
ಆಪ್ಟಿಕಲ್ ಇಲ್ಯೂಷನ್‌ನಂತಹ (optical illusion) ಈ ಒಗಟಿನ ಚಿತ್ರಗಳು ಭ್ರಮೆಯನ್ನು ಉಂಟು ಮಾಡಿ ನಿಮ್ಮ ಕಣ್ಣನ್ನು ಮೋಸಗೊಳಿಸುತ್ತದೆ.ಹೀಗಾಗಿ ಈ ಒಗಟನ್ನು ಬಿಡಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಹತ್ತರಲ್ಲಿ ಇಬ್ಬರೂ ಮಾತ್ರ ಈ ಒಗಟಿನ ಚಿತ್ರಗಳನ್ನು ಬಿಡಿಸಲು ಸಾಧ್ಯ. ಈ ಚಿತ್ರಗಳು ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಎಂದು ಸುಲಭವಾಗಿ ತಿಳಿದುಕೊಳ್ಳಲು ಸಹಾಯಕವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ಸರಳವಾಗಿ ಕಂಡರೂ ಟ್ರಿಕ್ಕಿಯಾಗಿದೆ. ಈ ಕಾಡಿನಲ್ಲಿ ಅಡಗಿರುವ ಜಿಂಕೆಯನ್ನು (deer) ಕಂಡುಹಿಡಿಯುವ ಸವಾಲು ನೀಡಲಾಗಿದೆ. ಹದಿನೈದು ಸೆಕೆಂಡುಗಳೊಳಗೆ ಈ ಪ್ರಾಣಿಯನ್ನು ಪತ್ತೆ ಹಚ್ಚಲು ಸಾಧ್ಯವೇ ಎಂದು ನೋಡಿ.
ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಕಾಡಿನ ಪ್ರದೇಶಗಳು ನಿಮ್ಮ ಕಣ್ಣಿಗೆ ಕಾಣಿಸುತ್ತದೆ. ದಟ್ಟವಾದ ಮರಗಳು ಹಾಗೂ ನೆಲದ ಮೇಲೆ ಒಣ ಎಲೆಗಳು ಬಿದ್ದಿವೆ. ಆದರೆ ಈ ಕಾಡಿನಲ್ಲಿ ಜಿಂಕೆ ಅಡಗಿಕೊಂಡಿದೆ. ಈ ಫೋಟೋದಲ್ಲಿರುವ ಸವಾಲು ಜಿಂಕೆ ಎಲ್ಲಿದೆ ಎಂಬುದನ್ನು ಕಂಡುಹಿಡಿಯುವುದು. 15 ಸೆಕೆಂಡುಗಳ ಒಳಗೆ ನೀವು ಆ ಜಿಂಕೆಯನ್ನು ಹುಡುಕಲು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ನೀವು ಹ್ಯಾಟ್ಸ್ ಆಫ್ ಹೇಳಲೇಬೇಕು. ಆದರೆ ಸಾಧ್ಯವಾದಷ್ಟು ಈ ಒಗಟನ್ನು ಬಿಡಿಸಲು ಪ್ರಯತ್ನಿಸಿ.
ಇದನ್ನೂ ಓದಿ:ನೀವು ಜಾಣರೇ, ಈ ಚಿತ್ರದಲ್ಲಿ ಅಡಗಿರುವ ಚಿರತೆಯನ್ನು ಕಂಡು ಹಿಡಿಯಿರಿ
ಕಾಡಿನಲ್ಲಿ ಅಡಗಿ ಕುಳಿತಿರುವ ಜಿಂಕೆಯನ್ನು ಕಂಡುಹಿಡಿಯುವುದು ಸುಲಭವೆಂದು ನೀವು ಭಾವಿಸಿರಬಹುದು. ಆದರೆ ಈ ಒಗಟು ಬಿಡಿಸಲು ಎಲ್ಲರಿಗೂ ಸಾಧ್ಯವಾಗಿಲ್ಲ ಎಂಬುದು ಗೊತ್ತಿದೆ. ಕೆಲವೇ ಜನರಿಗೆ ಮಾತ್ರ ಈ ಒಗಟನ್ನು 15 ಸೆಕೆಂಡುಗಳಲ್ಲಿ ಬಿಡಿಸಲು ಸಾಧ್ಯವಾಯಿತು. ನೀವು ಆ ಸಾಲಿಗೆ ಸೇರಿದ್ದೀರಾ ಅಂತಾದ್ರೆ ನಿಮಗೆ ಅಭಿನಂದನೆಗಳು.. ಆದರೆ ಒಗಟು ಬಿಡಿಸಲು ಸಾಧ್ಯವಾಗಿಲ್ಲ ಎನ್ನುವವರಿಗೆ ಜಿಂಕೆ ಎಲ್ಲಿದೆ ಎಂದು ನಾವು ಹೇಳುತ್ತೇವೆ. ಈ ಮೇಲಿನ ಫೋಟೋವನ್ನು ನೋಡಿ ಆ ಕಾಡಿನಲ್ಲಿ ಜಿಂಕೆ ಎಲ್ಲಿದೆ ಎಂದು ಗುರುತಿಸಿದ್ದೇವೆ. ಮರದ ಹಿಂಬದಿಯಲ್ಲಿ ಇಣುಕುತ್ತಿರುವ ಜಿಂಕೆಯೂ ನಿಮ್ಮ ಕಣ್ಣಿಗೆ ಬಿದ್ದಿತು ಎಂದು ಭಾವಿಸುತ್ತೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ