Viral Video: ಸಹೋದ್ಯೋಗಿಗಳ ಜೊತೆ ಡ್ಯಾನ್ಸ್ ಮಾಡಿದ ಪೇಟಿಎಂ ಸಂಸ್ಥಾಪಕ! ವಿಡಿಯೋ ನೋಡಿ

| Updated By: ganapathi bhat

Updated on: Oct 25, 2021 | 5:16 PM

Viral Video: ಇದೀಗ  ಅವರು ಪೇಟಿಎಂ ಸಂಸ್ಥಾಪಕರ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ತಮ್ಮ ಕಂಪೆನಿಯ ಸಿಬ್ಬಂದಿಗಳ ಜೊತೆಗೆ ಡ್ಯಾನ್ಸ್ ಮಾಡುವ ವಿಡಿಯೋ ಇದಾಗಿದೆ.

Viral Video: ಸಹೋದ್ಯೋಗಿಗಳ ಜೊತೆ ಡ್ಯಾನ್ಸ್ ಮಾಡಿದ ಪೇಟಿಎಂ ಸಂಸ್ಥಾಪಕ! ವಿಡಿಯೋ ನೋಡಿ
Follow us on

ಭಾರತದ ಹೆಸರಾಂತ ಉದ್ಯಮಿ ಹರ್ಷ್ ಗೊಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿ ಇರುತ್ತಾರೆ. ಬಹುತೇಕ ಸಂದರ್ಭ ಅವರು ವಿವಿಧ ಸೋಷಿಯಲ್ ಮೀಡಿಯಾ ಪೋಸ್ಟ್​ಗಳನ್ನು ಟ್ವಿಟರ್​ನಲ್ಲಿ ಶೇರ್ ಮಾಡುತ್ತಿರುತ್ತಾರೆ. ಅವರು ಹಂಚಿಕೊಂಡಿರುವ ಫೋಟೊ ಹಾಗೂ ವಿಡಿಯೋಗಳ ಬಗ್ಗೆ ಹಲವು ಬಗೆಯ ಕಮೆಂಟ್​ಗಳು ಮತ್ತು ಅಭಿಪ್ರಾಯಗಳು ಕೂಡ ಕೇಳಿಬರುತ್ತಿರುತ್ತದೆ. ಇದೀಗ  ಅವರು ಪೇಟಿಎಂ ಸಂಸ್ಥಾಪಕರ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ತಮ್ಮ ಕಂಪೆನಿಯ ಸಿಬ್ಬಂದಿಗಳ ಜೊತೆಗೆ ಡ್ಯಾನ್ಸ್ ಮಾಡುವ ವಿಡಿಯೋ ಇದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪೇಟಿಎಂ ಸಂಸ್ಥಾಪಕ ಹಾಗೂ ಸಿಇಒ ವಿಜಯ್ ಶೇಖರ್ ಶರ್ಮಾ ಅಪ್ನಿ ತೊ ಜೈಸೆ ತೈಸೆ ಎಂಬ ಖ್ಯಾತ ಹಾಡಿಗೆ ಹೆಜ್ಜೆ ಹಾಕುತ್ತಿರುವುದು ಕಂಡುಬಂದಿದೆ. ತಮ್ಮ ಸಂಸ್ಥೆಯ ಉದ್ಯೋಗಿಗಳ ಜೊತೆಗೆ ವಿಜಯ್ ಶೇಖರ್ ಸಖತ್ ಡ್ಯಾನ್ಸ್ ಮಾಡಿರುವುದು ಭಾರೀ ಮೆಚ್ಚುಗೆಗೆ ಕಾರಣವಾಗಿದೆ.

ಸೆಬಿ ಭಾರತದ ಒಂದು ದೊಡ್ಡ ಐಪಿಒಗೆ ಅನುಮೋದನೆ ಸಲ್ಲಿಸಿದ ಬಳಿಕ ಪೇಟಿಎಂ ಕಚೇರಿಯಲ್ಲಿ ಕಂಡುಬಂದ ಸಂಭ್ರಮಾಚರಣೆಯ ದೃಶ್ಯ ಇದು ಎಂದು ಈ ವಿಡಿಯೋ ಹಂಚಿಕೊಂಡ ಹರ್ಷ್ ಗೊಯೆಂಕಾ ಬರೆದುಕೊಂಡಿದ್ದಾರೆ. ಅವರು ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಕೆಲವೇ ಕ್ಷಣದಲ್ಲಿ ಜನರು ಬೇರೆ ಬೇರೆ ರಿಯಾಕ್ಷನ್ ಕೊಟ್ಟು ಸಂಭ್ರಮಿಸಿದ್ದಾರೆ.

ಇದೀಗ ಟ್ವಿಟರ್​ನಲ್ಲಿ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗೆ ತುಂಬಾ ಜನರು ವಿವಿಧ ರಿಯಾಕ್ಷನ್ ಕೊಟ್ಟಿದ್ದಾರೆ. ವಿಜಯ್ ಶೇಖರ್ ಶರ್ಮಾ ತುಂಬಾ ಕೂಲ್ ಬಾಸ್ ಎಂದು ಒಬ್ಬರು ಬರೆದುಕೊಂಡಿದ್ದಾರೆ. ವಾವ್! ನೀವು ಬಾಸ್! ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಲವರು ಈ ವಿಡಿಯೋಗೆ ತಮಾಷೆಯ ಕಮೆಂಟ್ ಮಾಡಿದ್ದಾರೆ. ಹರ್ಷ್ ಗೊಯೆಂಕಾ ಹಾಗೂ ಜನರು ಏನೇ ಕಮೆಂಟ್ ಮಾಡಿದರೂ ಈ ವಿಡಿಯೋ ಅವರು ಹೇಳಿದಂತೆ ಇಂದಿನದಲ್ಲ. ಇದು 2018ರ ಹಳೆ ವಿಡಿಯೋ ಎಂದು ತಿಳಿದುಬಂದಿದೆ. ಸಂದರ್ಭಕ್ಕೆ ಹರ್ಷ್ ಗೊಯೆಂಕಾ ಹೀಗೆ ಹಂಚಿಕೊಂಡಿದ್ದಾರಷ್ಟೇ.

ಇದನ್ನೂ ಓದಿ: Viral Video: ಮನೆ ಎದುರು ಲಾಲೂಪ್ರಸಾದ್ ಯಾದವ್ ಪಾದ ತೊಳೆದ ಮಗ ತೇಜ್ ಪ್ರತಾಪ್

ಇದನ್ನೂ ಓದಿ: ‘ಭಜರಂಗಿ 2’ಗೆ ಗೆಲುವು ಸಿಗಲಿ ಎಂದು ಫ್ಯಾನ್ಸ್​ ಹರಕೆ; ವಿಡಿಯೋ ಕಾಲ್​ ಮಾಡಿ ಮಾತನಾಡಿದ ಶಿವರಾಜ್​ಕುಮಾರ್