ಫಿಲಿಪೈನ್ಸ್​ನಲ್ಲಿ ವೃದ್ಧನ ಮನೆಯನ್ನು ಹೆಗಲ ಮೇಲೆ ಹೊತ್ತೊಯ್ದ ವಿಡಿಯೋ ವೈರಲ್​

| Updated By: ಶ್ರೀದೇವಿ ಕಳಸದ

Updated on: Dec 03, 2022 | 9:25 AM

Philippine : ಈ ವೃದ್ಧನ ಹೆಂಡತಿ ತೀರಿ ಹೋಗಿದ್ದಾಳೆ. ಆದರೆ ಈತನಿಗೆ ಮಗ, ಮೊಮ್ಮಕ್ಕಳೊಂದಿಗೆ ವಾಸಿಸಬೇಕು ಎನ್ನಿಸಿದೆ. ನೆರೆಹೊರೆಯವರು ಈತನ ಮನೆಯನ್ನೇ ಹೊತ್ತು ಮಗನ ಮನೆಯ ಬಳಿ ಇರಿಸಿದ್ದಾರೆ. ಹೇಗಿದೆ ಈ ಉಪಾಯ!

ಫಿಲಿಪೈನ್ಸ್​ನಲ್ಲಿ ವೃದ್ಧನ ಮನೆಯನ್ನು ಹೆಗಲ ಮೇಲೆ ಹೊತ್ತೊಯ್ದ ವಿಡಿಯೋ ವೈರಲ್​
ವೃದ್ಧನ ಮನೆಯನ್ನು ಹೆಗಲ ಮೇಲೆ ಹೊತ್ತೊಯ್ಯುತ್ತಿರುವ ಫಿಲಿಪೈನ್ಸ್​ನ ಸ್ಥಳೀಯರು
Follow us on

Viral : ಹಿರಿಯರಿಗೆ ಕಿರಿಯರ ಆಶ್ರಯ ಬೇಕು. ಕಿರಿಯರಿಗೆ ಹಿರಿಯರ ಆಶ್ರಯ ಬೇಕು. ಕುಟುಂಬ ಎನ್ನುವುದು ಹೀಗೆ ಪರಸ್ಪರ ಸಹಕಾರ, ಸಹಾನುಭೂಮಿಯಿಂದಲೇ ಚೆಂದಗೊಳ್ಳುವುದು. ಆದರೆ ಫಿಲಿಪೈನ್ಸ್​ನಲ್ಲಿ ನಡೆದ ಘಟನೆ ಒಂದು ಕ್ಷಣ ವಿಚಿತ್ರ ಎನ್ನಿಸಿದರೂ ವಾಸ್ತವದಲ್ಲಿ ನೋಡಿದಾಗ ಒಳಸತ್ಯ ಅರ್ಥವಾಗುವುದು. ತನ್ನ ಮಗ ಮತ್ತು ಮೊಮ್ಮಕ್ಕಳೊಂದಿಗೆ ವಾಸಿಸಬೇಕೆಂದು ಇಚ್ಛಿಸಿದ ವಯೋವೃದ್ಧನ ಮನೆಯನ್ನೇ ಹೆಗಲ ಮೇಲೆ ಹೊತ್ತು ವೃದ್ಧನ ಆಸೆ ಈಡೇರಿಸಿದ್ಧಾರೆ ಫಿಲಿಪೈನ್ಸ್​ನ ಈ ಹಳ್ಳಿಗರು. ಇವರ ಸಹಾನುಭೂತಿಯನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

2 ಮಿಲಿಯನ್​ ಜನರು ಹೃದಯಸ್ಪರ್ಶಿಯಾದ ಈ ವಿಡಿಯೋ ನೋಡಿದ್ಧಾರೆ. 24 ಜನರು ಫಿಲಿಪೈನ್ಸ್‌ನ ಜಾಂಬೊಂಗಾ ಡೆಲ್ ನಾರ್ಟೆಯ ಕಚ್ಚಾರಸ್ತೆಗುಂಟ ಸುಮಾರು 7 ಅಡಿ ಎತ್ತರದ ಮನೆಯನ್ನು ತಮ್ಮ ಹೆಗಲುಗಳ ಮೇಲೆ ಹೊತ್ತೊಯ್ದು ಸಾಗಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಅನೇಕರು ಇವರ ಈ ಸಾಹಸದ ಕಾರ್ಯಕ್ಕೆ ಹುರುಪು ತುಂಬುತ್ತಿರುವುದನ್ನು ನೋಡಬಹುದು.

ಸುಮಾರು ಎರಡು ಗಂಟೆಗಳೇ ಬೇಕಾದವು ಹೀಗೆ ಈ ಮನೆಯನ್ನು ಸಾಗಿಸಲು. ಸುಲಭವಲ್ಲವಲ್ಲ? ಆಗಾಗ ವಿಶ್ರಾಂತಿ ತೆಗೆದುಕೊಂಡು ಸಾಗಣೆ ಕೆಲಸದಲ್ಲಿ ಇವರು ನಿರತರಾಗುತ್ತಿದ್ದರು. ಈ ವೃದ್ಧನ ಹೆಂಡತಿ ತೀರಿಹೋಗಿದ್ದಾರೆ. ಹಾಗಾಗಿ ಮಗ ಮತ್ತು ಸಂಬಂಧಿಕರು ಈ ವೃದ್ಧನೆಂದರೆ ಭಾರ ಎಂಬಂತೆ ವರ್ತಿಸುತ್ತಿದ್ದರು. ಆದರೆ ವೃದ್ಧನಿಗೆ ತನ್ನ ಮಗ ಮೊಮ್ಮಕ್ಕಳೊಂದಿಗೆ ವಾಸಿಸಬೇಕು ಎನ್ನಿಸುತ್ತಿತ್ತು. ಈತನ ಅಳಲು ಕೇಳಿಸಿಕೊಂಡ ನೆರೆಹೊರೆಯವರು ಹೀಗೊಂದು ಉಪಾಯ ಮಾಡಿ ಯಶಸ್ವಿಯಾದರು. ನಂತರ ವೃದ್ಧ ಇವರೆಲ್ಲರಿಗೂ ಊಟೋಪಚಾರ ಮಾಡಿ ಹಬ್ಬದಂತೆ ಇದನ್ನು ಸಂಭ್ರಮಿಸಿದರು.

ನೆಟ್ಟಿಗರು ಈ ನಡೆಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಹೀಗೆ ಮನೆಯನ್ನೇ ಸಾಗಿಸುವ ದೃಶ್ಯವನ್ನು ಮೊದಲ ಬಾರಿಗೆ ನೋಡುತ್ತಿರುವುದು ಎನ್ನುತ್ತಿದ್ದಾರೆ.

ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 9:22 am, Sat, 3 December 22