ಜೋಕರಾದ ಪಾಕ್ ರಕ್ಷಣಾ ಸಚಿವ: ಭಾರತಕ್ಕೆ ನಾವಿರುವ ಸ್ಥಳ ಗೊತ್ತಾಗುತ್ತದೆ, ಅದಕ್ಕೆ ಅವರ ಡ್ರೋನ್​​ಗಳನ್ನು ತಡೆಯುತ್ತಿಲ್ಲ

ಪಹಾಲ್ಗಮ್ ನಲ್ಲಿ ನಡೆದ ಉಗ್ರರು ನಡೆಸಿದ ದಾಳಿಗೆ 26 ಭಾರತೀಯ ನಾಗರಿಕರು ಹತ್ಯೆಗೀಡಾಗಿದ್ದರು. ಈ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸೇನೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಹೌದು, ಭಾರತವನ್ನು (India) ಕೆಣಕಿದ ಬಳಿಕವಂತೂ ಪಾಕಿಸ್ತಾನದ (Pakistan) ಪರಿಸ್ಥಿತಿ ಊಹಿಸಲು ಅಸಾಧ್ಯ, ಸದ್ಯಕ್ಕಂತೂ ಪಾಕಿಸ್ತಾನವು ಸುಧಾರಿಸಿಕೊಳ್ಳಲು ಆಗದೇ ಒದ್ದಾಡುತ್ತಿದೆ. ಇದೀಗ ಪಾಕ್ ರಕ್ಷಣಾ ಸಚಿವ ಖವಾಜಾ ಅಸಿಫ್ ಅವರು ನಾವು ಭಾರತದ ಡ್ರೋನ್ ಗಳನ್ನು ತಡೆಯುತ್ತಿಲ್ಲ ಇದರ ಹಿಂದಿನ ಕಾರಣವನ್ನು ರಿವೀಲ್ ಮಾಡುವ ಮೂಲಕ ಇವರ ಈ ಹೇಳಿಕೆ ತಮಾಷೆಗೆ ಎಡೆ ಮಾಡಿಕೊಟ್ಟಿದೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ಜೋಕರಾದ ಪಾಕ್ ರಕ್ಷಣಾ ಸಚಿವ: ಭಾರತಕ್ಕೆ ನಾವಿರುವ ಸ್ಥಳ ಗೊತ್ತಾಗುತ್ತದೆ, ಅದಕ್ಕೆ ಅವರ ಡ್ರೋನ್​​ಗಳನ್ನು ತಡೆಯುತ್ತಿಲ್ಲ
ವೈರಲ್ ವಿಡಿಯೋ
Image Credit source: Twitter

Updated on: May 09, 2025 | 4:07 PM

ಪಹಲ್ಗಾಮ್ (pahalgam) ನಲ್ಲಿ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ್ (operation sindoor) ಮೂಲಕ ಉಗ್ರರ ಅಡಗುದಾಣಗಳನ್ನು ಉಡೀಸ್ ಮಾಡಿ ಪ್ರತೀಕಾರ ತೀರಿಸಿತ್ತು. ಈ ಹಿನ್ನಲೆಯಲ್ಲಿ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಇದನ್ನು ಭಾರತೀಯ ಪಡೆಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದು, ಇತ್ತ ಭಾರತೀಯ ಸೇನೆಯೂ ಇಸ್ಲಮಾಬಾದ್ ನಲ್ಲಿ ನಡೆಸಿದ ಭೀಕರ ದಾಳಿಗೆ ತತ್ತರಿಸಿದ ಪಾಕಿಸ್ತಾನ ಪರಿಸ್ಥಿತಿ ಹೇಳ ತೀರಾದಾಗಿದೆ. ಭಾರತ ನಿರಂತರವಾಗಿ ದಾಳಿ ಮಾಡುತ್ತಿದ್ದರೆ ಇತ್ತ ದೇಶ ರಕ್ಷಿಸುವ ಬದಲು ಪಾಕ್ ರಕ್ಷಣಾ ಸಚಿವ ಖವಾಜಾ ಅಸಿಫ್ (pakistan defense minister khawaja asif) ಹೇಳಿಕೆ ನೀಡಿದ್ದು ಇದು ತಮಾಷೆಗೆ ಕಾರಣವಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನಾವಿರುವ ಸ್ಥಳಗಳು ಬಹಿರಂಗಗೊಳ್ಳುತ್ತದೆ ಎನ್ನುವುದಕ್ಕೆ ನಾವು ಭಾರತದ ಡ್ರೋನ್ ಗಳನ್ನು ತಡೆಯುತ್ತಿಲ್ಲ ಎಂದಿದ್ದು ನೆಟ್ಟಿಗರು ಈ ಪಾಕ್ ರಕ್ಷಣಾ ಸಚಿವರ ಕಾಲೆಳೆದಿದ್ದಾರೆ.

Megh updates ಹೆಸರಿನ ಖಾತೆಯಲ್ಲಿ ಈ ವಿಡಿಯೋದಲ್ಲಿ ಪಾಕ್ ರಕ್ಷಣಾ ಸಚಿವ ಖವಾಜಾ ಅಸಿಫ್ ಅವರು ನಾವಿರುವ ಸ್ಥಳಗಳು ಬಹಿರಂಗಗೊಳ್ಳುತ್ತದೆ ಎನ್ನುವುದಕ್ಕೆ ನಾವು ಭಾರತದ ಡ್ರೋನ್ ಗಳನ್ನು ತಡೆಯುತ್ತಿಲ್ಲ ಎಂದು ಹೇಳಿರುವುದನ್ನು ನೋಡಬಹುದು. ಆದರೆ ಈ ವಿಡಿಯೋವನ್ನು ಶೇರ್ ಮಾಡಿಕೊಂದಿದ್ದು ಈ ದಿನದ ಅತ್ಯಂತ ಹಾಸ್ಯದಾಯಕ ವಿಷಯ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿ
ನಿದ್ದೆಯಲ್ಲಿದ್ದಾಗಲೇ ಪತ್ನಿ ಮೂಗನ್ನೇ ಕಚ್ಚಿ ತಿಂದ ಪತಿ
ತುಂಬು ಗರ್ಭಿಣಿ ಮಹಿಳೆಯ ಜಬರ್ದಸ್ತ್ ಡಾನ್ಸ್ ನೋಡಿ ಬೆರಗಾದ ನೆಟ್ಟಿಗರು
ಪಾಕ್ ಜನರಿಗೆ ನಕ್ಷತ್ರ ನೋಡಿದ್ರು ಭಾರತ ಕ್ಷಿಪಣಿಯಂತೆ ಕಾಣುತ್ತಿದೆ
ಸುದ್ದಿ ನಿರೂಪಕಿ ಕೇಳಿದ ಪ್ರಶ್ನೆಗೆ ತಬ್ಬಿಬಾದ ಪಾಕ್ ರಕ್ಷಣಾ ಸಚಿವ

ಇದನ್ನೂ ಓದಿ : ಡಿವೋರ್ಸ್ ಕೇಳಿದ್ದ ಪತ್ನಿ ಮುಂದೆ ಹಾಡು ಹಾಡಿ ಆಕೆಯ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ಈಗಾಗಲೇ ಮೂವತ್ತನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಇದು ಒಂದು ತಂತ್ರದಂತೆ ಕಾಣಿಸುತ್ತದೆ, ಈ ಪಾಕ್ ಜನರು ನಿಜಕ್ಕೂ ಬುದ್ಧಿವಂತರು’ ಎಂದಿದ್ದಾರೆ. ಇನ್ನೊಬ್ಬರು, ‘ಪಾಕ್ ರಕ್ಷಣಾ ಸಚಿವರು ಯಾಕಿಷ್ಟು ಮೂರ್ಖರು’ ಎಂದು ಕೇಳಿದ್ದಾರೆ. ಮತ್ತೊಬ್ಬರು, ‘ಅವರು ಈ ರೀತಿ ಹೇಳಿಕೆಗಳನ್ನು ಆಗಾಗ ನೀಡುತ್ತಾರೆ. ಇನ್ನು ಸ್ವಲ್ಪ ಸಮಯದಲ್ಲೇ ಅವರು ಸಾಮಾಜಿಕ ಮಾಧ್ಯಮದಲ್ಲಿ ಅವರು ಕ್ಷಿಪಣಿಗಳನ್ನು ತಡೆಹಿಡಿದರು ಎಂದು ಹೇಳಲಿದ್ದಾರೆ’ ಎಂದು ವ್ಯಂಗ್ಯ ವಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ