Video: ಫ್ರಾನ್ಸ್‌ಗಿಂತ ಭಾರತ ಉತ್ತಮ; ವಿದೇಶಿ ಮಹಿಳೆ ನೀಡಿದ ಕಾರಣ ನೋಡಿ
ಭಾರತಕ್ಕೆ ಬರುವ ವಿದೇಶಿಗರು ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯ, ಆಚಾರ ವಿಚಾರ, ಉಡುಗೆ ತೊಡುಗೆ ಹಾಗೂ ಸಂಸ್ಕೃತಿಗೆ ಮನಸೋಲುತ್ತಾರೆ. ಇದೀಗ ಭಾರತದಲ್ಲಿ ನೆಲೆಸಿರುವ ಫ್ರಾನ್ಸ್ ಮಹಿಳೆಯೂ ಭಾರತ ಉತ್ತಮ ಎನ್ನಲು ಐದು ಕಾರಣಗಳನ್ನು ನೀಡಿದ್ದಾರೆ. ಈ ಕುರಿತಾದ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ಈ ಮಹಿಳೆಯ ಮಾತನ್ನು ಒಪ್ಪಿಕೊಂಡಿದ್ದಾರೆ.

ಭಾರತ ಅಂದ್ರೆ ವಿದೇಶಿಗರಿಗೆ (foreigner) ಅದೇನೋ ಸೆಳೆತ. ಹೀಗಾಗಿ ವಿದೇಶಿಗರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ಪ್ರವಾಸಿ ತಾಣಗಳ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುತ್ತಾರೆ. ಇಲ್ಲಿನ ವಿವಿಧ ಖಾದ್ಯಗಳ ರುಚಿಯನ್ನು ಸವಿಯುತ್ತಾರೆ. ಇನ್ನು ಕೆಲ ವಿದೇಶಿಗರು ಒಂದು ಹೆಜ್ಜೆ ಮುಂದೆ ಹೋಗಿ ಇಲ್ಲಿಯೇ ನೆಲೆಸುತ್ತಾರೆ. ಇದೀಗ ಭಾರತದಲ್ಲಿ ಫ್ರೆಂಚ್ ಮೂಲದ ಮಹಿಳೆಯೂ (France woman) ಭಾರತದಲ್ಲಿ ವಾಸಿಸುತ್ತಿದ್ದು, ಭಾರತ ನನಗೆ ಇಷ್ಟವಾಗಿದ್ದು ಯಾಕೆ ಎನ್ನುವುದನ್ನು ವಿವರಿಸಿದ್ದಾರೆ. ಫ್ರಾನ್ಸ್‌ಗಿಂತ ಭಾರತ ಉತ್ತಮ ಎನ್ನಲು ಐದು ಕಾರಣಗಳನ್ನು ನೀಡಿದ್ದಾರೆ. ವಿದೇಶಿ ಮಹಿಳೆ ಭಾರತವನ್ನು ಹಾಡಿ ಹೊಗಳಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
freldaway ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವುದನ್ನು ಕಾಣಬಹುದು. ಭಾರತ ಇಷ್ಟ ಎನ್ನಲು ಕಾರಣವಾಗಿರುವ ಐದು ವಿಚಾರಗಳನ್ನು ಈ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಈ ವಿಡಿಯೋಗೆ ಥಿಂಗ್ಸ್ ಇಂಡಿಯಾ ಡಸ್ ಬೆಟರ್ ದೆನ್ ಫ್ರಾನ್ಸ್” ಎಂಬ ಶೀರ್ಷಿಕೆ ನೀಡಲಾಗಿದೆ. ಕೆಲಸಕ್ಕಾಗಿ ಭಾರತಕ್ಕೆ ಬಂದು ಇಲ್ಲಿ ನೆಲೆಸಿರುವ ಫ್ರಾನ್ಸ್ ಮಹಿಳೆಗೆ ಭಾರತದ ಬೀದಿಬದಿ ಆಹಾರ, ಭಾರತೀಯ ಆಕರ್ಷಕ ಆಭರಣಗಳು, ಆರಾಮದಾಯಕ ಬಸ್ ಹಾಗೂ ರೈಲು ಪ್ರಯಾಣ, ಕೂದಲ ಆರೈಕೆಗೆ ಅಳವಡಿಸಿಕೊಂಡ ಸಾಂಪ್ರದಾಯಿಕ ವಿಧಾನ ಹಾಗೂ ಭಾರತೀಯ ಅತಿಥಿ ಸತ್ಕಾರ ಈ ಎಲ್ಲಾ ಅಂಶಗಳು ಇಷ್ಟವಾಗಿದೆಯಂತೆ. ಫ್ರಾನ್ಸ್‌ನಲ್ಲಿ ಈ ಎಲ್ಲಾ ವಿಚಾರಗಳು ಕಾಣಸಿಗಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತನ್ನ ಸ್ನೇಹಿತೆಯ ಜತೆಗೆ ರಸ್ತೆ ದಾಟಲು ಹರಸಾಹಸ ಪಡುತ್ತಿರುವ ವಿದೇಶಿ ಮಹಿಳೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದ್ದಂತೆ ಒಬ್ಬ ಬಳಕೆದಾರ ಭಾರತೀಯನಾಗಿ ಹುಟ್ಟಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ಅಂಶಗಳು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ಭಾರತೀಯರನ್ನು ವಿದೇಶಿಗರು ಎಷ್ಟು ಗಮನ ಹರಿಸುತ್ತಾರೆ ಎನ್ನುವುದಕ್ಕೆ ಈ ಮಾತುಗಳೇ ಸಾಕ್ಷಿ. ನಿಜಕ್ಕೂ ಖುಷಿಯಾಗುತ್ತದೆ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
