AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಲಯದಲ್ಲಿ ಹಾವಿನ ಹೊಸ ಪ್ರಭೇದ ಪತ್ತೆ, ಲಿಯೊನಾರ್ಡೊ ಡಿಕ್ಯಾಪ್ರಿಯೋ ಎಂದು ನಾಮಕರಣ

ಹಿಮಾಲಯದಲ್ಲಿ ಹಾವಿನ ಹೊಸ ಪ್ರಭೇದವೊಂದು ಪತ್ತೆಯಾಗಿದ್ದು, ಅದಕ್ಕೆ ಲಿಯೊನಾರ್ಡೊ ಡಿಕ್ಯಾಪ್ರಿಯೋ ಎಂದು ನಾಮಕರಣ ಮಾಡಲಾಗಿದೆ. ಹಿಮಾಲಯದಲ್ಲಿ ಸಂಶೋಧಕರ ತಂಡವು ಆ ಹಾವಿಗೆ ಹಾಲಿವುಡ್ ನಟ, ನಿರ್ಮಾಪಕ ಪ್ರಾಣಿಗಳ  ಸಂರಕ್ಷಣೆಗೆ ನೀಡಿದ ಕೊಡುಗೆಗೆ ಗೌರವಾರ್ಥವಾಗಿ ಅವರ ಹೆಸರಿಡಲಾಗಿದೆ.

ಹಿಮಾಲಯದಲ್ಲಿ ಹಾವಿನ ಹೊಸ ಪ್ರಭೇದ ಪತ್ತೆ, ಲಿಯೊನಾರ್ಡೊ ಡಿಕ್ಯಾಪ್ರಿಯೋ ಎಂದು ನಾಮಕರಣ
ಹಾವುImage Credit source: Hindustan Times
ನಯನಾ ರಾಜೀವ್
|

Updated on:Oct 22, 2024 | 12:16 PM

Share

ಹಿಮಾಲಯದಲ್ಲಿ ಹಾವಿನ ಹೊಸ ಪ್ರಭೇದವೊಂದು ಪತ್ತೆಯಾಗಿದ್ದು, ಅದಕ್ಕೆ ಲಿಯೊನಾರ್ಡೊ ಡಿಕ್ಯಾಪ್ರಿಯೋ ಎಂದು ನಾಮಕರಣ ಮಾಡಲಾಗಿದೆ. ಹಿಮಾಲಯದಲ್ಲಿ ಸಂಶೋಧಕರ ತಂಡವು ಆ ಹಾವಿಗೆ ಹಾಲಿವುಡ್ ನಟ, ನಿರ್ಮಾಪಕ ಪ್ರಾಣಿಗಳ  ಸಂರಕ್ಷಣೆಗೆ ನೀಡಿದ ಕೊಡುಗೆಗೆ ಗೌರವಾರ್ಥವಾಗಿ ಅವರ ಹೆಸರಿಡಲಾಗಿದೆ.

ಭಾರತ, ಜರ್ಮನಿ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಸಂಶೋಧಕರ ತಂಡವು 2020 ರಲ್ಲಿ ಭಾರತದ ಸರೀಸೃಪಗಳ ಮೇಲಿನ ಯೋಜನೆಯ ಭಾಗವಾಗಿ ಹುಡುಕುತ್ತಿರುವಾಗ ಕಂಡುಬಂದಿತ್ತು. ಸೈಂಟಿಫಿಕ್ ರಿಪೋರ್ಟ್ಸ್, ಪೀರ್-ರಿವ್ಯೂಡ್ ಜರ್ನಲ್ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಹಾವನ್ನು ಆಂಗ್ಯುಲಸ್ ಎಂಬ ಹೊಸ ಜಾತಿಯ ಅಡಿಯಲ್ಲಿ ವರ್ಗೀಕರಿಸಿದ್ದಾರೆ ಹಾಗೆಂದರೆ ಸಣ್ಣ ಹಾವು ಎಂದರ್ಥ.

ಸಂಶೋಧಕರ ತಂಡವು ಪಶ್ಚಿಮ ಹಿಮಾಲಯದ ಪರ್ವತ ಪ್ರದೇಶಗಳಿಗೆ ಭೇಟಿ ನೀಡಿದಾಗ ಮಣ್ಣಿನ ರಸ್ತೆಯಲ್ಲಿ ಕೆಲವು ಕಂದು ಬಣ್ಣದ ಹಾವುಗಳನ್ನು ಕಂಡಿದ್ದಾರೆ. ಆದರೆ ಆಶ್ಚರ್ಯವೇನೆಂದರೆ ಈ ಹಾವನ್ನು ಹಿಡಿಯುವವರೆಗೂ ಅದು ಚಲನರಹಿತವಾಗಿಯೇ ಇತ್ತು ಮತ್ತು ಕಚ್ಚುವ ಯಾವ ಪ್ರಯತ್ನವನ್ನೂ ಮಾಡಿರಲಿಲ್ಲ.

ಮತ್ತಷ್ಟು ಓದಿ: ತನ್ನ ತಲೆಗಿಂತ 2 ಪಟ್ಟು ದೊಡ್ಡ ಮೊಟ್ಟೆಯನ್ನು ನುಂಗಿದ ಹಾವಿನ ಮರಿ!

ಹಿಮಾಚಲ ಪ್ರದೇಶದ ಚಂಬಾ ಮತ್ತು ಕುಲು ಪ್ರದೇಶಗಳಲ್ಲಿ, ಉತ್ತರಾಖಂಡದ ನೈನಿತಾಲ್ ಮತ್ತು ನೇಪಾಳದ ಚಿತ್ವಾನ್ ರಾಷ್ಟ್ರೀಯ ಉದ್ಯಾನವನದಲ್ಲಿಯೂ ಹೊಸ ಪ್ರಭೇದಗಳು ಕಂಡುಬಂದಿವೆ ಎಂದು ಜೋರಾಂ ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಸದಸ್ಯ ಎಚ್‌ಟಿ ಲಾಲ್ರೆಮ್‌ಸಂಗ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:14 pm, Tue, 22 October 24

Follow Us
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
ಅಪಾರ್ಟ್​ಮೆಂಟ್ ನಿರ್ವಹಣೆಗೆ ಹೊಸ ಕಾನೂನು: ಸಮಾಲೋಚನೆ ನಡೆಸಲಿರುವ ಸಿಎಂ
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
'ಜೋಡಿ ನಂ 1’ ವಿನ್ನರ್ ಆದ ಕೋಟೆ ಪ್ರಭಾಕರ್​-ಮಾಲತಿ ಜೋಡಿ; ಸಿಕ್ಕ ಹಣ ಎಷ್ಟು?
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
‘ಪರಾಕ್’ ಚಿತ್ರ ಹೇಗೆ ಭಿನ್ನ? ವಿವರಿಸಿದ ನಟ ಶ್ರೀಮುರಳಿ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?