Zomato- Paytm: ಜೊಮ್ಯಾಟೋ ಹುಟ್ಟುಹಬ್ಬಕ್ಕೆ ವಿಶೇಷ ಟ್ವೀಟ್ ಮೂಲಕ ಶುಭಕೋರಿದ ಪೇಟಿಎಂ! ನೆಟ್ಟಿಗರಿಂದಲೂ ಸಂಭ್ರಮ

ಸೋಷಿಯಲ್ ಮೀಡಿಯಾದಲ್ಲಿ ಪೇಟಿಯಂ ಹಾಗೂ ಜೊಮ್ಯಾಟೋ ಟ್ವೀಟ್ ಜುಗಲ್​ಬಂದಿಗೆ ನೆಟ್ಟಿಗರು ಸಂಭ್ರಮ ಪಟ್ಟಿದ್ದಾರೆ. ಜೊಮ್ಯಾಟೋ, ಪೇಟಿಯಂ ಟ್ವೀಟ್ ನಡುವೆ ಸ್ವಗ್ಗಿ ಬಗ್ಗೆಯೂ ಜನರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಜೊಮ್ಯಾಟೋ ಬಗ್ಗೆ ದೂರು ಹೇಳಲೂ ಈ ಟ್ವೀಟ್ ಸರಣಿ ಬಳಸಿಕೊಂಡಿದ್ದಾರೆ.

Zomato- Paytm: ಜೊಮ್ಯಾಟೋ ಹುಟ್ಟುಹಬ್ಬಕ್ಕೆ ವಿಶೇಷ ಟ್ವೀಟ್ ಮೂಲಕ ಶುಭಕೋರಿದ ಪೇಟಿಎಂ! ನೆಟ್ಟಿಗರಿಂದಲೂ ಸಂಭ್ರಮ
ಪೇಟಿಎಂ, ಜೊಮ್ಯಾಟೋ
Edited By:

Updated on: Jul 11, 2021 | 7:20 PM

ಸಾಮಾಜಿಕ ಜಾಲತಾಣದ ಈ ಜಮಾನದಲ್ಲಿ ದಿನನಿತ್ಯವೂ ಒಂದಲ್ಲ ಒಂದು ವಿಚಾರಗಳು ವೈರಲ್ ಆಗುತ್ತಿರುತ್ತದೆ. ಅಥವಾ ಸೋಷಿಯಲ್ ಮೀಡಿಯಾದ ದಿನದ ಮಾತುಕತೆಯ ಮುಖ್ಯ ವಿಷಯ ಆಗಿರುತ್ತದೆ. ಹೀಗೆ ಲೈಕ್, ಶೇರ್, ಕಮೆಂಟ್​ಗಳ ಮೂಲಕ ಜನರು ಚರ್ಚೆಯಲ್ಲಿ ತೊಡಗಿರುತ್ತಾರೆ. ಇದನ್ನು ಸೋಷಿಯಲ್ ಮೀಡಿಯಾ ಬಳಕೆದಾರರು ಕೂಡ ಸಂಭ್ರಮಿಸುತ್ತಾರೆ. ಇದೀಗ ಅಂತಹ ಒಂದು ಸೋಷಿಯಲ್ ಮೀಡಿಯಾ ಪೋಸ್ಟ್ ಸದ್ದು ಮಾಡುತ್ತಿದೆ. ಈ ಪೋಸ್ಟ್​ಗೆ ಜನರು ತಮಾಷೆಯ ರಿಯಾಕ್ಷನ್ ಕೊಟ್ಟು, ಮಿಮ್ಸ್ ಮಾಡಿಕೊಂಡು ಖುಷಿ ಪಡುತ್ತಿದ್ದಾರೆ.

ಟ್ವಿಟರ್​ನಲ್ಲಿ ಟ್ವೀಟ್ ಮಾಡುವ ವಿಚಾರದಲ್ಲಿ ಪೇಟಿಎಂ ಯಾವತ್ತೂ ಒಂದು ಹೆಜ್ಜೆ ಮುಂದಿರುತ್ತದೆ ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ತಿಳಿದಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಪೇಟಿಯಂ ತನ್ನ ಟ್ವೀಟ್ ಮೂಲಕವೂ ಸುದ್ದಿಯಾಗುತ್ತಿರುತ್ತದೆ. ಈ ಬಾರಿಯೂ ಪೇಟಿಯಂ ಜೊಮ್ಯಾಟೊ ಬಗ್ಗೆ ಅಂತಹದೊಂದು ಟ್ವೀಟ್ ಮಾಡಿದೆ. ಇದು ಸಾಮಾಜಿಕ ಜಾಲತಾಣದ ಬಳಕೆದಾರರಲ್ಲಿ ನಗು ತರಿಸಿದೆ.

ಪೇಟಿಎಂ, ಜೊಮ್ಯಾಟೋ ಬಗ್ಗೆ ಟ್ವೀಟ್ ಮಾಡಲು ಕೂಡ ಕಾರಣವಿದೆ. ಜೊಮ್ಯಾಟೋ ತನ್ನ 13ನೇ ವರ್ಷವನ್ನು ಪೂರ್ಣಗೊಳಿಸಿದೆ. ಇದೀಗ ಜೊಮ್ಯಾಟೋ ಬರ್ತ್​ಡೇ ಸಂಭ್ರಮದಲ್ಲಿ ಪೇಟಿಎಂ ಶುಭಕೋರಿದೆ. ಅದೂ ಕೂಡ ವಿಶಿಷ್ಠ ರೀತಿಯಲ್ಲಿ.

ಡಿಯರ್ ಜೊಮ್ಯಾಟೋ, ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಾವು ನಿಮಗೆ ಸರ್ಪ್ರೈಸ್ ಕೇಕ್ ಕಳಿಸಬೇಕು ಅಂದುಕೊಂಡಿದ್ದೆವು. ಆದರೆ, ಜೊಮ್ಯಾಟೋ ಮೂಲಕ ಕೇಕ್ ಆರ್ಡರ್ ಮಾಡಿದ್ರೆ ಸರ್ಪ್ರೈಸ್ ಹಾಳಾಗುತ್ತೆ. ಹಾಗಾಗಿ, ಸರ್ಪ್ರೈಸ್ ಆಗಿ ಇಮೋಜಿ ಕೇಕ್ ಕೊಡುತ್ತೇವೆ ಎಂದು ಪೇಟಿಎಂ ಜೊಮ್ಯಾಟೋಗೆ ಟ್ವೀಟ್ ಮೂಲಕ ವಿಶ್ ಮಾಡಿದೆ.

ಇದಕ್ಕೆ ಜೊಮ್ಯಾಟೋ ಕೂಡ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದೆ. ನಮ್ಮ ಹಣಕಾಸು ವ್ಯವಸ್ಥೆ ತಂಡಕ್ಕೆ ಧನ್ಯವಾದಗಳು. ನಾವು ನಿಮ್ಗೆ ಈ ಇಮೋಜಿ ಕೊಟ್ರೆ ವರ್ಕ್ ಔಟ್ ಆಗಬಹುದು ಎಂದು ಹಣದ ಇಮೋಜಿ ಹಂಚಿಕೊಂಡು ಟ್ವೀಟ್ ಮಾಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಪೇಟಿಎಂ ಹಾಗೂ ಜೊಮ್ಯಾಟೋ ಟ್ವೀಟ್ ಜುಗಲ್​ಬಂದಿಗೆ ನೆಟ್ಟಿಗರು ಸಂಭ್ರಮ ಪಟ್ಟಿದ್ದಾರೆ. ಜೊಮ್ಯಾಟೋ, ಪೇಟಿಎಂ ಟ್ವೀಟ್ ನಡುವೆ ಸ್ವಗ್ಗಿ ಬಗ್ಗೆಯೂ ಜನರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಜೊಮ್ಯಾಟೋ ಬಗ್ಗೆ ದೂರು ಹೇಳಲೂ ಈ ಟ್ವೀಟ್ ಸರಣಿ ಬಳಸಿಕೊಂಡಿದ್ದಾರೆ.

ಇದನ್ನೂ ಓದಿ: Paytm Postpaid Mini: ಪೋಸ್ಟ್​ಪೇಯ್ಡ್​ ಮಿನಿ ಆರಂಭಿಸಿದ ಪೇಟಿಎಂ; ರೂ. 1000 ತನಕ ಸಾಲ ನೀಡುವ ಹೊಸ ಯೋಜನೆ

ಜೊಮ್ಯಾಟೋ ವಿವಾದದಲ್ಲಿ ಯಾರು ಯಾರಿಗೆ ಹೊಡೆದರು? ನೆಟ್ಟಿಗರು ಹರಿಬಿಟ್ಟ ತಮಾಷೆ ವಿಡಿಯೋ

Published On - 7:12 pm, Sun, 11 July 21