Viral Video: ಇದು ಪವಾಡ ಸದೃಶ್ಯ, ಜೈನ ಮುನಿಗಳ ಮಂತ್ರ ಪಠಣೆಗೆ ಎದ್ದು ಕುಳಿತ ಗಾಯಗೊಂಡ ಬಸವ

ಈ ಪ್ರಪಂಚದಲ್ಲಿ  ಹಲವು ವಿಸ್ಮಯಗಳು ನಡಿತಾನೆ ಇರುತ್ತವೆ. ಕೆಲವು ವಿಸ್ಮಯಗಳು ಜನರಲ್ಲಿ ಭಕ್ತಿಯನ್ನು ಹೆಚ್ಚಿಸುತ್ತದೆ. ಅಂತಹದ್ದೇ ಘಟನೆಯೊಂದು ಇದೀಗ ನಡೆದಿದ್ದು, ಜೈನ ಮುನಿಗಳು ಮಂತ್ರ ಪಠಿಸುತ್ತಿದ್ದಂತೆ, ಕಾಲಿಗೆ ಗಾಯವಾಗಿ ನರಳುತ್ತಾ ಬಿದ್ದಿದ್ದ ಹೋರಿಯೊಂದು  ಪವಾಡ ಸದೃಶ್ಯವೆಂಬಂತೆ ಎದ್ದು ಕುಳಿತಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Viral Video: ಇದು ಪವಾಡ ಸದೃಶ್ಯ, ಜೈನ ಮುನಿಗಳ ಮಂತ್ರ ಪಠಣೆಗೆ ಎದ್ದು ಕುಳಿತ ಗಾಯಗೊಂಡ ಬಸವ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 28, 2024 | 5:07 PM

ಮಂತ್ರಗಳಿಗೆ ನಮ್ಮ ಜೀವನವನ್ನು ಬದಲಾಯಿಸುವ ಶಕ್ತಿಯಿದೆ. ಸನಾತನ ಧರ್ಮದಲ್ಲಿ ಮಂತ್ರ ಪಠಣಕ್ಕೆ ವಿಶೇಷ ಮಹತ್ವವಿದ್ದು, ಧಾರ್ಮಿಕ ಗ್ರಂಥಗಳಲ್ಲಿ ಮಂತ್ರಗಳನ್ನು ಪಠಿಸುವ ಮೂಲಕ ದೇವರನ್ನು ಸಂತುಷ್ಟಗೊಳಿಸಬಹುದು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ದೇವರನ್ನು ಒಲಿಸಲು, ಸಂತುಷ್ಟಗೊಳಿಸಲು  ಅನಾದಿ ಕಾಲದಿಂದಲೂ ಋಷಿ ಮುನಿಗಳು, ಸಾಧು ಸಂತರು, ತಪಸ್ವಿಗಳು ಮಂತ್ರಗಳನ್ನು ಪಠಿಸುತ್ತಾ ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ದೇವರನ್ನು ಸಂತುಷ್ಟಗೊಳಿಸುವುದು ಮಾತ್ರವಲ್ಲದೆ  ಮಂತ್ರಗಳಿಗೆ  ದೇಹದಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿಯೂ ಇದೆ. ಇದೀಗ ಇಲ್ಲೊಂದು ಅಚ್ಚರಿಯ ಘಟನೆ  ನಡೆದಿದ್ದು, ಜೈನ ಮುನಿಗಳು ಮಂತ್ರ ಪಠಿಸುತ್ತಿದ್ದಂತೆ ಕಾಲಿಗೆ ಗಾಯವಾಗಿ ನರಳುತ್ತಾ ಬಿದ್ದಿದ್ದ ಹೋರಿ  ಪವಾಡ ಸದೃಶ್ಯವೆಂಬಂತೆ ಎದ್ದು ಕುಳಿತಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ  ಕಾಲಿಗೆ ತೀವ್ರ ಗಾಯವಾಗಿ ಎದ್ದು ಕೂರಲು ಆಗದೆ ಹೋರಿಯೊಂದು ನೆಲದಲ್ಲಿ ಬಿದ್ದು ಪರದಾಡುತ್ತಿತ್ತು.  ಅಲ್ಲಿಗೆ ಬಂದ ಜೈನ ಮುನಿಗಳು ಮಂತ್ರ ಪಠಿಸುತ್ತಿದ್ದಂತೆ ಆ ಹೋರಿ ಪವಾಡ ಸದೃಶ್ಯವೆಂಬಂತೆ ಎದ್ದು ಕುಳಿತಿದೆ.

ಈ ಕುರಿತ ವಿಡಿಯೋವನ್ನು @ನಮ್ಮ ಮೋದಿ ಎಂಬ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, “ತಪಸ್ವಿ ಜೈನ ಮುನಿಗಳು ಮಂತ್ರ ಪಠಣ ಮಾಡುತ್ತಿದ್ದಂತೆ ಕಾಲಿಗೆ ಗಾಯವಾಗಿದ್ದ ಗೋ ಮಾತೆ ಹೇಗೆ ಏಳುತ್ತದೆ ನೋಡೊ; ಇದಲ್ಲವೆ ಸನಾತನ ಧರ್ಮದ ಶಕ್ತಿ. ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಕಾಲಿಗೆ ಗಾಯವಾಗಿ ಎದ್ದು ಕೂರಲು ಆಗದೆ, ಹೋರಿಯೊಂದು ಅಲ್ಲೇ ನೆಲದ ಮೇಲೆ ಬಿದ್ದು ಒದ್ದಾಡುತ್ತಿರುವ ದೃಶ್ಯವನ್ನು ಕಾಣಬಹುದು.   ಆ ಸಂದರ್ಭದಲ್ಲಿ ಅಲ್ಲಿಗೆ ಬಂದಂತಹ ಜೈನ ಮುನಿಗಳು ಹೋರಿಯ ಎದುರು ಮಂತ್ರ ಪಠಣ ಮಾಡುತ್ತಾರೆ. ಜೈನ ಮುನಿಗಳು ಮಂತ್ರ ಪಠಿಸುತ್ತಿದ್ದಂತೆ ನೆಲದ ಮೇಲೆ  ನರಳಾಡುತ್ತ ಬಿದ್ದಿದ್ದ ಹೋರಿ ಆ ತಕ್ಷಣ ಪವಾಡ ಸದೃಶ್ಯವೆಂಬಂತೆ ಎದ್ದು ಕುಳಿತಿದೆ.

ಇದನ್ನೂ ಓದಿ: ಈ ಫೋಟೋದಲ್ಲಿ ನಿಮಗೆ ಮೊದಲು ಕಾಣಿಸಿದ್ದು ಏನು? ನಿಮ್ಮ ವ್ಯಕ್ತಿತ್ವ ತಿಳಿಯಿರಿ

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಮೂರುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೇ ಅಲ್ಲವೇ ಮಂತ್ರಗಳ ಶಕ್ತಿʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ಸನಾತನ ಧರ್ಮದ ಶಕ್ತಿ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಮಂತ್ರಗಳ ಶಕ್ತಿಯನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್