ಭಿಕ್ಷುಕರು ಅಂದರೆ ತಿನ್ನಲು ಗತಿ ಇಲ್ಲದ, ಕೈಯಲ್ಲಿ ಬಿಡುಗಾಸು ಇಲ್ಲದ, ಉಳಿದುಕೊಳ್ಳಲು ಒಂದು ಸ್ವಂತ ಸೂರು ಇಲ್ಲದೆ ಜನರ ಮುಂದೆ ಕೈ ಚಾಚುವ ವ್ಯಕ್ತಿಗಳು ಎಂದು ಹಲವರು ಅಂದುಕೊಳ್ಳುತ್ತಾರೆ. ಮತ್ತು ಅವರನ್ನು ಕೈಲಾಗದವರು ಎಂದು ಅಸಡ್ಡೆಯ ಮಾತುಗಳನ್ನಾಡುತ್ತಾರೆ. ಆದ್ರೆ ಇಲ್ಲೊಂದು ಭಿಕ್ಷುಕ ಕುಟುಂಬ ತಾವು ಭಿಕ್ಷೆ ಬೇಡಿ ಸಂಪಾದಿಸಿದ ಹಣದಲ್ಲಿಯೇ ಬರೋಬ್ಬರಿ 20 ಸಾವಿರ ಮಂದಿಗೆ ಔತಣಕೂಟವನ್ನು ಏರ್ಪಡಿಸಿದೆ. ಹೌದು ಅಜ್ಜಿಯ ಪುಣ್ಯ ತಿಥಿಯ ಸಲುವಾಗಿ ಭಿಕ್ಷುಕ ಕುಟುಂಬ 1.25 ಕೋಟಿ ರೂ. ಖರ್ಚು ಮಾಡಿ ಊರ ಮಂದಿಗೆ ಔತಣಕೂಟವನ್ನು ಏರ್ಪಡಿಸಿದ್ದು, ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದ್ದು, ಇಲ್ಲಿನ ಗುಜ್ರನ್‌ವಾಲಾದಲ್ಲಿ ಭಿಕ್ಷುಕ ಕುಟುಂಬವೊಂದು 1.25 ಕೋಟಿ ಪಾಕಿಸ್ತಾನಿ ರೂಪಾಯಿ (ಪಿಕೆಆರ್) ಖರ್ಚು ಮಾಡಿ ಬರೋಬ್ಬರಿ 20 ಸಾವಿರ ಮಂದಿಗೆ ಹಬ್ಬದೂಟವನ್ನು ಏರ್ಪಡಿಸಿದೆ. ಅಜ್ಜಿಯ ಮರಣದ 40 ನೇ ದಿನದ ಪುಣ್ಯತಿಥಿಯ ಅಂಗವಾಗಿ ಈ ಕುಟುಂಬ ಊರ ಮಂದಿಗೆ ಈ ಭರ್ಜರಿ ಔತಣಕೂಟ ಏರ್ಪಡಿಸಿದೆ.
گوجرانوالہ میں جھگی واسوں کینگرہ برادری کے بچوں نے اپنی والدہ کے چالیسویں کی تقریبات کو تاریخی بنا دیا
گوجرانوالہ جھگی واسوں کے چھے بچوں نے اپنی والدہ کے چالیسویں کی تقریب پر سوا کروڑ روپے خرچ کیے، 120 سالہ سکینہ بی بی کے 40 ویں کی تقریب میں250 بکرے بھی ذبح کیے گئے۔ چالیسویں کی… pic.twitter.com/ceoevkgd9M
— 365 News (@365newsdotpk) November 15, 2024
ವರದಿಗಳ ಪ್ರಕಾರ ಈ ಸಮಾರಂಭವು ಗುಜ್ರಾನ್‌ವಾಲಾದಲ್ಲಿನ ರಾಹ್ವಾಲಿ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದು, ಬರೋಬ್ಬರಿ 20 ಸಾವಿರ ಜನರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಜೊತೆಗೆ ಅಥಿತಿಗಳು ಹೋಗಿ ಬರಲು ಸುಮಾರು 2,000 ವಾಹನಗಳ ವ್ಯವಸ್ಥೆಯನ್ನು ಕೂಡಾ ಮಾಡಲಾಗಿತ್ತು. ಭಿಕ್ಷುಕ ಕುಟುಂಬ ಅಜ್ಜಿಯ ಪುಣ್ಯ ತಿಥಿಗೆ ಹಬ್ಬದ ಮೆನುವನ್ನೇ ಸಿದ್ಧಪಡಿಸಿತ್ತು. ಪಾಕಿಸ್ತಾನದ ಸಾಂಪ್ರದಾಯಿಕ ತಿನಿಸುಗಳಾದ ಸಿರಿ ಪಾಯ, ಮುರಬ್ಬ, ನಾನ್ ಮಟರ್ ಗಂಜ್ ಸೇರಿದಂತೆ ಹಲವಾರು ಖಾದ್ಯಗಳನ್ನು ತಯಾರಿಸಿದ್ದರು. ಜೊತೆಗೆ ಹಬ್ಬದೂಟಕ್ಕೆ ಸುಮಾರು 250 ಮೇಕೆಗಳನ್ನು ಕಡಿಯಲಾಗಿತ್ತು. ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದ ಈ ಕುಟುಂಬ ಇಷ್ಟು ದೊಡ್ಡ ಔತಣಕೂಟವನ್ನು ಏರ್ಪಡಿಸಿದ್ದನ್ನು ಕಂಡು ಎಲ್ಲರೂ ಶಾಕ್ ಆಗಿದ್ದಾರೆ.
ಈ ಕುರಿತ ವಿಡಿಯೋವನ್ನು 365newsdotpk ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಜ್ಜಿಯ ಪುಣ್ಯತಿಥಿಯ ಸಲುವಾಗಿ ಪಾಕಿಸ್ತಾನದ ಭಿಕ್ಷುಕ ಕುಟುಂಬ 20 ಸಾವಿರ ಜನಕ್ಕೆ ಭರ್ಜರಿ ಭೋಜನ ತಯಾರಿಸುತ್ತಿರುವ ದೃಶ್ಯವನ್ನು ಕಾಣಬಹುದು. ಈ ದೃಶ್ಯವನ್ನು ಕಂಡು ಅಲ್ಲಾ ಭಿಕ್ಷುಕರಿಗೆ ಇಷ್ಟೆಲ್ಲಾ ಖರ್ಚು ಮಾಡಿ ಹಬ್ಬದೂಟವನ್ನು ಏರ್ಪಡಿಸಲು ಸಾಧ್ಯವೇ ಎಂದು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ