ಕತ್ತರಿ ಬದಲು ಹಲ್ಲಿನಿಂದಲೇ ರಿಬ್ಬನ್ ಕತ್ತರಿಸಿದ ಪಾಕಿಸ್ತಾನದ ಸಚಿವ; ವಿಡಿಯೋ ವೈರಲ್

| Updated By: shruti hegde

Updated on: Sep 03, 2021 | 3:23 PM

Viral Video: ಪಾಕಿಸ್ತಾನದ ಮಂತ್ರಿಯೊಬ್ಬರು ಉದ್ಘಾಟನಾ ಸಮಾರಂಭದಲ್ಲಿ ಕತ್ತರಿ ಇಲ್ಲದ್ದನ್ನು ಕಂಡು ಬಾಯಿಯಿಂದಲೇ ರಿಬ್ಬನ್ ಕತ್ತರಿಸಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಕತ್ತರಿ ಬದಲು ಹಲ್ಲಿನಿಂದಲೇ ರಿಬ್ಬನ್ ಕತ್ತರಿಸಿದ ಪಾಕಿಸ್ತಾನದ ಸಚಿವ; ವಿಡಿಯೋ ವೈರಲ್
ಕತ್ತರಿ ಬದಲು ಹಲ್ಲಿನಿಂದಲೇ ರಿಬ್ಬನ್ ಕತ್ತರಿಸಿದ ಪಾಕಿಸ್ತಾನದ ಸಚಿವ
Follow us on

ಸಭೆ, ಸಮಾರಂಭಗಳ ಉದ್ಘಾಟನಾ ಕಾರ್ಯಕ್ರಮಗಳಿಗೆ ಗಣ್ಯ ವ್ಯಕ್ತಿಗಳನ್ನು ಕರೆಸುವುದು ಹೊಸದೇನಲ್ಲ. ಯಾವುದೇ ಒಂದು ಅಂಗಡಿ ಅಥವಾ ಕಟ್ಟವನ್ನು ಉದ್ಘಾಟನೆ ಮಾಡುವಾಗ ರಿಬ್ಬನ್ ಕತ್ತರಿಸುವ ಮೂಲಕ ವಿಶೇಷವಾಗಿ ಉದ್ಘಾಟಿಸಲಾಗುತ್ತದೆ. ಪಾಕಿಸ್ತಾನದ ಮಂತ್ರಿಯೊಬ್ಬರು ಉದ್ಘಾಟನಾ ಸಮಾರಂಭದಲ್ಲಿ ಕತ್ತರಿಯ ಬದಲು ಬಾಯಿಯಿಂದಲೇ ರಿಬ್ಬನ್ ಕತ್ತರಿಸಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಚಿವ ಫಯಾಜ್ ಅಲ್ ಹಸನ್ ಚೌಹಾಣ್ ಅವರು ಶೋ ರೂಮ್ ಉದ್ಘಾಟನೆಗಾಗಿ ಸಮಾರಂಭಕ್ಕೆ ಆಗಮಿಸಿದ್ದರು. ಸಕಲ ಸಿದ್ಧತೆಗಳೂ ನಡೆದಿತ್ತು. ಉದ್ಘಾಟನೆ ವೇಳೆ ಎಷ್ಟು ಪ್ರಯತ್ನಿಸಿದರೂ ಕತ್ತರಿಯಿಂದ ಕತ್ತರಿಸಲಾಗದ ರಿಬ್ಬನ್​ಅನ್ನು ತಮ್ಮ ಬಾಯಿಯಿಂದಲೇ ಕಟ್​ ಮಾಡಿದ್ದಾರೆ.

ಸಚಿವ ಫಯಾಜ್ ಉಲ್ ಹಸನ್ ಚೌಹಾಣ್ ಅವರು ಉದ್ಘಾಟನೆ ವೇಳೆ ಕತ್ತರಿಯನ್ನು ಹಿಡಿದಿದ್ದಾರೆ. ರಿಬ್ಬನ್ ಕತ್ತರಿಸಲು ಮುಂದಾಗುತ್ತಾರೆ. ಆದರೆ ಎಷ್ಟು ಪ್ರಯತ್ನಿಸಿದರೂ ಸಹ ಆ ಕತ್ತರಿಯಿಂದ ರಿಬ್ಬನ್ ಕಟ್ ಆಗಲಿಲ್ಲ. ತಕ್ಷಣ ತಮ್ಮ ಹಲ್ಲುಗಳಿಂದ ರಿಬ್ಬನ್ ಕತ್ತರಿಸಿದ ವಿಡಿಯೋ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಮಾಸ್ಕ್ ಧರಿಸದಿದ್ದಕ್ಕಾಗಿ ಸೈನಿಕನನ್ನು ಥಳಿಸಿದ ಪೊಲೀಸರು; ಮೂವರು ಅಮಾನತು

Viral Video: ಅಬ್ಬಾ..ಎಂತಹ ಅದ್ಭುತ ಕ್ಯಾಚ್: ವಿಕಲಚೇತನನ ಡೈವಿಂಗ್​ಗೆ ಸ್ಟಾರ್ ಕ್ರಿಕೆಟಿಗರೇ ಫಿದಾ

(Pakistani minister use teeth for cut ribbon viral video)

Published On - 3:18 pm, Fri, 3 September 21