Viral: ಅಯ್ಯೋ ಗುಂಡು ಹಾರಿಸ್ಬೇಡಿ, ಇದು ಜಸ್ಟ್‌ ಪ್ರಾಂಕ್, ತಮಾಷೆ ಮಾಡಲು ಹೋಗಿ ತಾವೇ ಹಳ್ಳಕ್ಕೆ ಬಿದ್ದ ಯುವಕರು

ತಮಾಷೆಗಾಗಿ ಏನೇನೋ ಪ್ರಾಂಕ್‌ ವಿಡಿಯೋಗಳನ್ನು ಮಾಡಲು ಹೋಗಿ ಪಜೀತಿಗೆ ಸಿಲುಕಿದ, ಪ್ರಾಣವನ್ನೇ ಕಳೆದುಕೊಂಡವರ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಬೀದಿ ಬದಿಯಲ್ಲಿ ಕುಳಿತಿದ್ದ ಹುಡುಗನ ಮೊಬೈಲ್‌ ಕಳ್ಳತನ ಮಾಡುವಂತೆ ಯುವಕರಿಬ್ಬರು ಪ್ರಾಂಕ್‌ ಮಾಡಿದ್ದಾರೆ. ಅಲ್ಲೇ ನಿಂತಿದ್ದ ಗಾರ್ಡ್‌ ಇದು ಕಳ್ಳರೇ ಇರಬಹುದೆಂದು ಆ ಇಬ್ಬರಿಗೂ ಗನ್‌ನಿಂದ ಶೂಟ್‌ ಮಾಡಲು ಹೋಗಿದ್ದಾನೆ. ಪ್ರಾಂಕ್‌ ಮಾಡಲು ಹೋಗಿ ಪಜೀತಿಗೆ ಸಿಲುಕಿದ ಯುವಕರಿಬ್ಬರ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ಅಯ್ಯೋ ಗುಂಡು ಹಾರಿಸ್ಬೇಡಿ, ಇದು ಜಸ್ಟ್‌ ಪ್ರಾಂಕ್, ತಮಾಷೆ ಮಾಡಲು ಹೋಗಿ ತಾವೇ ಹಳ್ಳಕ್ಕೆ ಬಿದ್ದ ಯುವಕರು
ವೈರಲ್​​ ವಿಡಿಯೋ
Edited By:

Updated on: Sep 09, 2024 | 2:54 PM

ಈಗೀಗ ಇನ್‌ಸ್ಟಾಗ್ರಾಮ್‌, ಯುಟ್ಯೂಬ್‌ನಲ್ಲಿ ಪ್ರಾಂಕ್‌ ವಿಡಿಯೋ ಕಂಟೆಂಟ್‌ಗಳನ್ನು ಮಾಡುವವರ ಸಂಖ್ಯೆ ಹೆಚ್ಚಾಗಿದೆ. ದಾರಿಯಲ್ಲಿ ಹೋಗುವವರಿಗೆ ಪ್ರಾಂಕ್‌ ಮಾಡಿ ನಂತರ ಆ ತಮಾಷೆಯ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಈಗ ಒಂದು ಟ್ರೆಂಡ್‌ ಆಗಿಬಿಟ್ಟಿದೆ. ಕೆಲವರಂತೂ ಕ್ಯಾಮೆರಾ ಹಿಡಿದುಕೊಂಡು ಹೋಗಿ ಇತರರಿಗೆ ಬಕ್ರಾ ಮಾಡಲು ಹೋಗಿ ತಾವೇ ಹಳ್ಳಕ್ಕೆ ಬೀಳುತ್ತಾರೆ. ಇನ್ನೂ ತಮಾಷೆ ಮಾಡಲು ಹೋಗಿ ಸಾರ್ವಜನಿಕರ ಕೈಯಿಂದ ವದೆ ತಿಂದವರೂ ಇದ್ದಾರೆ. ಇದೀಗ ಇಲ್ಲಿಬ್ರು ಯುವಕರು ಕೂಡಾ ಪ್ರಾಂಕ್‌ ಮಾಡಲು ಹೋಗಿ ತಾವೇ ಪಜೀತಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಯುವಕರಿಬ್ಬರು ಬೀದಿ ಬದಿಯಲ್ಲಿ ಯುಳಿತಿದ್ದ ಹುಡುಕನೊಬ್ಬನ ಮೊಬೈಲ್‌ ಕಸಿದುಕೊಂಡು ಕಳ್ಳತನದ ಪ್ರಾಂಕ್‌ ಮಾಡಲು ಹೋಗಿದ್ದಾರೆ. ಅಲ್ಲೇ ಗನ್‌ ಹಿಡಿದುಕೊಂಡು ನಿಂತಿದ್ದ ಗಾರ್ಡ್‌ ಇವರಿಬ್ಬರೂ ಕಳ್ಳರೇ ಇರ್ಬೇಕು ಎಂದು ಅವರಿಬ್ಬರಿಗೂ ಗನ್‌ ಹಿಡಿದು ಶೂಟ್‌ ಮಾಡಲು ಮುಂದಾಗಿದ್ದಾನೆ. ಇದರಿಂದ ಭಯಗೊಂಡ ಆ ಇಬ್ಬರೂ ಯುವಕರೂ ಇದೆಲ್ಲಾ ಪ್ರಾಂಕ್‌ ಸ್ವಾಮಿ ಎಂದು ಸತ್ಯ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದು ಪಾಕಿಸ್ತಾನದಲ್ಲಿ ನಡೆದ ತಮಾಷೆಯ ಘಟನೆಯಾಗಿದೆ ಎಂದು ಹೇಳಲಾಗುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

 


ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಬೈಕ್‌ನಲ್ಲಿ ಬಂದಂತಹ ಯುವಕರಿಬ್ಬರೂ ಅಲ್ಲೇ ಅಂಗಡಿಯೊಂದರ ಪಕ್ಕ ಕುಳಿತಿದ್ದ ಹುಡುಗನ ಮೊಬೈಲ್‌ ಕಸಿದುಕೊಂಡು ಕಳ್ಳತನದ ಪ್ರಾಂಕ್‌ ಮಾಡುವಂತಹ ದೃಶ್ಯವನ್ನು ಕಾಣಬಹುದು. ಅಲ್ಲೇ ಗನ್‌ ಹಿಡಿದುಕೊಂಡು ನಿಂತಿದ್ದ ಗಾರ್ಡ್‌ ಇವರಿಬ್ಬರೂ ಕಳ್ಳರೇ ಇರ್ಬೇಕು ಎಂದು ಅವರಿಬ್ಬರಿಗೂ ಗನ್‌ ಹಿಡಿದು ಶೂಟ್‌ ಮಾಡಲು ಮುಂದಾಗಿದ್ದಾನೆ. ಇದರಿಂದ ಭಯಗೊಂಡ ಆ ಇಬ್ಬರೂ ಯುವಕರು ಇದೆಲ್ಲಾ ಪ್ರಾಂಕ್‌ ಸ್ವಾಮಿ, ಅಪ್ಪಿ ತಪ್ಪಿ ಶೂಟ್‌ ಮಾಡ್ಬೇಡಿ ಎಂದು ಹೇಳಿ, ಕ್ಯಾಮೆರಾವನ್ನು ತೋರಿಸಿ ಇದೆಲ್ಲಾ ಪ್ರಾಂಕ್‌ ಎಂದು ಹೇಳುತ್ತಾರೆ.

ಇದನ್ನೂ ಓದಿ:  ಥೂ ಇವನೆಂಥಾ ಮಗ, ನಡುರಸ್ತೆಯಲ್ಲಿಯೇ ಹೆತ್ತ ತಂದೆ-ತಾಯಿಗೆ ಚಪ್ಪಲಿಯಲ್ಲಿ ಥಳಿಸಿದ ಪಾಪಿ

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಮಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಗುಂಡು ಹಾರಿಸಿದ್ರೆ ಚೆನ್ನಾಗಿರೋದುʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದೆಲ್ಲಾ ಸ್ಕ್ರಿಪ್ಟೆಡ್‌ ವಿಡಿಯೋʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ