Optical Illusion : ಕೆಲ ದಿನಗಳ ಹಿಂದೆ ಮೊಸಳೆಯನ್ನು ಕಂಡುಹಿಡಿಯಲು ಕೇಳಲಾಗಿತ್ತು. ಅದಕ್ಕಿಂತ ಮೊದಲು ಕ್ಲಾಸ್ರೂಮಿನಲ್ಲಿ ಕಳೆದುಹೋದ ಮೇಷ್ಟ್ರ ಚಷ್ಮಾ ಕಂಡು ಹಿಡಿಯಲು ಕೇಳಲಾಗಿತ್ತು. ಮತ್ತೀಗ ಮತ್ತೊಂದು ಹೊಸ ಸವಾಲಿನೊಂದಿಗೆ ಬಂದಿದ್ದೇವೆ. ಇಂಥ ಆಪ್ಟಿಕಲ್ ಇಲ್ಲ್ಯೂಷನ್ಗಳ ಬಗ್ಗೆ ನೀವು ತಲೆ ಕೆರೆದುಕೊಂಡಾದರೂ ಉತ್ತರ ಕಂಡುಹಿಡಿಯಲು ಪ್ರಯತ್ನಿಸುತ್ತೀರಿ ಎನ್ನುವುದು ಗೊತ್ತಿದ್ದೇ ಈಗ ಲಿಪ್ಸ್ಟಿಕ್ ಹುಡುಕಿಕೊಂಡು ಎಂದು ನಿಮ್ಮ ಬಳಿ ಬಂದಿದ್ದೇವೆ.
ಈ ಅಡುಗೆಮನೆಯಲ್ಲಿ ಎಲ್ಲೋ ಒಂದು ಕಡೆ ಲಿಪ್ಸ್ಟಿಕ್ ಅಡಗಿದೆ. ಗೊತ್ತಲ್ಲ ಮೂರಿಂಚಿನ ಲಿಪ್ಸ್ಟಿಕ್ ಎಷ್ಟು ದೊಡ್ಡದಿರಲು ಸಾಧ್ಯ? ತುಸು ಕಷ್ಟವೇ ಇಷ್ಟು ದೊಡ್ಡ ಅಡುಗೆಮನೆಯಲ್ಲಿ ಅಷ್ಟು ಸಣ್ಣ ವಸ್ತುವನ್ನು ಹುಡುಕುವುದು.
ಈತನಕ ಕೇವಲ ಶೇ. 1 ಜನ ಮಾತ್ರ ಕೊಟ್ಟ ಅವಧಿಯಲ್ಲಿ ಹುಡುಕಲು ಶಕ್ತರಾಗಿದ್ದಾರೆ. ಉಳಿದಂತೆ ಇದೂ ಕೂಡ ಕಷ್ಟವೇ ಎಂದು ಕೈಚೆಲ್ಲಿ ಕುಳಿತಿದ್ದಾರೆ. ಕ್ಲ್ಯೂ ಕೊಟ್ಟರೆ ನೀವು ಹುಡುಕುತ್ತೀರಲ್ಲ?
ಸಿಂಕ್ ಸುತ್ತ ಮುತ್ತ ಗಮನಿಸಿ. ಈಗಲೂ ಗೊತ್ತಾಗಲಿಲ್ವಾ? ಸಿಂಕ್ನ ಬಲಬದಿಗೆ? ನೀವು ಊಹಿಸುತ್ತಿರುವುದು ನಮಗೆ ಅರ್ಥವಾಗುತ್ತದೆ. ಪುಟ್ಟಬಟ್ಟಲಿನಲ್ಲಿ ಕೆಂಪು ತುದಿಯಂಥದ್ದೇನೋ ಕಾಣುತ್ತಿದೆ. ಆದರೆ ಅದು ಲಿಪ್ಸ್ಟಿಕ್ ಅಲ್ಲ. ಹಾಗೇ ಒಂದು ಚಮಚ ಇರುವ ಬಟ್ಟಲಿದೆ ಗಮನಿಸಿದಿರಾ? ಹಾಂ ಆ ಬಟ್ಟಲೊಳಗೇ ಲಿಪ್ಸ್ಟಿಕ್ ಇರುವುದು.
ಆಗಾಗ ಮತ್ತಷ್ಟು ಇಂಥ ಕಷ್ಟಕರವಾದ ಆಪ್ಟಿಕಲ್ ಇಲ್ಲ್ಯೂಷನ್ ಚಿತ್ರಗಳನ್ನು ನಿಮಗಾಗಿ ತರುತ್ತೇವೆ. ಇಷ್ಟೇ ತಾಳ್ಮೆಯಿಂದ ನೀವು ಹುಡುಕುತ್ತೀರಲ್ಲ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ