ರಾಷ್ಟ್ರ ಭಾಷೆ ಕುರಿತ ಸುದೀಪ್ ಮಾತಿಗೆ ದನಿಗೂಡಿಸಿದ ರಮ್ಯಾ, ಆರ್​ಜಿವಿ; ಟ್ವಿಟರ್​ನಲ್ಲಿ ಟ್ರೆಂಡಿಂಗ್- ಇಲ್ಲಿದೆ ಪ್ರಕರಣದ ಸಂಪೂರ್ಣ ವಿವರ

Kichcha Sudeep | Ajay Devgan | National Language: ‘ನ್ಯಾಶನಲ್ ಲಾಂಗ್ವೇಜ್’, ‘ಕನ್ನಡ’, ‘ಸ್ಟಾಪ್ ಹಿಂದಿ ಇಂಪೋಸಿಷನ್’ (ಹಿಂದಿ ಹೇರಿಕೆ ನಿಲ್ಲಿಸಿ), ‘ಅಜಯ್ ದೇವಗನ್’ ಸೇರಿದಂತೆ ಹಲವು ಕೀವರ್ಡ್​ಗಳು ಟ್ರೆಂಡಿಂಗ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಸುದೀಪ್ ಮಾತಿಗೆ ಚಿತ್ರರಂಗದ ತಾರೆಯರಾದ ರಮ್ಯಾ, ಸತೀಶ್ ನೀನಾಸಂ, ಶ್ರೀನಗರ ಕಿಟ್ಟಿ ಸೇರಿದಂತೆ ಹಲವರು ದನಿಗೂಡಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಾಷ್ಟ್ರ ಭಾಷೆ ಕುರಿತ ಸುದೀಪ್ ಮಾತಿಗೆ ದನಿಗೂಡಿಸಿದ ರಮ್ಯಾ, ಆರ್​ಜಿವಿ; ಟ್ವಿಟರ್​ನಲ್ಲಿ ಟ್ರೆಂಡಿಂಗ್- ಇಲ್ಲಿದೆ ಪ್ರಕರಣದ ಸಂಪೂರ್ಣ ವಿವರ
ಅಜಯ್ ದೇವಗನ್, ಕಿಚ್ಚ ಸುದೀಪ್, ಆರ್​ಜಿವಿ, ರಮ್ಯಾ
Follow us
TV9 Web
| Updated By: shivaprasad.hs

Updated on: Apr 27, 2022 | 10:00 PM

ಕಿಚ್ಚ ಸುದೀಪ್ (Kichcha Sudeep) ಹಾಗೂ ಅಜಯ್ ದೇವಗನ್ (Ajay Devgan) ನಡುವಿನ ‘ರಾಷ್ಟ್ರ ಭಾಷೆ’ ಕುರಿತ ಟ್ವೀಟ್ ಮಾತುಕತೆ ಇದೀಗ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ದೇಶಾದ್ಯಂತ ಅನೇಕರು ಸುದೀಪ್​ಗೆ ಬೆಂಬಲ ಸೂಚಿಸಿದ್ದು, ಹಲವರು ಅಜಯ್ ದೇವಗನ್ ಪರ ನಿಂತಿದ್ದಾರೆ. ಈರ್ವರೂ ತಾರೆಯರು ವಿಚಾರವನ್ನು ಅಲ್ಲಿಗೇ ನಿಲ್ಲಿಸೋಣ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಟ್ವಿಟರ್​ನಲ್ಲಿ ಈ ಕುರಿತ ಹಲವು ಅಂಶಗಳು ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿವೆ. ‘ನ್ಯಾಶನಲ್ ಲಾಂಗ್ವೇಜ್’, ‘ಕನ್ನಡ’, ‘ಸ್ಟಾಪ್ ಹಿಂದಿ ಇಂಪೋಸಿಷನ್’ (ಹಿಂದಿ ಹೇರಿಕೆ ನಿಲ್ಲಿಸಿ), ‘ಅಜಯ್ ದೇವಗನ್’ ಸೇರಿದಂತೆ ಹಲವು ಕೀವರ್ಡ್​ಗಳು ಟ್ರೆಂಡಿಂಗ್ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಸುದೀಪ್ ಮಾತಿಗೆ ಚಿತ್ರರಂಗದ ತಾರೆಯರಾದ ರಮ್ಯಾ (Ramya), ಸತೀಶ್ ನೀನಾಸಂ (Sathish Ninasam), ಶ್ರೀನಗರ ಕಿಟ್ಟಿ (Srinagar Kitty) ಸೇರಿದಂತೆ ಹಲವರು ದನಿಗೂಡಿಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೂಡ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ.

ಏನಿದು ಕಿಚ್ಚ ಸುದೀಪ್- ಅಜಯ್ ದೇವಗನ್ ಟ್ವೀಟ್ ಚರ್ಚೆ?

ಸುದೀಪ್ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹಿಂದಿ ಈಗ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ ಎಂದಿದ್ದರು. ಪ್ಯಾನ್ ಇಂಡಿಯಾ ಚಿತ್ರಗಳ ಹಿನ್ನೆಲೆಯಲ್ಲಿ ಮಾತನಾಡಿದ್ದ ನಟ, ದಕ್ಷಿಣದ ಚಿತ್ರಗಳಿಗೆ ಮಾತ್ರ ಪ್ಯಾನ್ ಇಂಡಿಯಾ ಎನ್ನುವ ಲೇಬಲ್ ಏಕೆ? ಹಿಂದಿ ಕೂಡ ಒಂದು ಭಾಷೆ. ಅವರೂ ದಕ್ಷಿಣದ ಚಿತ್ರಗಳಿಗೆ ಡಬ್ ಮಾಡಿಯೇ ಬಿಡುಗಡೆ ಮಾಡುತ್ತಾರೆ. ಆದರೆ ಆ ಚಿತ್ರಗಳನ್ನು ಏಕೆ ಪ್ಯಾನ್ ಇಂಡಿಯಾ ಎಂದು ಗುರುತಿಸುವುದಿಲ್ಲ? ನಮ್ಮದ್ದು ಮಾತ್ರ ಏಕೆ ಹೀಗೆ?’’ ಎಂದು ಪ್ರಶ್ನಿಸಿದ್ದರು. ಈ ವೇಳೆ ಸುದೀಪ್ ನುಡಿದಿದ್ದ ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಜಯ್ ದೇವಗನ್, ‘ಹಿಂದಿ ರಾಷ್ಟ್ರಭಾಷೆಯಲ್ಲದಿದ್ದರೆ ಏಕೆ ಡಬ್ ಮಾಡಿ ಹಿಂದಿಯಲ್ಲಿ ರಿಲೀಸ್ ಮಾಡುತ್ತೀರಿ? ಹಿಂದಿ ಎಂದೆಂದಗೂ ಮಾತೃಭಾಷೆ ಹಾಗೂ ರಾಷ್ಟ್ರ ಭಾಷೆಯೇ ಆಗಿರುತ್ತದೆ’ ಎಂದಿದ್ದರು.

ಇದಕ್ಕೆ ಉತ್ತರಿಸಿದ್ದ ಸುದೀಪ್, ‘‘ನಾನು ಬೇರೆಯದ್ದೇ ರೀತಿಯ ಸನ್ನಿವೇಶದಲ್ಲಿ ಇದನ್ನು ಹೇಳಿದ್ದೇನೆ. ನಮ್ಮ ದೇಶದ ಎಲ್ಲಾ ಭಾಷೆಗಳನ್ನೂ ಗೌರವಿಸುತ್ತೇನೆ. ನಾನು ಯಾರನ್ನೋ ನೋಯಿಸಲು, ಪ್ರಚೋದಿಸಲು ಅಥವಾ ಯಾವುದೇ ಚರ್ಚೆಯನ್ನು ಪ್ರಾರಂಭಿಸಲು ಹೇಳಿಕೆ ನೀಡಿಲ್ಲ. ಹಿಂದಿ ರಾಷ್ಟ್ರೀಯ ಭಾಷೆಯಲ್ಲವೆಂದು ಏಕೆ ಹೇಳಿದೆ ಎಂದು ನಿಮ್ಮನ್ನು ಖುದ್ದಾಗಿ ಭೇಟಿಯಾದಾಗ ತಿಳಿಸುತ್ತೇನೆ. ಸದ್ಯದಲ್ಲೇ ನಾವು ಭೇಟಿ ಆಗೋಣ’’ ಎಂದಿದ್ದರು.

ಇದರೊಂದಿಗೆ ಕಿಚ್ಚ ಹಿಂದಿ ರಾಷ್ಟ್ರಭಾಷೆ ಎಂದಿದ್ದ ಅಜಯ್ ದೇವಗನ್​ಗೆ ಟಾಂಗ್ ಕೂಡ ನೀಡಿದ್ದರು. ‘‘ನೀವು ಹಿಂದಿಯಲ್ಲಿ ಕಳುಹಿಸಿದ ಟೆಕ್ಸ್ಟ್‌ ನನಗೆ ಅರ್ಥವಾಯಿತು. ನನ್ನ ಪ್ರತಿಕ್ರಿಯೆಯನ್ನು ಕನ್ನಡ ಭಾಷೆಯಲ್ಲೇ ಟೈಪ್ ಮಾಡಿದರೆ, ಪರಿಸ್ಥಿತಿ ಏನಾಗಬಹುದು ಎಂದು ಆಶ್ಚರ್ಯ ಪಡುತ್ತಿದ್ದೆ. ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್’’ ಎಂದು ಬರೆದಿದ್ದರು. ನಂತರ ಅಜಯ್ ದೇವಗನ್ ಪ್ರತಿಕ್ರಿಯಿಸಿ, ಅನುವಾದ ಸಮಸ್ಯೆಯಿಂದ ಗೊಂದಲ ಉಂಟಾಗಿದೆ. ನಾನು ಇಡೀ ಚಿತ್ರರಂಗವನ್ನು ಒಂದು ಎಂದು ಭಾವಿಸುತ್ತೇನೆ. ಬೇರೆ ಭಾಷೆಗಳನ್ನು ಗೌರವಿಸುತ್ತೇವೆ, ಅಂತೆಯೇ ನಮ್ಮ ಭಾಷೆಯನ್ನೂ ಗೌರವಿಸಲು ಬಯಸುತ್ತೇವೆ. ಈ ನಡುವೆ ಅನುವಾದ ಮಾಡುವಾಗ ಅರ್ಥ ತಪ್ಪಾಗಿರಬಹುದು’’ ಎಂದು ಬರೆದಿದ್ದರು.

ಇದಕ್ಕೆ ಉತ್ತರಿಸಿದ್ದ ಕಿಚ್ಚ, ‘‘ಅನುವಾದ ಮತ್ತು ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ದೃಷ್ಟಿಕೋನಕ್ಕೆ ತಕ್ಕಂತೆ. ಆದ್ದರಿಂದಲೇ ಸಂಪೂರ್ಣ ವಿಷಯ ತಿಳಿದು ಪ್ರತಿಕ್ರಿಯೆ ನೀಡುವುದು ಮುಖ್ಯವಾಗುತ್ತದೆ. ಇದಕ್ಕೆ ನಿಮ್ಮನ್ನು ದೂಷಿಸುವುದಿಲ್ಲ. ಆದರೆ ನಿಮ್ಮಿಂದ ಕ್ರಿಯಾತ್ಮಕ ಕೆಲಸಗಳಿಗೆ ಪ್ರತಿಕ್ರಿಯೆ ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಹಾಗೂ ಸಂತೋಷಪಡುತ್ತಿದ್ದೆ’’ ಎಂದು ಬರೆದಿದ್ದರು.

ಈ ವಿಚಾರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅದರಲ್ಲೂ ಅಜಯ್ ದೇವಗನ್ ಹಿಂದಿ ರಾಷ್ಟ್ರಭಾಷೆ ಎಂದು ಸಾರಿದ್ದಕ್ಕೆ ತೀವ್ರ ಮಟ್ಟದಲ್ಲಿ ಟೀಕೆ ವ್ಯಕ್ತವಾಗಿದೆ. ಇದಕ್ಕೆ ಸುದೀಪ್ ನೀಡಿದ ಉತ್ತರವೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ತಾರೆಯರು ಹಾಗೂ ನಾಯಕರ ಪ್ರತಿಕ್ರಿಯೆ ಏನೇನು? ಇಲ್ಲಿದೆ ನೋಡಿ.

ಸಿದ್ದರಾಮಯ್ಯ ಹೇಳಿದ್ದೇನು?

ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ‘‘ಹಿಂದಿ ಎಂದಿಗೂ ನಮ್ಮ ರಾಷ್ಟ್ರೀಯ ಭಾಷೆಯಾಗುವುದಿಲ್ಲ. ದೇಶದ ಭಾಷಾ ವೈವಿಧ್ಯತೆಯನ್ನ ಗೌರವಿಸುವುದು ಪ್ರತಿ ಭಾರತೀಯನ ಕರ್ತವ್ಯ. ಪ್ರತಿಯೊಂದು ಭಾಷೆಯೂ ತನ್ನದೇ ಆದ ಶ್ರೀಮಂತ ಇತಿಹಾಸವನ್ನು ಹೊಂದಿದೆ. ನಾನೊಬ್ಬ ಕನ್ನಡಿಗನೆಂದು ಹೆಮ್ಮೆಪಡುತ್ತೇನೆ’’ ಎಂದು ಟ್ವೀಟ್ ಮಾಡಿದ್ದಾರೆ.

ಚಿತ್ರರಂಗದ ತಾರೆಯರ ಅಭಿಪ್ರಾಯವೇನು?

ನಟಿ ರಮ್ಯಾ ಟ್ವೀಟ್ ಮಾಡಿ, ‘‘ಅಜಯ್ ದೇವಗನ್ ಅವರೇ, ಹಿಂದಿ ರಾಷ್ಟ್ರಭಾಷೆ ಅಲ್ಲ. ಈ ಬಗೆಗಿನ ನಿಮ್ಮ ಅಜ್ಞಾನ ಅಚ್ಚರಿ ಮೂಡಿಸಿದೆ. ಕೆಜಿಎಫ್, ಆರ್​ಆರ್​ಆರ್​ ಹಿಂದಿ ಭಾಷಿಕ ರಾಜ್ಯಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವುದು ಕಲೆಗೆ ಯಾವುದೇ ಗಡಿಯಿಲ್ಲ ಎನ್ನುವುದನ್ನೂ ಸೂಚಿಸುತ್ತದೆ. ನೀವು ನಮ್ಮ ಚಿತ್ರಗಳನ್ನು ನೋಡಿ ಸಂತೋಷಪಡಿ, ನಾವು ನಿಮ್ಮ ಚಿತ್ರಗಳನ್ನು ನೋಡಿ ಖುಷಿಪಡುತ್ತೇವೆ’’ ಎಂದಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ ಟ್ವೀಟ್ ಮಾಡಿ, ‘ಜನಗಣಮನ ರಾಷ್ಟ್ರಗೀತೆಯನ್ನು ಅರ್ಥ ಮಾಡಿಕೊಳ್ಳಿ, ವಿವಿಧತೆಯಲ್ಲಿ ಏಕತೆಯನ್ನೇ ಅದು ಸಾರುವುದು’ ಎಂದು ಬರೆದಿದ್ದಾರೆ. ಸತೀಶ್ ನೀನಾಸಂ ಟ್ವೀಟ್ ಮಾಡಿ, ‘‘ಹತ್ತಾರು ವರ್ಷಗಳಿಂದ ನಿಮ್ಮ ಹಿಂದಿ ಸಿನಿಮಾಗಳು ಕನ್ನಡ ನೆಲದಲ್ಲಿ ಹಣ ಮಾಡಿವೆ, ಈಗಷ್ಟೆ ನಮ್ಮ ಕನ್ನಡ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ, ನಮ್ಮಂತೆ ನೀವು ನಮ್ಮನ್ನು, ನಮ್ಮ ಬಾಷೆಯನ್ನು ಗೌರವಿಸಿ. ಹಿಂದಿ ಅಂದಿಗೂ ಎಂದಿಗೂ ನಮ್ಮ ರಾಷ್ಟ್ರ ಭಾಷೆಯಲ್ಲ. ನಿಮ್ಮ ಧ್ವನಿಗೆ ನಮ್ಮ ಧ್ವನಿ’’ ಎಂದು ಸುದೀಪ್​ಗೆ ಬೆಂಬಲ ನೀಡಿದ್ದಾರೆ.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿ, ದಕ್ಷಿಣ, ಉತ್ತರ ಎಂಬ ಭೇದವಿಲ್ಲ. ಭಾರತವೊಂದೇ ಎಂದು ಬರೆದಿದ್ದಾರೆ. ಜತೆಗೆ ಸುದೀಪ್ ಮಾತಿಗೆ ಅವರೂ ಬೆಂಬಲ ನೀಡಿದ್ದಾರೆ. ನಟ ಶ್ರೀನಗರ ಕಿಟ್ಟಿ ಟ್ವೀಟ್ ಮಾಡಿ, ಹಿಂದಿ ರಾಷ್ಟ್ರಭಾಷೆಯಲ್ಲ ಎಂದಿದ್ದಾರೆ.

ಇದನ್ನೂ ಓದಿ: Kichcha Sudeep: ‘ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್’; ಹಿಂದಿ ರಾಷ್ಟ್ರಭಾಷೆ ಎಂದ ಅಜಯ್ ದೇವಗನ್​ಗೆ ಕಿಚ್ಚ ಸುದೀಪ್ ಪ್ರತ್ಯುತ್ತರ

Ajay Devgan: ಕಿಚ್ಚ ಸುದೀಪ್ ಮಾತಿಗೆ ಪ್ರತಿಕ್ರಿಯಿಸುತ್ತಾ ‘ಹಿಂದಿಯೇ ನಮ್ಮ ರಾಷ್ಟ್ರಭಾಷೆ’ ಎಂದ ಅಜಯ್ ದೇವಗನ್; ನೆಟ್ಟಿಗರಿಂದ ಕ್ಲಾಸ್

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ