ರೈಲು ಪ್ರಯಾಣಿಕರಿಗೆ ರೈಲುಗಳಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿರುವ ಕುರಿತು ಸಾಕಷ್ಟು ವಿಡಿಯೋ, ಪೋಸ್ಟ್ಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತದ್ದೇ ಮತ್ತೊಂದು ಘಟನೆ ನಡೆದಿದ್ದು, ಆಹಾರದಲ್ಲಿ ಚೇಳು ಪತ್ತೆಯಾಗಿದ್ದು, ಸದ್ಯ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.
ಐಆರ್‌ಸಿಟಿಸಿ ವಿಐಪಿ ಎಕ್ಸಿಕ್ಯೂಟಿವ್ ಲಾಂಜ್‌ನಲ್ಲಿ ಚೇಳು ತೇಲುತ್ತಿರುವುದನ್ನು ಕಂಡ ದೆಹಲಿಯ ಪ್ರಯಾಣಿಕರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Yes, for sure, Indian Railway food quality has improved, now they are serving raita with more protein. https://t.co/YKtUQt7roZ pic.twitter.com/FpJVIKOhBC
— Aaraynsh (@aaraynsh) October 21, 2024
@aaraynsh ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, IRCTC ಒದಗಿಸಿದ ಆಹಾರದ ಗುಣಮಟ್ಟವನ್ನು ನೀವೇ ನೋಡಿ ಎಂದು ಫೋಟೋ ಕ್ಯಾಪ್ಷನ್ ಬರೆಯಾಗಿದೆ. RCTC VIP ಕಾರ್ಯನಿರ್ವಾಹಕ ಲಾಂಜ್‌ಗಳಲ್ಲಿ ಈ ರೀತಿ ಸಂಭವಿಸಿದರೆ ಸಾಮಾನ್ಯ ರೈಲುಗಳಲ್ಲಿನ ಆಹಾರ ಗುಣಮಟ್ಟವನ್ನು ಊಹಿಸಲು ಸಾಧ್ಯವಿಲ್ಲ ಎಂದು ಬರೆಯಾಗಿದೆ.
ಇದನ್ನೂ ಓದಿ: Uttar Pradesh: ಪತಿಯ ಗುಟ್ಕಾ ಚಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತ್ನಿ
ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್ನಲ್ಲಿ ಬಗೆಬಗೆಯಾಗಿ ಬರೆದುಕೊಂಡಿದ್ದಾರೆ. ಒಬ್ಬರು “ಇಸ್ಲಿಯೇ ಮಮ್ಮಿ ಹುಮೇಶಾ ಪ್ಯಾಕ್ ಕರ್ಕೆ ಭೇಜ್ತಿ ಖಾನಾ (ಅದಕ್ಕಾಗಿಯೇ ತಾಯಿ ಯಾವಾಗಲೂ ಆಹಾರವನ್ನು ಪ್ಯಾಕ್ ಮಾಡಿ ಕಳುಹಿಸುತ್ತಾರೆ)” ಎಂದು ಬರೆದಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ