Viral: ಕಪ್ಪು ಬ್ಯಾಗ್‌ ಧರಿಸಿ ವ್ಲಾಗ್‌ ಮಾಡಲು ಬಂದ ಯುಟ್ಯೂಬರ್; ಭಯೋತ್ಪಾದಕನೆಂದು ಭಾವಿಸಿ ಪೊಲೀಸರಿಗೆ ಕರೆ ಮಾಡಿದ ಗ್ರಾಮಸ್ಥರು

ಹಳ್ಳಿಯ ಜನ ತುಂಬಾನೇ ಮುಗ್ಧರು ಮತ್ತು ಒಳ್ಳೆಯವರು . ಕೆಲವೊಂದು ವಿಚಾರಗಳ ಬಗ್ಗೆ ನಿಜಕ್ಕೂ ಅವರಿಗೆ ತಿಳುವಳಿಕೆ ಇರೋದಿಲ್ಲ. ಇದಕ್ಕೆ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್‌ ಆಗಿದ್ದು, ವ್ಲಾಗ್‌ ಮಾಡುತ್ತಾ ಹಳ್ಳಿಯೊಂದಕ್ಕೆ ಬಂದ ಯುವಕನ ಭುಜದ ಮೇಲಿನ ಭಾರದ ಬ್ಯಾಗ್‌ ಕಂಡು ಇವ ಯಾರೋ ಭಯೋತ್ಪಾದಕನೇ ಇರಬಹುದೆಂದು ಭಯಗೊಂಡ ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿದ್ದಾರೆ.

Viral: ಕಪ್ಪು ಬ್ಯಾಗ್‌  ಧರಿಸಿ ವ್ಲಾಗ್‌ ಮಾಡಲು ಬಂದ ಯುಟ್ಯೂಬರ್; ಭಯೋತ್ಪಾದಕನೆಂದು ಭಾವಿಸಿ ಪೊಲೀಸರಿಗೆ ಕರೆ ಮಾಡಿದ ಗ್ರಾಮಸ್ಥರು
Edited By:

Updated on: Sep 08, 2024 | 5:07 PM

ರೀಲ್ಸ್‌ನಂತೆ ಇತ್ತೀಚಿಗೆ ಯುಟ್ಯೂಬ್‌ ವ್ಲಾಗ್‌ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಹಣ ಗಳಿಸುವ ಉತ್ತಮ ವೇದಿಕೆಯಾಗಿರುವ ಯೂಟ್ಯೂಬ್‌ ಅನ್ನೇ ಅನೇಕರು ಫುಲ್‌ ಟೈಮ್‌ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಹೆಚ್ಚಿನವರು ತಾವು ಹೋಗೋ ಕಡೆಯೆಲ್ಲಾ ಕೈಯಲ್ಲಿ ಮೊಬೈಲ್‌ ಹಿಡಿದು ಅಥವಾ ಕ್ಯಾಮೆರಾ ಹಿಡಿದು ವ್ಲಾಗ್‌ ಮಾಡಿ, ಯೂಟ್ಯೂಬ್‌ನಲ್ಲಿ ಶೇರ್‌ ಮಾಡುತ್ತಿರುತ್ತಾರೆ. ಹೀಗೆ ಕೆಲವೊಮ್ಮೆ ರೀಲ್ಸ್‌ ಮಾಡುವವರು ಅಥವಾ ವ್ಲಾಗ್‌ ಮಾಡುವವರು ವಿಡಿಯೋ ಮಾಡುವಾಗ ಪಜೀತಿಗೆ ಸಿಲುಕುವ ಸಾಧ್ಯತೆ ಇರುತ್ತದೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಪಜೀತಿಗೆ ಸಿಲುಕಿದ್ದು, ಆತ ಹಳ್ಳಿಯೊಂದಕ್ಕೆ ವ್ಲಾಗ್‌ ಮಾಡಲು ಬಂದಾಗ ಆತನ ಬೆನ್ನಲ್ಲಿ ಭಾರದ ಬ್ಯಾಗ್‌ ನೋಡಿ ಆತ ಭಯೋತ್ಪಾದಕನೇ ಇರಬಹುದೆಂದು ಭಯಗೊಂಡು ಅಲ್ಲಿನ ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಸೂರಜ್‌ ಶರ್ಮಾ ಎಂಬ ವ್ಲಾಗರ್‌ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದು, ಆ ಸಂದರ್ಭದಲ್ಲಿ ಆತನ ಬೆನ್ನಿನ ಮೇಲಿನ ಭಾರವಾದ ಬ್ಯಾಗ್‌ ಕಂಡು ಆತಂಕಕ್ಕೊಳಗಾದ ಅಲ್ಲಿನ ಗ್ರಾಮಸ್ಥರು ಇವನು ಭಯೋತ್ಪಾದಕನೇ ಇರಬಹುದೆಂದು ಭಯಭೀತರಾಗಿ, ಬ್ಯಾಗ್‌ ಓಪನ್‌ ಮಾಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ನಿರಾಕರಿಸಿದಾಗ ಈತ ಪಕ್ಕ ಭಯೋತ್ಪಾದಕನೇ ಇರಬಹುದೆಂದು ಆ ಜನರು ಪೊಲೀಸರಿಗೆ ಕರೆ ಮಾಡಿದ್ದಾರೆ. ಈ ಕುರಿತ ಪೋಸ್ಟ್‌ ಒಂದನ್ನು gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ಹಳ್ಳಿ ಜನರು ಮತ್ತು ವ್ಲಾಗರ್‌ ಮಧ್ಯೆ ಮಾತಿನ ಚಕಮಕಿ ನಡೆಯುವ ದೃಶ್ಯವನ್ನು ಕಾಣಬಹುದು. ವ್ಲಾಗರ್‌ ಅನ್ನು ಭಯೋತ್ಪಾದಕನೆಂದು ಭಾವಿಸಿ ಹಳ್ಳಿ ಜನ ಬ್ಯಾಗ್‌ ಓಪನ್‌ ಮಾಡುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ಪ್ರತಿಯೊಬ್ಬರಿಗೂ ಬ್ಯಾಗ್‌ ತೋರಿಸಿದರೆ ಬ್ಯಾಗ್‌ನಲ್ಲಿನ ವಸ್ತುಗಳನ್ನು ಹೊರಗೆ ಒಳಗೆ ಇಡಲು ನನಗೆ ತುಂಬಾನೇ ಟೈ ಹಿಡಿಯುತ್ತೇ, ಬೇಕಾದ್ರೆ ನೀವು ಪೊಲೀಸರಿಗೆ ಕರೆ ಮಾಡಿ ಎಂದು ವ್ಲಾಗರ್‌ ಹೇಳುತ್ತಾನೆ. ಅಷ್ಟೇ ಅಲ್ಲದೆ ತನ್ನ ಯೂಟ್ಯೂಬ್‌ ಚಾನೆಲ್‌ ಮತ್ತು ಇನ್‌ಸ್ಟಾಗ್ರಾಮ್‌ ಅಕೌಂಟ್‌ ಅನ್ನು ಕೂಡಾ ತೋರಿಸುತ್ತಾನೆ. ಇದ್ಯಾವುದನ್ನು ನಂಬದ ಗ್ರಾಮಸ್ಥರು ಪೊಲೀಸರಿಗೆಯೇ ಕರೆ ಮಾಡಿದ್ದಾರೆ.

ಇದನ್ನೂ ಓದಿ: ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಬಾಲಕಿ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

ಸೆಪ್ಟೆಂಬರ್‌ 7 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅವರು ಕೇಳಿದಾಗ ಬ್ಯಾಗ್‌ ಓಪನ್‌ ಮಾಡಿದ್ರೆ ಇಷ್ಟೆಲ್ಲಾ ನಡಿತಾನೆ ಇರ್ಲಿಲ್ಲʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆ ವ್ಲಾಗರ್‌ ಸ್ವಲ್ಪ ನರ್ವಸ್‌ ಆಗಿದ್ದರಿಂದ ಅವರು ಆತನನ್ನು ಭಯೋತ್ಪಾದಕ ಎಂದು ಭಾವಿಸಿರಬಹುದುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಮತ್ತಷ್ಟು ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ