Video Viral : ನಾಯಿಯೊಂದಿಗೆ ಸೆಲ್ಫಿಯಲ್ಲಿ ಮುಳುಗಿದ ಪೈಲಟ್, ವಿಳಂಬವಾಗಿ ಹಾರಿದ ವಿಮಾನ

Selfie with pet dog : ಯಾಕೆ ವಿಮಾನ ಹೊರಡುವುದು ತಡವಾಯಿತು ಎಂದು ತನ್ನ ಮೇಲಧಿಕಾರಿ ಕೇಳಿದಾಗ ಈ ಪೈಲಟ್ ಏನೆಂದು ಉತ್ತರಿಸಿರಬಹುದು? ಈ ಮುದ್ದಾದ ವಿಡಿಯೋ 13 ಲಕ್ಷಕ್ಕೂ ಹೆಚ್ಚು ಮೆಚ್ಚುಗೆ ಪಡೆದಿದೆ.

Video Viral : ನಾಯಿಯೊಂದಿಗೆ ಸೆಲ್ಫಿಯಲ್ಲಿ ಮುಳುಗಿದ ಪೈಲಟ್, ವಿಳಂಬವಾಗಿ ಹಾರಿದ ವಿಮಾನ
ವಿಮಾನ ಓಡಿಸಲ್ವಾ, ಸೆಲ್ಫೀ ಎಷ್ಟು ಅದು?
Updated By: ಶ್ರೀದೇವಿ ಕಳಸದ

Updated on: Sep 05, 2022 | 1:20 PM

Viral Video : ಈ ಸಾಕುಪ್ರಾಣಿಗಳ ಹುಚ್ಚು ಮನುಷ್ಯನನ್ನು ಎಂದಿಗೂ ಬಿಡುವುದಿಲ್ಲ. ಅದರಲ್ಲೂ ವಿಶ್ವಾಸಕ್ಕೆ, ವಿಧೇಯಕ್ಕೆ ಹೆಸರಾದ ನಾಯಿಯ ಕಾರುಣ್ಯಪೂರಿತ ಕಣ್ಣಿಗೆ ಶರಣಾಗದವರು ಯಾರಿದ್ದಾರೆ? ಇನ್ನು ಅಂತಃಕರಣ, ಮಾನವೀಯತೆಯುಳ್ಳವರಿಗೆ ಮಕ್ಕಳಂತೆಯೇ ಸಾಕುಪ್ರಾಣಿಗಳು. ಅವುಗಳನ್ನು ಒಂಟಿಯಾಗಿ ಮನೆಯಲ್ಲಿಯೇ ಬಿಟ್ಟು ಹೋಗಲು ಸಾಧ್ಯವಿಲ್ಲ. ಎಲ್ಲಿ ಹೋದರೂ ಅವುಗಳನ್ನು ಕರೆದುಕೊಂಡೇ ಹೋಗಬೇಕು. ಇದು ಜವಾಬ್ದಾರಿಯುತ ಪೋಷಕತ್ವ. ಇಲ್ಲಿರುವ ವಿಡಿಯೋ ನೋಡಿ. ಪ್ರಯಾಣಿಕರೊಬ್ಬರು ತಮ್ಮ ನಾಯಿಯೊಂದಿಗೆ ವಿಮಾನವೇರಿದಾಗ ವಿಮಾನದೊಳಗಿನ ಇತರೇ ಸಿಬ್ಬಂದಿಯಿಂದ ಹಿಡಿದು ಪೈಲಟ್​ತನಕ ಭಾವಲೋಕದೊಳಗೆ ಮುಳುಗಿಬಿಡುತ್ತಾರೆ. ಒಬ್ಬರಾದ ಮೇಲೊಬ್ಬರು ಈ ನಾಯಿಯೊಂದಿಗೆ ಸೆಲ್ಫಿಯಲ್ಲಿ ಮುಳುಗಿಬಿಡುತ್ತಾರೆ. ಅದರಲ್ಲೂ ಈ ಪೈಲಟ್ ಅಂತೂ​ ವಿಧವಿಧ ಭಂಗಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಸಮಯದ ಪರಿವೆಯನ್ನೇ ಕಳೆದುಕೊಳ್ಳುತ್ತಾನೆ.

 

ಈ ನಾಯಿಯ ಹೆಸರು ರಿಚಿ. ಇದಕ್ಕಾಗಿಯೇ ಇನ್​ಸ್ಟಾಗ್ರಾಮ್​ನಲ್ಲಿ ಪುಟ ಮೀಸಲಾಗಿದೆ. ಇದು 37,000 ಫಾಲೋವರ್ಸ್​ಗಳನ್ನು ಹೊಂದಿದೆ. ಐದು ದಿನಗಳ ಹಿಂದೆ ಈ ವಿಡಿಯೋ ಪೋಸ್ಟ್​ ಮಾಡಿದ್ದಾರೆ ಈ ನಾಯಿಯ ಪೋಷಕರು. ಈಗಾಗಲೇ ಈ ವಿಡಿಯೋ 13ಲಕ್ಷಕ್ಕೂ ಹೆಚ್ಚೂ ಲೈಕ್ಸ್​ ಗಳಿಸಿದೆ. ಸಾಕಷ್ಟು ಜನ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ. ವಿಮಾನ ಎಷ್ಟಾದರೂ ತಡವಾಗಲಿ ಇಂಥ ಮುದ್ದಾದ ವಿಷಯಗಳಿಗೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಆದರೆ, ವಿಮಾನ ವಿಳಂಬವಾಗಿ ಹಾರಿದ್ದಕ್ಕೆ ಈ ಪೈಲಟ್ ಏನು ಉತ್ತರ ಕೊಟ್ಟಿರಬಹುದು?​

ಏನೇ ಹೇಳಿ ಈ ಪ್ರಾಣಿಪ್ರೀತಿ ಎಲ್ಲವನ್ನೂ ಮರೆಸುವಂಥದ್ದು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 1:18 pm, Mon, 5 September 22