆ ನಿಮ್ಮ ಕಣ್ಣಿಗೆ ಕಾಣಿಸಿತೇ?

ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಅಥವಾ ಮರೆ ಮಾಡಲಾಗಿರುವ ಗುಪ್ತ ವಸ್ತುಗಳನ್ನು ಹುಡುಕುವುದು ಹೇಳಿದ್ದಷ್ಟು ಸುಲಭ. ಹಿಮಭರಿತ ಪ್ರದೇಶದಲ್ಲಿ ಅಡಗಿ ಕುಳಿತಿರುವ ಜಿಂಕೆಯನ್ನು ಕಂಡು ಹಿಡಿಯುವುದು ಕಷ್ಟ ಎಂದು ನಿಮಗೆ ಈಗಾಗಲೇ ಅನಿಸಿರಬಹುದು. ನಿಮ್ಮ ಕಣ್ಣಿಗೆ ಜಿಂಕೆ ಕಾಣಿಸಿಲ್ಲ ಎಂದಾದರೆ ತಲೆ ಕೆಡಿಸಿಕೊಳ್ಳ ಬೇಡಿ. 5 ಸೆಕೆಂಡುಗಳೊಳಗೆ ಉತ್ತರ ಕಂಡುಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ. ಈ ಕೆಳಗಿನ ಚಿತ್ರದಲ್ಲಿ ಜಿಂಕೆ ಎಲ್ಲಿದೆ ಎಂದು ನಾವು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ