Viral: ಉಪನ್ಯಾಸಕರು ಪಾಠ ಮಾಡುತ್ತಿದ್ರೂ ಡೋಂಟ್ ಕೇರ್, ಡೈರೆಕ್ಟ್ ಕ್ಲಾಸಿಗೆ ಬಂದು ಫುಡ್ ಪಾರ್ಸೆಲ್ ಕೊಟ್ಟು ಹೋದ ಡೆಲಿವರಿ ಬಾಯ್
ಫುಡ್ ಡೆಲಿವರಿ ಬಾಯ್ಸ್ ಎಷ್ಟೇ ಟ್ರಾಫಿಕ್, ಇತ್ಯಾದಿ ಸಮಸ್ಯೆಗಳಿದ್ದರೂ ನಮಗೆ ಸಮಯಕ್ಕೆ ಸರಿಯಾಗಿ ಫುಡ್ ಪಾರ್ಸೆಲ್ ತಂದುಕೊಡುತ್ತಾರೆ. ಹಾಗೇಯೇ ಇಲ್ಲೊಬ್ಬ ವಿದ್ಯಾರ್ಥಿ ಹಸಿವೆಂದು ಫುಡ್ ಆರ್ಡರ್ ಮಾಡಿದ್ದು, ಲೆಕ್ಚರರ್ ಇದ್ರೂ ಪರವಾಗಿಲ್ಲ ಎನ್ನುತ್ತಾ ಫುಡ್ ಡೆಲಿವರಿ ಬಾಯ್ ಒಬ್ಬ ಸೈಕಲ್ ಸಮೇತ ಕ್ಲಾಸಿಗೆ ನುಗ್ಗಿ ವಿದ್ಯಾರ್ಥಿಗೆ ಸಮಯಕ್ಕೆ ಸರಿಯಾಗಿ ಪಾರ್ಸೆಲ್ ಕೊಟ್ಟು ಹೋಗಿದ್ದಾನೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಟ್ರಾಫಿಕ್ ಇತ್ಯಾದಿ ಸಮಸ್ಯೆಗಳಿಂದ ಕೆಲವೊಂದು ಬಾರಿ ತಡವಾಗಿ ಪಾರ್ಸೆಲ್ ತಂದರೂ, ಹೆಚ್ಚಿನ ಸಮಯದಲ್ಲಿ ಫುಡ್ ಡೆಲಿವರಿ ಬಾಯ್ಸ್ ನಾವು ಆರ್ಡರ್ ಮಾಡಿದ ಆಹಾರವನ್ನು ಸಮಯಕ್ಕೆ ಸರಿಯಾಗಿ ತಂದುಕೊಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಡೆಲಿವರಿ ಬಾಯ್ ಕೂಡಾ ಏನಾದ್ರೂ ಪರವಾಗಿಲ್ಲ ನನ್ನ ಗ್ರಾಹಕನಿಗೆ ಸಮಯಕ್ಕೆ ಸರಿಯಾಗಿ ಫುಡ್ ಪಾರ್ಸೆಲ್ ಕೊಡ್ಬೇಕು ಎನ್ನುತ್ತಾ ಉಪನ್ಯಾಕರು ಪಾಠ ಮಾಡುತ್ತಿದ್ದರೂ ಕಾಯದೆ ಸೈಕಲ್ ಸಮೇತ ಡೈರೆಕ್ಟ್ ಕ್ಲಾಸ್ ರೂಮಿಗೆ ನುಗ್ಗಿ ವಿದ್ಯಾರ್ಥಿಯೊಬ್ಬ ಆರ್ಡರ್ ಮಾಡಿದ್ದ ಪಿಜ್ಜಾವನ್ನು ಕೊಟ್ಟು ಹೋಗಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಫ್ರಾನ್ಸ್‌ನ ಮಾಂಟ್‌ಪೆಲ್ಲಿಯರ್ ನಗರದ ಯುನಿವರ್ಸಿಟಿಯೊಂದರಲ್ಲಿ ನಡೆದಿದ್ದು, ಲೆಕ್ಚರರ್ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವಾಗಲೇ ಸೈಕಲ್ ಸಮೇತ ಕ್ಲಾಸ್ ರೂಮ್‌ಗೆ ನುಗ್ಗಿದ ಊಬರ್ ಈಟ್ಸ್ ಡೆಲಿವರಿ ಬಾಯ್ ವಿದ್ಯಾರ್ಥಿಯೊಬ್ಬನಿಗೆ ಪಾರ್ಸೆಲ್ ಕೊಟ್ಟು ಹೋಗಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಈ ಕುರಿತ ವಿಡಿಯೋವನ್ನು ಫುಡ್ ಡೆಲಿವರಿ ಬಾಯ್ ಮ್ಯಾಟಿಸ್ (matis_livraizoneur) ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ವೈರಲ್ ವಿಡಿಯೋದಲ್ಲಿ ತನ್ನ ಗ್ರಾಹಕ ಹೊರಗೆ ಬರುವುದನ್ನೂ ಕಾಯದೆ ಡೆಲಿವರಿ ಬಾಯ್ ಲೆಕ್ಚರರ್ ಪಾಠ ಮಾಡುತ್ತಿರುವಾಗಲೇ ಸೈಕಲ್ ಸಮೇತ ಕ್ಲಾಸ್ ರೂಮಿಗೆ ನುಗ್ಗಿ ಪಾರ್ಸೆಲ್ ಕೊಟ್ಟು ಹೋಗುವ ದೃಶ್ಯವನ್ನು ಕಾಣಬಹುದು. ಈತನನ್ನು ನೋಡಿ ಉಪನ್ಯಾಸಕರಿಗೆ ಶಾಕ್ ಆಗಿದ್ದು, ನಂತರ ಆ ಡೆಲಿವರಿ ಬಾಯ್ ತರಗತಿಗೆ ಅಡ್ಡಿಪಡಿಸಿದ್ದಕ್ಕಾಗಿ ಕ್ಷಮೆ ಕೇಳಿ ಅಲ್ಲಿಂದ ಹೋಗಿದ್ದಾನೆ. ಆತನ ಮಾತುಗಳನ್ನು ಕೇಳಿ ಇಡೀ ಕ್ಲಾಸ್ ರೂಮ್ ನಗೆಗಡಲಲ್ಲಿ ತೇಲಿದೆ.
ಇದನ್ನೂ ಓದಿ: ಈ ಬೆಂಗ್ಳೂರು ಟ್ರಾಫಿಕ್ ಜಾಮ್‌ನಿಂದ ಟ್ರೈನ್‌ಗೂ ಕೂಡಾ ತಪ್ಪಿಸಿಕೊಳ್ಳೋಕೆ ಆಗ್ಲಿಲ್ಲ ನೋಡಿ…
ಸೆಪ್ಟೆಂಬರ್ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನೋಡಿ ಇಷ್ಟೆಲ್ಲಾ ನಡೆದ್ರೂ ಪ್ರೊಫೆಸರ್ ಎಷ್ಟು ಕೂಲ್ ಆಗಿ ಇದ್ದಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಉಪನ್ಯಾಸಕರಿಗೆ ನೀಡಿದ ಅಗೌರವʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ