Viral: ಮನೆ ಮಕ್ಕಳನ್ನು ರಕ್ಷಿಸಲು ಕಾಳಿಂಗ ಸರ್ಪವನ್ನೇ ಕಚ್ಚಿ ಕೊಂದ ಪಿಟ್‌ ಬುಲ್‌

ಸಾಕು ಪ್ರಾಣಿಗಳು ಮನೆ ಮಂದಿಯನ್ನು ರಕ್ಷಿಸುವ ಸಲುವಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಅದೆಷ್ಟೋ ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮನೆ ಬಳಿ ಬಂದ ಕಾಳಿಂಗ ಸರ್ಪದಿಂದ ಮನೆ ಮಕ್ಕಳನ್ನು ರಕ್ಷಿಸಲು ಪಿಟ್‌ ಬುಲ್‌ ತಳಿಯ ಶ್ವಾನ ವಿಷ ಪೂರಿತ ಹಾವಿನ ಜೊತೆಗೆ ಕಾದಾಡಿ, ಕೊನೆಗೆ ಆ ಹಾವನ್ನೇ ಸಾಯಿಸಿದೆ. ಸದ್ಯ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ಮನೆ ಮಕ್ಕಳನ್ನು ರಕ್ಷಿಸಲು ಕಾಳಿಂಗ ಸರ್ಪವನ್ನೇ ಕಚ್ಚಿ ಕೊಂದ ಪಿಟ್‌ ಬುಲ್‌
ವೈರಲ್​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 25, 2024 | 3:38 PM

ನಿಷ್ಠೆ ಎಂಬ ಪದದ ಬಗ್ಗೆ ಮಾತನಾಡುವಾಗ ಮೊದಲು ನೆನಪಿಗೆ ಬರುವುದೇ ಶ್ವಾನ. ಹೌದು ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ತಮಗೆ ತುತ್ತು ಅನ್ನ ನೀಡಿ ಸಲಹುವ ಮಾಲೀಕರಿಗಾಗಿ ಈ ಶ್ವಾನಗಳು ಎಂತಹ ಕಷ್ಟಗಳನ್ನು ಸಹ ಎದುರಿಸುತ್ತವೆ. ಸಾಕು ಪ್ರಾಣಿಗಳು ಮನೆ ಮಂದಿಯನ್ನು ರಕ್ಷಿಸುವ ಸಲುವಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಅದೆಷ್ಟೋ ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಮನೆ ಬಳಿ ಬಂದ ಕಾಳಿಂಗ ಸರ್ಪದಿಂದ ಮನೆ ಮಕ್ಕಳನ್ನು ರಕ್ಷಿಸಲು ಪಿಟ್‌ ಬುಲ್‌ ಶ್ವಾನ ವಿಷ ಪೂರಿತ ಹಾವಿನ ಜೊತೆಗೆ ಕಾದಾಡಿ, ಕೊನೆಗೆ ಆ ಹಾವನ್ನೇ ಸಾಯಿಸಿದೆ. ಸದ್ಯ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದ್ದು, ಇಲ್ಲಿನ ಶಿವಗಣೇಶ್‌ ಕಾಲೋನಿಯ ಪಂಜಾಬ್‌ ಸಿಂಗ್‌ ಎಂಬವರ ಮನೆಯ ನಾಯಿ ಜೆನ್ನಿ ಗಾರ್ಡನ್‌ನಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ರಕ್ಷಿಸಲು ದೈತ್ಯ ಕಾಳಿಂಗ ಸರ್ಪವನ್ನೇ ಹೊಡೆದು ಸಾಯಿಸಿದೆ. ಮನೆ ಮಕ್ಕಳು ಗಾರ್ಡನ್‌ನಲ್ಲಿ ಆಟವಾಡುತ್ತಿದ್ದ ವೇಳೆ ಅಲ್ಲಿ ದೈತ್ಯ ಕಾಳಿಂಗ ಸರ್ಪವೊಂದು ಎಂಟ್ರಿ ಕೊಟ್ಟಿದ್ದು, ಇದನ್ನು ಕಂಡ ಜೆನ್ನಿ ಈ ಹಾವು ಮಕ್ಕಳಿಗೆ ಅಪಾಯ ಮಾಡುವ ಮುನ್ನ ಅದರ ಕಥೆಯನ್ನೇ ಮುಗಿಸಬೇಕು ಎಂದು ಓಡಿ ಹೋಗಿ ಕಾಳಿಂಗ ಸರ್ಪದೊಂಗಿದೆ ಕಾದಾಡಿ ಕೊನೆಗೆ ಅದನ್ನು ಹೊಡೆದು ಸಾಯಿಸಿದೆ. ಈ ಹಿಂದೆಯೂ ಜೆನ್ನಿ ಮನೆ ಬಳಿ ಬಂದ ಸುಮಾರು ಎಂಟರಿಂದ ಹತ್ತು ಶ್ವಾನಗಳನ್ನು ಹೊಡೆದು ಸಾಯಿಸಿದೆ ಎಂದು ಮಾಲೀಕ ಹೇಳಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ

ವಿಶಾಲ್‌ ಸಿಂಗ್‌ (vishal_rajput01) ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಮನೆಯ ಗಾರ್ಡನ್‌ ಬಳಿ ಬಂದ ವಿಷಪೂರಿತ ಕಾಳಿಂಗ ಸರ್ಪದೊಂದಿಗೆ ಪಿಟ್‌ ಬುಲ್‌ ಶ್ವಾನ ಕಾದಾಡುವ ದೃಶ್ಯವನ್ನು ಕಾಣಬಹುದು. ಹೀಗೆ ಗಾರ್ಡನ್‌ನಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ರಕ್ಷಿಸಲು ಶ್ವಾನ ಹಾವನ್ನು ಹೊಡೆದು ಸಾಯಿಸಿದೆ.

ಇದನ್ನೂ ಓದಿ: ಇಟಲಿ ಪ್ರಧಾನಿ ಮೆಲೋನಿಯೊಂದಿಗೆ ಎಲಾನ್ ಮಸ್ಕ್ ಡೇಟಿಂಗ್‌? ವೈರಲ್‌ ಆಯ್ತು ಫೋಟೋ

ಈ ವಿಡಿಯೋ ಫುಟೇಜ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ನಿಜಕ್ಕೂ ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ ಅಂತ ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
CM ವಿರುದ್ದ ದೂರಿಗೆ ಹಿಂಬರಹ ನೀಡಲು ಲೋಕಾಯುಕ್ತ SPಗೆ ಗಡುವು ನೀಡಿದ ದೂರುದಾರ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
IND vs BAN: ಕಾನ್ಪುರ್​ಗೆ ಬಂದಿಳಿದ ಟೀಮ್ ಇಂಡಿಯಾ: ಇಲ್ಲಿದೆ ವಿಡಿಯೋ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಕೋಲಾರದಲ್ಲಿ ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ, ಸ್ಥಳೀಯರಿಗೆ ಆತಂಕ
ಕೋಲಾರದಲ್ಲಿ ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ, ಸ್ಥಳೀಯರಿಗೆ ಆತಂಕ
ಯುವ ದಸರಾ ವೇದಿಕೆ ಮೇಲೆ ನಕ್ಕ ರುಕ್ಮಿಣಿ ವಸಂತ್; ವಿಡಿಯೋ ನೋಡಿ
ಯುವ ದಸರಾ ವೇದಿಕೆ ಮೇಲೆ ನಕ್ಕ ರುಕ್ಮಿಣಿ ವಸಂತ್; ವಿಡಿಯೋ ನೋಡಿ
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು