Viral Video : ಚೂಪಾದ ಉಗುರು, ಮೊಂಡ ಉಗುರು, ಪೀಚು ಉಗುರು, ದಪ್ಪ ಉಗುರು ಹೀಗೆ ಒಟ್ಟು ಬೆರಳೆಂದಮೇಲೆ ಉಗುರುಗಳು ಇರಲೇಬೇಕು. ಹೇಗಿವೆ ಎನ್ನುವುದು ಅಷ್ಟು ಮುಖ್ಯವಾಗುವುದೇ ಇಲ್ಲ. ಅವರವರ ವಂಶವಾಹಿಗೆ ಸಂಬಂಧಿಸಿದಂತೆ ಅವು ಬೆಳೆದು ಆಕಾರ ಪಡೆದುಕೊಂಡಿರುತ್ತವೆ. ಆದರೆ ಇದೀಗ ವೈರಲ್ ಆಗುತ್ತಿರುವ ಫೋಟೋದಲ್ಲಿ ಬೆರಳಿಗೆ ಉಗುರುಗಳೇ ಇಲ್ಲ. ನೆಟ್ಟಿಗರು ಈ ಫೋಟೋ ನೋಡಿ ಆಘಾತ ವ್ಯಕ್ತಪಡಿಸುತ್ತಿದ್ದಾರೆ. ಇದು ಎನಿಮೇಟೆಡ್ ಫೋಟೋ ಖಂಡಿತ ಅಲ್ಲ!
ಅಮೋನೀಚಿಯಾ ಎಂಬ ಆರೋಗ್ಯ ಸಮಸ್ಯೆಯಿಂದ ಈ ಸ್ಥಿತಿ ಈ ವ್ಯಕ್ತಿಗೆ ಉಂಟಾಗಿದೆ. ಹುಟ್ಟಿನಿಂದಲೇ ಈ ವ್ಯಕ್ತಿಗೆ ಕಾಲಿನ ಮತ್ತು ಕೈಬೆರಳುಗಳ ಉಗುರುಗಳು ಇಲ್ಲ. ಇದನ್ನು ನೋಡಿದ ನೆಟ್ಟಿಗರು ಅನೇಕ ರೀತಿಯ ಪ್ರಶ್ನೆಗಳನ್ನು ಕೇಳಿದ್ಧಾರೆ. ನಿತ್ಯದ ಕೆಲಸಕಾರ್ಯಗಳನ್ನ ಇವರು ಹೇಗೆ ಮಾಡಿಕೊಳ್ಳುತ್ತಾರೋ ಎಂದು ಒಬ್ಬರು ಕೇಳಿದ್ದಾರೆ. ಡಬ್ಬಿಗಳನ್ನು ಹೇಗೆ ತೆರೆಯುತ್ತೀರಿ ಎಂದು ಕೇಳಿದ್ಧಾರೆ ಒಬ್ಬರು. ಕಿತ್ತಳೆ ಹಣ್ಣನ್ನು ಸುಲಿಯಲು ಬರುವುದೆಂದರೆ ದೊಡ್ಡ ಕಷ್ಟವೇ ಎಂದಿದ್ದಾರೆ ಇನ್ನೂ ಒಬ್ಬರು.
ನಿನ್ನೆ ಮಾಡಿದ ಈ ಪೋಸ್ಟ್ 27,000 ಕ್ಕಿಂತಲೂ ಹೆಚ್ಚು ವೋಟ್ಗಳನ್ನು ಪಡೆದಿದೆ. ಉಗುರುಗಳ ಸಮಸ್ಯೆಗಳ ಬಗ್ಗೆ ಸಾವಿರಾರು ಜನ ಚರ್ಚಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:09 pm, Thu, 3 November 22