Viral Video: ಕರುವಿನ ಮುಖ ಕಚ್ಚಿ ಎಳೆದಾಡಿದ ಪಿಟ್ ಬುಲ್ ಶ್ವಾನ ;ವಿಡಿಯೋ ವೈರಲ್
ಅಂಗಳದಲ್ಲಿ ಕಟ್ಟಿದ್ದ ಕರುವಿನ ಮೇಲೆ ಪಿಟ್ ಬುಲ್ ಶ್ವಾನ ಏಕಾಏಕಿ ದಾಳಿ ಮಾಡಿದ್ದು, ನಾಯಿಯ ಆಕ್ರಮಣಕಾರಿ ವರ್ತನೆಯನ್ನು ಕಂಡು ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ಕುಟುಂಬಸ್ಥರು ಮಧ್ಯಪ್ರವೇಶಿಸಿ ಪಿಟ್ ಬುಲ್ ಅನ್ನು ಓಡಿಸಿ ಕರುವನ್ನು ಉಳಿಸಲು ಪ್ರಯತ್ನಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ ನೋಡಿ.
ದೆಹಲಿ: ಅಂಗಳದಲ್ಲಿ ಕಟ್ಟಿದ್ದ ಕರುವಿನ ಮೇಲೆ ಪಿಟ್ ಬುಲ್ ಶ್ವಾನ ದಾಳಿ ಮಾಡಿರುವ ಘಟನೆ ದೆಹಲಿಯ ಬುರಾರಿ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪಿಟ್ ಬುಲ್ ಕರುವಿನ ಮುಖವನ್ನು ತೀವ್ರವಾಗಿ ಗಾಯಗೊಳಿಸಿದ್ದು, ಕರುವಿನ ಮುಖದಿಂದ ತೀವ್ರ ರಕ್ತಸ್ರಾವವಾಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇತ್ತೀಚಿಗಷ್ಟೇ ದೇಶಾದ್ಯಂತ ನಾಯಿಗಳಿಂದ ಜನರ ಮೇಲೆ ದಾಳಿ ಹಾಗೂ ವಿದೇಶಿ ತಳಿಗಳ ಅಕ್ರಮ ವ್ಯಾಪಾರ ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ ಪಿಟ್‌ಬುಲ್ ಟೆರಿಯರ್, ಅಮೆರಿಕನ್ ಬುಲ್‌ಡಾಗ್, ಕಂಗಾಲ್, ರಷ್ಯನ್ ಶೆಫರ್ಡ್ ಸೇರಿದಂತೆ 23 ಬಗೆಯ ಅಪಾಯಕಾರಿ ವಿದೇಶಿ ಶ್ವಾನ ತಳಿಗಳನ್ನು ಕೇಂದ್ರ ಸರಕಾರ ನಿರ್ಬಂಧ ಹೇರಿತ್ತು.
ಇದೀಗ ಅಂಗಳದಲ್ಲಿ ಕಟ್ಟಿದ್ದ ಕರುವಿನ ಮೇಲೆ ಪಿಟ್ ಬುಲ್ ಶ್ವಾನ ಏಕಾಏಕಿ ದಾಳಿ ಮಾಡಿದ್ದು, ನಾಯಿಯ ಆಕ್ರಮಣಕಾರಿ ವರ್ತನೆಯನ್ನು ಕಂಡು ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ಕುಟುಂಬಸ್ಥರು ಮಧ್ಯಪ್ರವೇಶಿಸಿ ಪಿಟ್ ಬುಲ್ ಅನ್ನು ಓಡಿಸಿ ಕರುವನ್ನು ಉಳಿಸಲು ಪ್ರಯತ್ನಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋ ಇಲ್ಲಿದೆ ನೋಡಿ:
Warning Disturbing Content ⚠️
पिटबुल जैसे ख़तरनाक कुत्तों को भारत सरकार ने पालने पर प्रतिबंध लगाया हुआ है।
लेकिन इसके बाद भी लोग ये ख़तरनाक ब्रीड रख रहे है।
देखिए दिल्ली के बुराडी इलाक़े में इस पिटबुल ने गौ माता के ऊपर कितना ख़तरनाक हमला किया है।
पिटबुल पालने वालों के… pic.twitter.com/hF2e2N7Okm
— Sagar Kumar “Sudarshan News” (@KumaarSaagar) September 23, 2024
ಇದನ್ನೂ ಓದಿ: ಆನ್‌ಲೈನ್ ಗೇಮಿಂಗ್ ಮೂಲಕ 15 ಲಕ್ಷ ರೂ. ಕಳೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕಾನ್‌ಸ್ಟೆಬಲ್
ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶ್ವಾನದ ಮಾಲೀಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಕಷ್ಟು ನೆಟ್ಟಿಗರು ಪೊಲೀಸರಿಗೆ ಆಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮದ ವರದಿಯಾಗಿಲ್ಲ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ