Dog : ಸ್ವಾಗತ! ಶೂ ಹಿಡಿದುಕೊಂಡು ಬರುತ್ತಾನೆ ಈ ಒಳ್ಳೆಯ ಹುಡುಗ ಓಲ್ಲೀ. ಸುಸ್ವಾಗತ! ಪಾತ್ರೆ ಒರೆಸುವ ಬಟ್ಟೆಯೊಂದಿಗೆ ಬರುತ್ತಾನೆ ಈ ಒಳ್ಳೆಯ ಹುಡುಗ ಓಲ್ಲೀ. ಓಹ್ ಬನ್ನಿ ಬನ್ನಿ, ಗಮ್ ಟೇಪ್ ಬಾಯಲ್ಲಿ ಕಚ್ಚಿಕೊಂಡು ಓಡಿ ಬರುತ್ತಾನೆ ಈ ಒಳ್ಳೆಯ ಹುಡುಗ ಓಲ್ಲೀ. ವಾವ್ ಬಂದ್ರಾ, ಆಟದ ಕಂಬಳಿಹುಳುವಿನೊಂದಿಗೆ ಬರುತ್ತಾನೆ ಒಳ್ಳೆಯ ಹುಡುಗ ಓಲ್ಲೀ. ಬಂದೇ ಬಿಟ್ರಿ! ಕುಷನ್ ಪಿಲೋ ಜೊತೆ ಬರುತ್ತಾನೆ ಒಳ್ಳೆಯ ಹುಡುಗ ಓಲ್ಲಿ. ಎಲ್ಲಿಂದ ಬರುತ್ತಾನೆ ಏನು ಕಥೆ? ತಲೆಕೆಡಿಸ್ಕೊಳ್ತಿದೀರಾ? ಇನ್ಸ್ಟಾಗ್ರಾಮ್ನಲ್ಲಿ Good Boy Ollie ಎಂಬ ಪುಟವನ್ನು ಹೊಂದಿದ ಈ ನಾಯಿ ಸುಮಾರು ಐದೂವರೆ ಲಕ್ಷ ಫಾಲೋವರ್ಗಳನ್ನು ಹೊಂದಿದೆ. ದಿನವೂ ಅದರ ಪೋಷಕ ಮನೆಗೆ ಬಂದು ಬಾಗಿಲು ತೆರೆಯುತ್ತಿದ್ದಂತೆ ಒಂದೊಂದೇ ಸಾಮಾನು ಬಾಯಿಯಲ್ಲಿ ಕಚ್ಚಿಹಿಡಿದು ಸ್ವಾಗತ ಕೋರಿ ಮುದ್ದು ಮಾಡಿಸಿಕೊಳ್ಳುತ್ತದೆ. ನೋಡಿ ಈ ವೆಲ್ಕಮ್ ವಿಡಿಯೋ.
ನಾಯಿಗಳು ಹೀಗೆ ತಮ್ಮ ಪೋಷಕರನ್ನು ಪ್ರೀತಿಸುವ ರೀತಿ ಇದು. ಅದರಲ್ಲೂ ರಿಟ್ರೈವರ್ ನಾಯಿಗಳು ಹೀಗೆ ಗಿಫ್ಟ್ ಕೊಡುವುದು ಹೆಚ್ಚು. ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್ ಈ ವಿಡಿಯೋ ಪಡೆದಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ