Video: ಸ್ಪ್ಯಾನರ್‌ ಹಿಡಿದು ರೈಲ್ವೆ ಹಳಿಯಲ್ಲಿ ಮಕ್ಕಳ ಕಿತಾಪತಿ; ವೈರಲ್‌ ಆಯ್ತು ವಿಡಿಯೋ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 30, 2024 | 2:57 PM

ರೈಲ್ವೆ ಹಳಿಗಳ ಮೇಲೆ ಮರದ ದಿಮ್ಮಿ ಅಥವಾ ಕಲ್ಲುಗಳನ್ನಿಟ್ಟು ರೈಲು ಬರುವ ಸಂದರ್ಭದಲ್ಲಿ ಹಳಿ ತಪ್ಪಿಸಲು ಪ್ರಯತ್ನಿಸುವ ನೀಚರ ಸುದ್ದಿಗಳ ಬಗ್ಗೆ ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಇದೀಗ ಅಂತಹದ್ದೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸಣ್ಣ ಪುಟ್ಟ ಮಕ್ಕಳೇ ಕೈಯಲ್ಲಿ ಸ್ಪ್ಯಾನರ್‌ ಹಿಡಿದು ರೈಲ್ವೆ ಹಳಿಯ ಫಿಶ್‌ಪ್ಲೇಟ್‌ ತಪ್ಪಿಸಲು ಯತ್ನಿಸಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಮಕ್ಕಳ ಈ ಈ ದುಶ್ಕೃತ್ಯವನ್ನು ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.

Video: ಸ್ಪ್ಯಾನರ್‌ ಹಿಡಿದು ರೈಲ್ವೆ ಹಳಿಯಲ್ಲಿ ಮಕ್ಕಳ ಕಿತಾಪತಿ; ವೈರಲ್‌ ಆಯ್ತು ವಿಡಿಯೋ
ವೈರಲ್ ವಿಡಿಯೋ
Follow us on

ಕೆಲ ದುಷ್ಕರ್ಮಿಗಳು ಬೇಕು ಬೇಕಂತಲೇ ಸರಿಯಾರಿ ರೈಲು ಬರುವ ಸಂದರ್ಭದಲ್ಲಿ ಹಳಿ ತಪ್ಪಿಸುವ ಮೂಲಕ ಅದೆಷ್ಟೋ ಅಮಾಯಕರ ಪ್ರಾಣವನ್ನೇ ಬಲಿ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಎಷ್ಟೇ ಎಚ್ಚರಿಕೆ ನೀಡಿದ್ರೂ ಇವತ್ತಿಗೂ ಕೂಡಾ ಕೆಲ ದುಷ್ಟರು ರೈಲ್ವೆ ಹಳಿಯ ಮೇಲೆ ಮರದ ದಿಮ್ಮಿ, ಕಲ್ಲು ಅಥವಾ ಇನ್ಯಾವುದೇ ಅಪಾಯಕಾರಿ ವಸ್ತುಗಳನ್ನಿಟ್ಟು ಹಳಿ ತಪ್ಪಿಸುವ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಇಂತಹದ್ದೇ ಆಘಾತಕಾರಿ ಘಟನೆಯೊಂದು ಇದೀಗ ನಡೆದಿದ್ದು, ಸಣ್ಣ ಪುಟ್ಟ ಮಕ್ಕಳೇ ಕೈಯಲ್ಲಿ ಸ್ಪ್ಯಾನರ್‌ ಹಿಡಿದು ರೈಲ್ವೆ ಹಳಿಯ ಫಿಶ್‌ಪ್ಲೇಟ್ ತಪ್ಪಿಸಯ ಯತ್ನಿಸಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಮಕ್ಕಳ ಈ ಈ ದುಶ್ಕೃತ್ಯವನ್ನು ಕಂಡು ನೆಟ್ಟಿಗರು ಶಾಕ್‌ ಆಗಿದ್ದಾರೆ.

ನಿಖರವಾಗಿ ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು ಎಂದು ಹೇಳಲಾಗುತ್ತಿದೆ. ಸ್ಪ್ಯಾನರ್‌ ಹಿಡಿದು ರೈಲ್ವೆ ಹಳಿಯ ಬೆಲೆಬಾಳುವ ವಸ್ತುಗಳನ್ನು ಕದಿಯಲು ಪ್ರಯತ್ನಿಸಿದ ಈ ಮಕ್ಕಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಳಲಾಗಿದೆಯಂತೆ. ಈ ಕುರಿತ ಪೋಸ್ಟ್‌ ಒಂದನ್ನು ರಾಕೇಶ್‌ ಕೃಷ್ಣನ್‌ ಸಿಂಹ (ByRakeshSimha) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಒಂದಷ್ಟು ಮಕ್ಕಳು ಕೈಯಲ್ಲಿ ಸ್ಪ್ಯಾನರ್‌ ಹಿಡಿದು ಬಂದು ಹಳಿಯ ಫಿಶ್‌ಪ್ಲೇಟ್‌ಗಳನ್ನು ಕಿತ್ತು ಹಾಕುತ್ತಿರುವಂತ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಡೆಲಿವರಿ ಬಾಯ್‌ ಟು ಫ್ಯಾಶನ್‌ ಮಾಡೆಲ್;‌ ಇದು ಸಾಮಾನ್ಯ ಹುಡುಗನ ಅಸಾಮಾನ್ಯ ಕಥೆ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ

ಆಗಸ್ಟ್‌ 29 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜಕ್ಕೂ ಈ ದೃಶ್ಯ ಭಯಾನಕವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 2:57 pm, Fri, 30 August 24