ತಮಿಳುನಾಡು: ತಿರುಪ್ಪೂರ್ ಜಿಲ್ಲೆಯ ಅರುಲ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪವಾಡ ಸದೃಶ ಘಟನೆ ನಡೆದಿದೆ. ದೇವಾಲಯದ ಗರ್ಭಗುಡಿಯಲ್ಲಿ ನವಿಲೊಂದು ಕಾಣಿಸಿಕೊಂಡಿದ್ದು, ಆ ಅದ್ಬುತ ದೃಶ್ಯ ಕಂಡು ಜನ ಬೆರಗಾಗಿದ್ದಾರೆ. ಇದನ್ನೆಲ್ಲ ಆ ದೇವರ ಲೀಲೆ ಅಂತ ಭಕ್ತರು ಹೇಳಿದ್ದಾರೆ. ನೂರಾರು ಭಕ್ತರ ಸಮ್ಮುಖದಲ್ಲಿ ಸುಬ್ರಹ್ಮಣ್ಯ ದೇವರಿಗೆ ಆರತಿ ಸಲ್ಲಿಸುವಾಗ ನವಿಲು ಗರ್ಭಗುಡಿಯ ಮುಂದೆ ಬಂದಿದೆ. ಸುಬ್ರಹ್ಮಣ್ಯ ಸ್ವಾಮಿಯ ಮೂರ್ತಿಗೆ ಆರತಿ ಸಲ್ಲಿಸಿದ ನಂತರ ಪೂಜಾರಿ ನವಿಲಿಗೆ ಆರತಿ ಸಲ್ಲಿಸಿದ್ದಾರೆ. ಇಷ್ಟೊಂದು ಭಕ್ತರಿದ್ದರೂ ನವಿಲು ಅಲ್ಲಿಂದ ಕದಲದೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಏತನ್ಮಧ್ಯೆ, ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ನವಿಲು ಸುಬ್ರಹ್ಮಣ್ಯ ಸ್ವಾಮಿ ವಾಹನ ಎಂದು ಹೇಳಲಾಗುತ್ತದೆ. ಇದಲ್ಲದೆ, ನವಿಲು ಕಣ್ಣುಗಳು ಜ್ಞಾನ, ತಿಳುವಳಿಕೆ ಮತ್ತು ಬುದ್ಧಿವಂತಿಕೆಯನ್ನು ಸಂಕೇತಿಸುತ್ತದೆ ಎಂದು ಹೇಳಲಾಗುತ್ತದೆ. ದೇವಸ್ಥಾನಕ್ಕೆ ಬಂದಿದ್ದ ಭಕ್ತರೆಲ್ಲರೂ ಈ ಅದ್ಭುತ ದೃಶ್ಯವನ್ನು ತಮ್ಮ ಫೋನ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಹೀಟ್ ಸ್ಟ್ರೋಕ್‌ಗೆ ಒಳಗಾದ ಕೋತಿ, ಮೂಕ ಜೀವಿಯ ಪ್ರಾಣ ರಕ್ಷಿಸಿದ ಪೊಲೀಸ್ ಅಧಿಕಾರಿ
ನಿತಿನ್ ಮೆಹ್ತಾ ಎಂಬ ಫೇಸ್ಬುಕ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ವಿಡಿಯೋಗೆ ದೇವಸ್ಥಾನದ ಆಡಳಿತಾಧಿಕಾರಿಗಳು ಪ್ರತಿಕ್ರಿಯಿಸಿದ್ದು”ಇದು ದೇವರ ಮಹಿಮೆಗೆ ಸಾಕ್ಷಿಯಾಗಿದೆ. ಜನರಲ್ಲಿ ದೇವರ ಮೇಲಿನ ನಂಬಿಕೆ ಹೆಚ್ಚಲು ಇದೇ ಕಾರಣ ” ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ