Trending Optical Illusion : ಹೇಳಿಕೇಳಿ ಚಿಟ್ಟೆ. ಕಣ್ಣುಮುಚ್ಚಿ ತೆಗೆಯುವುದರೊಳಗೆ ಹಾರಿ ಹೋಗಿರುತ್ತದೆ. ಹಿಡಿಯುವುದು ಹೋಗಲಿ ಕಣ್ಣಿಗೆ ಸಿಗುವುದೇ ಕಷ್ಟ. ಅಷ್ಟು ವೇಗದ ಹಾರು ಅದರದು. ಚೆಂದಚೆಂದ ಬಣ್ಣ, ವಿನ್ಯಾಸಗಳಲ್ಲಿ ದೂರದಿಂದಲೇ ಆಕರ್ಷಿಸುವ ಈ ಚಿಟ್ಟೆಗಳದು ಒಂದು ಮೋಹಕ ಪ್ರಪಂಚವೇ. ಈಗ ಇಲ್ಲಿ ಗಿಡ ಮರಬಳ್ಳಿ, ನೀರಿನ ತೊರೆ, ಮೆಟ್ಟಿಲುಗಲು ಹೀಗೆ ರಮ್ಯವಾದ ಚಿತ್ರವೊಂದು ನಿಮ್ಮೆದುರಿಗಿದೆ. ಈ ತೊರೆಯಲ್ಲಿಯೇ ಚಿಟ್ಟೆ ಅಡಗಿದೆ. ಕಂಡುಹಿಡಿಯಬಲ್ಲಿರಾ?
ದಿನವೂ ಇಂಥ ಅನೇಕ ಸವಾಲುಗಳಿಗೆ ಉತ್ತರ ಕಂಡುಕೊಳ್ಳುವ ನಿಮಗೆ ಇದು ಅಷ್ಟು ಕಷ್ಟವಾಗಲಿಕ್ಕಿಲ್ಲ ಎಂದೇ ನಮ್ಮ ಭಾವನೆ. ನಿಮ್ಮ ಕಣ್ಣುಗಳ ಹಾದಿ ತಪ್ಪಿಸಲು ಸಾಕಷ್ಟು ಅವಕಾಶಗಳೂ ಈ ಚಿತ್ರದಲ್ಲಿವೆ. ಆದರೂ ಚಿಟ್ಟೆಯನ್ನು ನೀವು ಹುಡುಕಿಯೇ ಹುಡುಕುತ್ತೀರಿ. ಹೌದು ಈ ಸಲ ಕೊಟ್ಟ ಸಮಯಾವಕಾಶ ಐದೇ ಸೆಕೆಂಡು.
ಕಷ್ಟವಾಗುತ್ತಿದೆಯಾ ಹಾಗಿದ್ದರೆ ಹತ್ತು ಸೆಕೆಂಡುಗಳನ್ನು ತೆಗೆದುಕೊಳ್ಳಿ. ಸುಳಿವು ಬೇಕಾ? ಚಿತ್ರದ ಎಡಬದಿಯ ನೀರಿನಲ್ಲಿ ಗಮನಿಸಿ. ಈಗ ಗೊತ್ತಾಯಿತಾ? ಸರಿ ಕಮಲದ ಎಲೆಗಳನ್ನು ಗಮನಿಸಿ. ಸಿಕ್ಕಿತಾ ಚಿಟ್ಟೆ? ಹೀಗೆ ಹುಡುಕುತ್ತಲೇ ನೀವು ಉತ್ತರದ ಚಿತ್ರವನ್ನು ಗಮನಿಸಿರುತ್ತೀರಿ ಎಂಬುದು ನಮಗೆ ಗೊತ್ತು!
ಉತ್ತರ ಇಲ್ಲಿದೆ
ಮುಂದಿನ ಸಲ ಉತ್ತರವುಳ್ಳ ಚಿತ್ರದ ಮೇಲೆ ಕೈ ಇಟ್ಟು ಸವಾಲಿಗೆ ಉತ್ತರವನ್ನು ಹುಡುಕುವಿರೆಂದು ಭಾವಿಸುತ್ತೇವೆ. ಚಿಟ್ಟೆ ಅಂತೂ ಸಿಕ್ಕಿತಲ್ಲವಾ?
ಮತ್ತಷ್ಟೂ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:14 pm, Fri, 18 November 22