Viral: ಥೂ ಇವನೆಂಥಾ ಮಗ, ನಡುರಸ್ತೆಯಲ್ಲಿಯೇ ಹೆತ್ತ ತಂದೆ-ತಾಯಿಗೆ ಚಪ್ಪಲಿಯಲ್ಲಿ ಥಳಿಸಿದ ಪಾಪಿ

ಯಾರೇ ಆಗಿರಲಿ ಜನ್ಮ ಕೊಟ್ಟ ತಂದೆ-ತಾಯಿಯ ಮೇಲೆ ಕೈ ಮಾಡಲಾರರು. ಆದ್ರೆ ಇಲ್ಲೊಬ್ಬ ಪಾಪಿ ಮಗ ತನನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿ ಸಲಹಿದ ಹೆತ್ತ ತಂದೆ ತಾಯಿಯ ಮೇಲೆಯೇ ಕೈ ಮಾಡಿದ್ದಾನೆ. ನಡು ರಸ್ತೆಯಲ್ಲಿಯೇ ಅಮ್ಮ-ಅಪ್ಪನಿಗೆ ಚಪ್ಪಲಿಯಿಂದ ಥಳಿಸಿ ರಾಕ್ಷಿಸಿ ವರ್ತನೆಯನ್ನು ತೋರಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಈ ಪಾಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಮನವಿ ಮಾಡಿದ್ದಾರೆ.

Viral: ಥೂ ಇವನೆಂಥಾ ಮಗ, ನಡುರಸ್ತೆಯಲ್ಲಿಯೇ ಹೆತ್ತ ತಂದೆ-ತಾಯಿಗೆ ಚಪ್ಪಲಿಯಲ್ಲಿ ಥಳಿಸಿದ ಪಾಪಿ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 09, 2024 | 12:04 PM

ಇತ್ತೀಚಿನ ದಿನಗಳಲ್ಲಿ ಕೆಲವರು ದುಡ್ಡಿನ ಮದ, ಹೆಂಡತಿ ಮಕ್ಕಳ ಕಾರಣದಿಂದಾಗಿ ತಮಗೆ ಜನ್ಮ ಕೊಟ್ಟ ಹೆತ್ತ ತಂದೆತಾಯಿಯನ್ನೇ ಚಪ್ಪಲಿಗಿಂತ ಕೀಳಾಗಿ ನೋಡುತ್ತಿದ್ದಾರೆ. ಇನ್ನೂ ವಯಸ್ಸಾದ ತಾಯಿ-ತಂದೆಯನ್ನು ಸಾಕುವವರ್ಯಾರು ಎಂದು ತಮ್ಮನ್ನು ಹೊತ್ತು ಹೆತ್ತು ಸಾಕಿ ಸಲಹಿದ ಜೀವಗಳನ್ನೇ ವೃದ್ಧಾಶ್ರಮಕ್ಕೆ ಸೇರಿಸುವವರೂ ಇದ್ದಾರೆ. ಇವರುಗಳ ನಡುವೆ ಇಲ್ಲೊಬ್ಬ ಪಾಪಿ ತನ್ನ ತಂದೆ-ತಾಯಿಯ ಮೇಲೆಯೇ ಕೈ ಮಾಡುವ ದುಸ್ಸಾಹಸವನ್ನು ಮಾಡಿದ್ದಾನೆ. ನಡು ರಸ್ತೆಯಲ್ಲಿಯೇ ಅಮ್ಮ-ಅಪ್ಪನಿಗೆ ಚಪ್ಪಲಿಯಿಂದ ಥಳಿಸಿ ರಾಕ್ಷಿಸಿ ವರ್ತನೆಯನ್ನು ತೋರಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಈ ಪಾಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಮನವಿ ಮಾಡಿದ್ದಾರೆ.

ಈ ಘಟನೆ ಕಾಶ್ಮೀರದ ಶ್ರೀನಗರದಲ್ಲಿ ನಡೆದಿದ್ದು, ಪುತ್ರನೊಬ್ಬ ತನ್ನ ಹೆತ್ತ-ತಂದೆ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆ. ಮೊಹಮ್ಮದ್‌ ಅಶ್ರಫ್‌ ವಾನಿ ಎಂಬ ವ್ಯಕ್ತಿ ತನ್ನ ತಾಯಿ ತಾಜಾ ಬೇಗಂ ಮತ್ತು ತಂದೆ ಗುಲಾಮ್‌ ಅಹ್ಮದ್‌ ವಾನಿ ಮೇಲೆ ನಡು ರಸ್ತೆಯಲ್ಲಿಯೇ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಯಾವ ಕಾರಣಕ್ಕಾಗಿ ವಯಸ್ಸಾದ ತಂದೆ ತಾಯಿಯ ಮೇಲೆ ಕೈ ಮಾಡಿದ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಘಟನೆಯ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಮೊಹಮ್ಮದ್‌ ಅಶ್ರಫ್‌ ವಾನಿ ವಿರುದ್ಧ ಠಾಣೆಯಲ್ಲಿ ದೂರನ್ನು ದಾಖಲಿಸಿಲಾಗಿದ್ದು, ಸೆಕ್ಷನ್‌ 74, ಸೆಕ್ಷನ್‌ 126 (2), ಸೆಕ್ಷನ್‌ 351 (2) ಅಡಿಯಲ್ಲಿ ನೌಗಾವ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು ಪಿರ್ಝಾದಾ ಶಕೀರ್‌ (Pirzada Shakir) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲು ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಬೀದಿ ಬದಿಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ತಂದೆ-ತಾಯಿಯನ್ನು ಕಂಡ ಮೊಹಮ್ಮದ್‌ ಅಶ್ರಫ್‌ ಬೈಕ್‌ ನಿಲ್ಲಿಸಿ, ಚಪ್ಪಲಿಯಿಂದ ಹೆತ್ತವರಿಗೆ ಮನಬಂದಂತೆ ಥಳಿಸುವ ದೃಶ್ಯವನ್ನು ಕಾಣಬಹುದು. ನಂತರ ಸ್ಥಳೀಯರಿಬ್ಬರು ಬಂದು ಮಗನ ಕ್ರೌರ್ಯದಿಂದ ವಯಸ್ಸಾದ ತಂದೆ-ತಾಯಿಯನ್ನು ರಕ್ಷಣೆ ಮಾಡಿದ್ದಾರೆ.

ಇದನ್ನೂ ಓದಿ: ನವಜಾತ ಶಿಶು ಮತ್ತು ಪತ್ನಿಯನ್ನು ಆಸ್ಪತ್ರೆಯಿಂದ ಕರೆತರಲು ತನ್ನ ಮೊದಲ ಮಗುವನ್ನೇ ಮಾರಾಟ ಮಾಡಿದ ತಂದೆ

ಸೆಪ್ಟೆಂಬರ್‌ 8 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ ಒಂದುವರೆ ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಭೂಮಿ ಮೇಲೆ ಇಂತಹ ಪಾಪಿ ಮಕ್ಕಳು ಕೂಡಾ ಇದ್ದಾರಾ…ʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇವನು ಮಗನಲ್ಲ ರಾಕ್ಷಸʼ ಎಂದು ಕಿಡಿ ಕಾರಿದ್ದಾರೆ. ಇನ್ನೂ ಅನೇಕರು ʼಈ ದುಷ್ಟ ಮಗನಿಗೆ ತಕ್ಕ ಶಾಸ್ತಿ ಮಾಡಲೇಬೇಕುʼ ಎಂದು ಕಿಡಿ ಕಾರಿದ್ದಾರೆ.

ಮತ್ತಷ್ಟು ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ