ಇದಪ್ಪಾ ಮಾನವೀಯತೆ ಅಂದ್ರೆ : ಪ್ರಾಣ ಲೆಕ್ಕಿಸದೆ ಕೆಸರಿನಲ್ಲಿ ಒದ್ದಾಡುತ್ತಿದ್ದ ಹದ್ದನ್ನು ರಕ್ಷಿಸಿದ ವ್ಯಕ್ತಿ

ಕೆಲವೊಮ್ಮೆ ನಾವು ಮಾಡುವ ಸಣ್ಣ ಪುಟ್ಟ ಸಹಾಯಗಳು ಕೂಡ ಇನ್ನೊಬ್ಬರ ಜೀವವನ್ನು ಉಳಿಸುತ್ತದೆ. ಇದಕ್ಕೆ ಸಾಕ್ಷಿಯೆನ್ನುವಂತಹ ಸಾಕಷ್ಟು ವಿಡಿಯೋ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಫೋಟೋಗ್ರಾಫರ್ ರೊಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೆ ಕೆಸರು ನೀರಿನಲ್ಲಿ ಸಿಲುಕಿದ ಹದ್ದನ್ನು ರಕ್ಷಿಸಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ವ್ಯಕ್ತಿಯ ಈ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ.

ಇದಪ್ಪಾ ಮಾನವೀಯತೆ ಅಂದ್ರೆ : ಪ್ರಾಣ ಲೆಕ್ಕಿಸದೆ ಕೆಸರಿನಲ್ಲಿ ಒದ್ದಾಡುತ್ತಿದ್ದ ಹದ್ದನ್ನು ರಕ್ಷಿಸಿದ ವ್ಯಕ್ತಿ
ವೈರಲ್ ವಿಡಿಯೋ
Image Credit source: Twitter

Updated on: May 06, 2025 | 6:19 PM

ಈಗಿನ ಜನರಲ್ಲಿ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಮನಸ್ಸಾಗಲಿ ಹಾಗೂ ಮಾನವೀಯತೆ (humanity) ಯಾಗಲಿ ಇಲ್ಲ, ಹೀಗಾಗಿ ಮನುಷ್ಯನಲ್ಲಿ ಮಾನವೀಯತೆಯೇ ಮರೆಯಾಗಿದೆ ಎಂದು ಹೇಳುವುದನ್ನು ನೀವು ನೋಡಿರಬಹುದು. ಆದರೆ ಕೆಲವು ವ್ಯಕ್ತಿಗಳು ಮಾಡುವ ಕೆಲಸಗಳು ಹಾಗೂ ಕಷ್ಟಕ್ಕೆ ಮಿಡಿಯುವ ಮನಸ್ಸುಗಳನ್ನು ನೋಡಿದಾಗ ಮಾನವೀಯತೆ ಇನ್ನು ಜೀವಂತವಾಗಿದೆ ಎಂದೆನಿಸುತ್ತದೆ. ತಮ್ಮ ಪ್ರಾಣವನ್ನೇ ಲೆಕ್ಕಿಸದೆ ಮೂಕ ಜೀವಿಗಳ ಪ್ರಾಣ ಉಳಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾ (social media) ದಲ್ಲೂ ಕೂಡಾ ಕಾಣ ಸಿಗುತ್ತಿರುತ್ತವೆ. ಇದೀಗ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕೆಸರಿನಲ್ಲಿ ಸಿಲುಕಿದ್ದ ಹದ್ದ (egale) ನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಈ ಘಟನೆಯೂ ಪೋಲ್ಯಾಂಡ್ (poland) ನಲ್ಲಿ ನಡೆದಿದೆ.

@AMAZINGNATURE ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಕೆಸರು ತುಂಬಿದ ನೀರಿನಲ್ಲಿ ಹದ್ದು ಸಿಲುಕಿ ಹಾರಲು ಆಗದೇ ಒದ್ದಾಡುತ್ತಿರುವುದನ್ನು ನೋಡಬಹುದು. ಹೀಗಿರುವಾಗ ಫೋಟೋಗ್ರಾಫರ್ ರೊಬ್ಬರು ಈ ಹದ್ದನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದು, ಹದ್ದನ್ನು ಹಿಡಿದು ಕೆಸರು ನೀರಿನಲ್ಲಿ ಈಜುತ್ತಾ ಸಾಗುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ
ಮದುವೆಯ ಅರಿಶಿನ ಶಾಸ್ತ್ರದ ವೇಳೆ ನೃತ್ಯ ಮಾಡುವಾಗ ಹೃದಯಾಘಾತದಿಂದ ವಧು ಸಾವು
ಐಸ್ ಕ್ರೀಂ ಮೇಲೆ ಗರಿಗರಿಯಾದ ಆಲೂಗಡ್ಡೆ ಫ್ರೈಸ್
ಡ್ರೀಮ್ 11 ನಲ್ಲಿ 39 ರೂ ಹೂಡಿಕೆ,ಯುವಕನಿಗೆ ಬಂತು ನೋಡಿ ನಾಲ್ಕು ಕೋಟಿ
ಕುದುರೆ ಮೇಲೇರಿ ಮದುವೆ ಮಂಟಪಕ್ಕೆ ಬಂದ ವರನಿಗೆ ಮಳೆಯಿಂದ ಸ್ವಾಗತ

ಇದನ್ನೂ ಓದಿ : ಪ್ರಾಂಶುಪಾಲೆ ಹಾಗೂ ಮಹಿಳಾ ಲೈಬ್ರೆರಿಯನ್ ನಡುವೆ ಬಿಗ್ ಫೈಟ್ , ಇಲ್ಲಿದೆ ವಿಡಿಯೋ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಏಳು ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರು ಮಾಡಿರುವ ಕಾಮೆಂಟ್ ಗಳು ಹೀಗಿವೆ. ಒಬ್ಬ ಬಳಕೆದಾರರು, ‘ಮಾನವೀಯತೆ ಇಂದಿಗೂ ಜೀವಂತವಾಗಿದೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ’ ಎಂದಿದ್ದಾರೆ. ಇನ್ನೊಬ್ಬರು, ‘ಅಪಾಯದಲ್ಲಿ ಸಿಲುಕಿದ್ದ ಹದ್ದನ್ನು ರಕ್ಷಿಸಿದ ಅತ್ಯದ್ಭುತ ವ್ಯಕ್ತಿ ನೀವು, ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಹೃದಯವಂತ ವ್ಯಕ್ತಿಗೆ ದೇವರು ಒಳ್ಳೆದು ಮಾಡಲಿ’ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ