Artificial Intelligence : ದಿನೇದಿನೇ ಎಐ ತಂತ್ರಜ್ಞಾನ ದೈತ್ಯನಂತೆ ಹೆಜ್ಜೆ ಹಾಕುತ್ತಿದೆ. ಕಲಾವಿದರು, ತಂತ್ರಜ್ಞರು ಚುರುಕು ಪಡೆದುಕೊಳ್ಳುತ್ತಿದ್ದಾರೆ. ಒಡಿಶಾದ ಮೊದಲ ಎಐ ಆ್ಯಂಕರ್ (AI Anchor) ಲಿಸಾಳನ್ನು ನೋಡಿ ಇನ್ನು ಮುಂದೆ ಡಿಜಿಟಲ್ ಮತ್ತು ಸಿನೆಮಾ ಕ್ಷೇತ್ರದಲ್ಲಿ ಏನೆಲ್ಲ ಬದಲಾವಣೆಗಳಾಗಬಹುದು ಎನ್ನುವುದು ಈಗಾಗಲೇ ನಿಮ್ಮ ಊಹೆಗೆ ನಿಲುಕಿರುತ್ತದೆ. ಇದೀಗ ಎಐ ಕಲಾವಿದ ಸಬೂರ್ ಅಕ್ರಂ ಕಲಾವಿದರು ಸಿನೆಮಾ ತಾರೆಯರನ್ನು, ಕ್ರೀಡಾಪಟುಗಳನ್ನು, ಗಾಯಕರನ್ನು ಮತ್ತು ವಿಶ್ವಮಟ್ಟದ ಪ್ರಸಿದ್ಧ ವ್ಯಕ್ತಿಗಳನ್ನು ಫೋಟೋಶಾಪ್, ಪ್ರೊಕ್ರಿಯೇಟ್ ಮತ್ತು ಮಿಡ್ ಜರ್ನಿ (Mid Journey) ಮೂಲಕ ಸೃಷ್ಟಿಸಿದ್ಧಾರೆ.
ಈ ಕೆಳಗಿನ ಪೋಸ್ಟ್ನಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಬಾಬರ್ ಆಝಮ್, ಅತೀಫ್ ಅಸ್ಲಂ, ಮಾಹೀರಾ ಖಾನ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಕಾಣಬಹುದಾಗಿದೆ.
ಈ ಕೆಳಗಿನ ಪೋಸ್ಟ್ನಲ್ಲಿ ಅಮೆರಿಕನ್ ವೆಬ್ ಸೀರೀಸ್ ಮತ್ತು ಹಾಲಿವುಡ್ ನಟನಟಿಯರಾದ ಕಿಮ್ ಕರ್ದೇಶಿಯನ್, ಟಿಮೊಥಿ ಚಾಲಮೆಟ್, ಕೈಲಿ ಜೆನ್ನರ್, ಹೆನ್ರಿ ಕ್ಯಾವಿಲ್, ಝೆಂಡಯಾ ಮತ್ತು ಎರಿಯಾನಾ ಗ್ರಾಂಡೆ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಕಂಗೊಳಿಸಿದ್ದಾರೆ.
ಈ ಕೆಳಗಿನ ಪೋಸ್ಟ್ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾದ ಲಿಯೋನೆಲ್ ಮೆಸ್ಸಿ, ಲೆಬ್ರಾನ್ ಜೇಮ್ಸ್, ಕ್ರಿಸ್ಟಿಯಾನೋ ರೊನಾಲ್ಡೊ, ಜಾನ್ ಸೆನಾ, ರೊಂಡಾ ರೋಝಿ, ರೋಜರ್ ಫೆಡರರ್ ಮತ್ತು ಲೆವಿಸ್ ಹ್ಯಾಮಿಲ್ಟನ್ ಅವರನ್ನು ದೇಸಿ ಉಡುಗೆಯಲ್ಲಿ ಸೃಷ್ಟಿಸಲಾಗಿದೆ.
ಈ ಕೆಳಗಿನ ಪೋಸ್ಟ್ನಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಗಾಯಕರಿದ್ದಾರೆ. ಲಾನಾ ಡೆಲ್ ರೇ, ಬಿಲ್ಲಿ ಐಲಿಶ್, ಎಮಿನೆಮ್, ಝ್ಯಾನ್ ಮಲಿಕ್ ಇವರುಗಳನ್ನೆಲ್ಲ ಪಾಕಿಸ್ತಾನದ ಬೀದಿಗಳ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ.
ಈ ಕೆಳಗಿನ ಪೋಸ್ಟ್ನಲ್ಲಿಯೂ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾದ ಗಾಯಕರಿದ್ದಾರೆ. ಟೇಲರ್ ಸ್ವಿಫ್ಟ್, ಹ್ಯಾರಿ ಸ್ಟೈಲ್ಸ್, ಕಾನ್ಯೆ ವೆಸ್ಟ್, ಜಸ್ಟಿನ್ ಬೈಬರ್, ರಿಹಾನ್ನಾ, ಎಡ್ ಶೀರಾನ್ ಮತ್ತು ಸೆಲೆನಾ ಗೊಮೇಝ್.
ಈ ಕಲಾವಿದರ ಕಲ್ಪನೆಯನ್ನು ನೆಟ್ಟಿಗರು ಬಹಳಷ್ಟು ಕೊಂಡಾಡುತ್ತಿದ್ದಾರೆ. ಆಯಾ ಸೆಲೆಬ್ರಿಟಿಗಳ ಅಭಿಮಾನಿಗಳು ಅವರವರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ.
ಈ ಎಐ ಚಿತ್ರಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:25 pm, Thu, 13 July 23