ದೃಷ್ಟಿಭ್ರಾಂತಿಯ ಇಮೇಜು: ಚಿತ್ರದಲ್ಲಿರುವ ನಾಯಿಯನ್ನು 17 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?

ಇಲ್ಲೊಂದು ದೃಷ್ಟಿಭ್ರಾಂತಿಗೊಳಿಸುವ ಚಿತ್ರ ಇದೆ. ವಿಷಯವೇನು ಗೊತ್ತಾ? ಈ ಚಿತ್ರದಲ್ಲಿ ಒಂದು ನಾಯಿ ಅಡಗಿದೆ. ನೀವು ನಾಯಿಯನ್ನು 17 ಸೆಕೆಂಡುಗಳಲ್ಲಿ ಹುಡುಕಿದ್ದೇಯಾದರೆ ನಿಸ್ಸಂದೇಹವಾಗಿ ನೀವು ಹದ್ದಿನ ಕಣ್ಣುಗಳನ್ನು ಹೊಂದಿದ್ದೀರಿ

ದೃಷ್ಟಿಭ್ರಾಂತಿಯ ಇಮೇಜು: ಚಿತ್ರದಲ್ಲಿರುವ ನಾಯಿಯನ್ನು 17 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?
ದೃಷ್ಟಿಭ್ರಾಂತಿಯ ಚಿತ್ರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 21, 2022 | 12:01 PM

ದೃಷ್ಟಿಭ್ರಾಂತಿಯ (optical illusion) ಚಿತ್ರಗಳು ನಮ್ಮ ದೃಷ್ಟಿ, ಮೆದುಳು ಸವಾಲೆಸೆಯುವುದಲ್ಲದೆ ನಿಮ್ಮ ಆಬ್ಸರ್ವೇಷನ್ ಸ್ಕಿಲ್ ಗಳನ್ನು (observation skills) ಪರೀಕ್ಷೆಗೊಡುತ್ತದೆ. ಈ ತೆರನಾದ ಚಿತ್ರಗಳು ನೈಜ್ಯವಾಗಿರುತ್ತವೆ, ನಿಮ್ಮ ಬುದ್ಧಿಮತ್ತೆಯನ್ನು ಪರೀಕ್ಷಿಸುತ್ತವೆ. ಧೃಷ್ಟಿಭ್ರಾಂತಿಯ ಚಿತ್ರಗಳ ಸೊಬಗು ಏನು ಗೊತ್ತಾ? ಅವು ನೋಡುಗನ ಏಕಾಗ್ರತೆಯನ್ನು (concentration) ಸ್ವಲ್ಪ ಸಮಯದವರೆಗೆ ಹಿಡಿದಿಡುತ್ತವೆ. ಈ ಚಿತ್ರಗಳು ನೆಟ್ಟಿಗರಿಗೆ ಮನರಂಜನೆ ಒದಗಿಸುವುದರ ಜೊತೆಗೆ ಅವರ ಸ್ನೇಹಿತರಿಗೆ ಮತ್ತು ಬಂಧು-ಬಳಗದವರಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಉತ್ತೇಜಿಸುವ ಮೂಲವಾಗಿ ಲಭ್ಯವಾಗುತ್ತವೆ. ಏಕಾಗ್ರತೆಯನ್ನು ಉತ್ತಮಪಡಿಸುವುದರ ಜೊತೆಗೆ ಆಬ್ಸರ್ವೇಷನ್ ಸ್ಕಿಲ್ ಗಳನ್ನು ಚುರುಕಿಗೊಳಿಸುವ ಸಾಮರ್ಥ್ಯ ದೃಷ್ಟಿಭ್ರಾಂತಿಯ ಚಿತ್ರಗಳಿಗಿದೆ. ಒಂದು ಸವಾಲಿಗೆ ನಿಮ್ಮನ್ನು ಅಣಿಗೊಳಿಸಲು ಇದನ್ನೆಲ್ಲ ಹೇಳಬೇಕಾಯಿತು. ರೆಡಿಯಾಗಿದ್ದೀರಿ ತಾನೆ?

Optical illusion image

ದೃಷ್ಟಿಭ್ರಾಂತಿಯ ಚಿತ್ರ

ಇಲ್ಲೊಂದು ದೃಷ್ಟಿಭ್ರಾಂತಿಗೊಳಿಸುವ ಚಿತ್ರ ಇದೆ. ವಿಷಯವೇನು ಗೊತ್ತಾ? ಈ ಚಿತ್ರದಲ್ಲಿ ಒಂದು ನಾಯಿ ಅಡಗಿದೆ. ನೀವು ನಾಯಿಯನ್ನು 17 ಸೆಕೆಂಡುಗಳಲ್ಲಿ ಹುಡುಕಿದ್ದೇಯಾದರೆ ನಿಸ್ಸಂದೇಹವಾಗಿ ನೀವು ಹದ್ದಿನ ಕಣ್ಣುಗಳನ್ನು ಹೊಂದಿದ್ದೀರಿ ಮತ್ತು ನಿಮ್ಮ ತೀಕ್ಷ್ಣದೃಷ್ಟಿಗೆ ನಮ್ಮದೊಂದು ಸಲಾಂ. ಸವಾಲನ್ನು ಎದುರಿಸಲು ತಯಾರಾಗಿದ್ದರೆ ತಡವೇಕೆ? 17 ಸೆಕೆಂಡುಗಳ ಟೈಂ ಸೆಟ್ ಮಾಡಿಕೊಂಡು ಶುರುವಿಟ್ಟುಕೊಳ್ಳಿ. ಯುವರ್ ಟೈಮ್ ಸ್ಟಾರ್ಟ್ಸ್ ನೌ!

ಇಲ್ಲಿರುವ ಚಿತ್ರದಲ್ಲಿ ಮನೆಯೊಂದರ ಹಿತ್ತಲನ್ನು ನೀವು ನೋಡಬಹುದು. ಮರದ ನಡುವೆ ಕಾಣುವ ಲೋಹದ ಕಂಬಿಯೊಂದರ ಮೇಲೆ ಎರಡು ಗೂಬೆಗಳು ಕೂತಿವೆ. ಆದರೆ ಅವು ನಿಜವಾದ ಗೂಬೆಗಳಲ್ಲ. ಮನೆಯ ಹಿತ್ತಲಿಗೆ ಸಂಪರ್ಕ ಕಲ್ಪಿಸುವ ಒಂದು ಕಿರಿದಾದ ರಸ್ತೆಯೂ ನಿಮಗೆ ಕಾಣುತ್ತದೆ. ಮೇಲೆ ಈಗಾಗಲೇ ಓದಿದಂತೆ ನಿಮ್ಮ ಮುಂದಿರುವ ಸವಾಲೆಂದರೆ ನಾಯಿಯನ್ನು ಹುಡುಕುವುದು. ನಿಮಗಿರುವ ಕಾಲಾವಕಾಶ ಕೇವಲ 17 ಸೆಕೆಂಡುಗಳು ಮಾತ್ರ.

ಇದನ್ನೂಓದಿ:   ಚೀನಾದಲ್ಲಿ ಕೋವಿಡ್ ಉಲ್ಬಣದ ನಡುವೆ ಅಗತ್ಯ ಕ್ರಮಗಳಿಗಾಗಿ ರಾಜ್ಯ,ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ಇದು ಸ್ವಲ್ಪ ಕಷ್ಟಕರ ಅಂತ ನಮಗೂ ಗೊತ್ತು. ನಾಯಿಯನ್ನು ಹುಡುಕಲು ನಿಮ್ಮ ದೃಷ್ಟಿ ನಿಜಕ್ಕೂ ತೀಕ್ಷ್ಣವಾಗಿರಬೇಕಾಗುತ್ತದೆ. ಇದು ನಿಸ್ಸಂಶಯವಾಗಿ ನಿಮ್ಮ ಬುದ್ಧಿಮತ್ತೆಯನ್ನು ಕಾಡುತ್ತದೆ. ಆದರೆ, ನಿಜಕ್ಕೂ ನಿಮ್ಮ ಬುದ್ಧಿಮತ್ತೆಯನ್ನು (ಐಕ್ಯೂ ಲೆವೆಲ್) ಪರೀಕ್ಷಿಸಬೇಕಾದರೆ ವೃತ್ತಿಪರರಿಂದ ವಿನ್ಯಾಸಗೊಳಿಸಲಾಗುವ ಐಕ್ಯೂ ಟೆಸ್ಟ್ ಗಳಲ್ಲಿ ನಿಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕು. ಓಕೆ ನಿಮ್ಮ 17 ಸೆಕೆಂಡುಗಳಲ್ಲಿ ಅರ್ಧಸಮಯ ಕಳೆಯಿತು ಮಾರಾಯ್ರೇ, ನಾಯಿ ಸಿಕ್ಕಿತಾ? ಪ್ರಯತ್ನಿಸಿ, ನಿಮ್ಮ ಏಕಾಗ್ರತೆಗೆ ಭಂಗವಾಗೋದು ಬೇಡ.

ಸಿಕ್ತಾ? ಸಮಯ ಮೀರುತ್ತಿದೆ ಮಾರಾಯ್ರೇ.

ಇದನ್ನೂಓದಿ:  ರಾಷ್ಟ್ರ ಭಾಷೆ ಕುರಿತ ಸುದೀಪ್ ಮಾತಿಗೆ ದನಿಗೂಡಿಸಿದ ರಮ್ಯಾ, ಆರ್​ಜಿವಿ; ಟ್ವಿಟರ್​ನಲ್ಲಿ ಟ್ರೆಂಡಿಂಗ್- ಇಲ್ಲಿದೆ ಪ್ರಕರಣದ ಸಂಪೂರ್ಣ ವಿವರ

ಸುಳಿವೇನಾದರೂ ಬೇಕಾ? ಓಕೆ, ಚಿತ್ರದ ಬಲಭಾಗದಲ್ಲಿ ನಾಯಿ ಅಡಗಿದೆ. ನಿಮ್ಮ ಬಲಭಾಗಕ್ಕೆ ದೃಷ್ಟಿಯನ್ನು ಕದಲಿಸಬೇಡಿ. ಇಮೇಜಿನ ಮೇಲ್ಭಾಗದಲ್ಲಿ ದೃಷ್ಟಿಯನ್ನು ಕೇಂದ್ರೀಕರಿಸಿ. ನಿಮಗೆ ನಾಯಿ ಕಾಣಿಸುತ್ತೆ. ಸಿಕ್ತಾ?

ನಿಮ್ಮ ಸಮಯ ಮುಕ್ತಾಯಗೊಂಡಿದೆ ಸ್ವಾಮಿ!

ನಾಯಿ ಎಲ್ಲಿ ಅಂತ ನಾವೇ ಹೇಳಬೇಕಾ? ಓಕೆ, ಕೆಳಗಿನ ಚಿತ್ರ ನೋಡಿ.

The dog is here!

ಇ;ಲ್ಲಿದೆ ನಾಯಿ!

ಏನು ಮಾರಾಯ್ರೇ, ನೀವು ನಾಯಿಯನ್ನು ಹುಡುಕಲೇ ಇಲ್ಲ. ಈಗ ಕಾಣಿಸುತ್ತಿದೆ ತಾನೆ?

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್