AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಇಟಲಿ ಪ್ರಧಾನಿ ಮೆಲೋನಿಯೊಂದಿಗೆ ಎಲಾನ್ ಮಸ್ಕ್ ಡೇಟಿಂಗ್‌? ವೈರಲ್‌ ಆಯ್ತು ಫೋಟೋ

ಟೆಕ್‌ ದೈತ್ಯ ಎಲಾನ್ ಮಸ್ಕ್ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಈ ಇಬ್ಬರು ಜೊತೆಗಿರುವ ಫೋಟೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಇವರಿಬ್ಬರೂ ಡೇಟಿಂಗ್‌ ಮಾಡ್ತಿದ್ದಾರಾ ಎಂದು ಜನ ಸಾಕಷ್ಟು ಪ್ರಶ್ನೆಗಳನ್ನು ಕೇಳ್ತಿದ್ದಾರೆ. ಈ ಪ್ರಶ್ನೆಗೆ ಸ್ವತಃ ಎಲೋನ್‌ ಮಾಸ್ಕ್‌ ಸ್ಪಷ್ಟನೆಯನ್ನು ನೀಡಿದ್ದಾರೆ.

Viral: ಇಟಲಿ ಪ್ರಧಾನಿ ಮೆಲೋನಿಯೊಂದಿಗೆ ಎಲಾನ್ ಮಸ್ಕ್ ಡೇಟಿಂಗ್‌? ವೈರಲ್‌ ಆಯ್ತು ಫೋಟೋ
ವೈರಲ್​​​ ಫೋಸ್ಟ್​​
ಮಾಲಾಶ್ರೀ ಅಂಚನ್​
| Edited By: |

Updated on: Sep 25, 2024 | 2:53 PM

Share

ಸಾಮಾನ್ಯವಾಗಿ ಸೆಲೆಬ್ರಿಟಿಗಳು, ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಹೆಸರು ಮಾಡಿರುವವರು ಏನೇ ಮಾಡಿದ್ರೂ ಸಖತ್‌ ಸುದ್ದಿಯಲ್ಲಿರುತ್ತಾರೆ. ಇದೀಗ ಟೆಕ್‌ ದೈತ್ಯ ಎಲಾನ್ ಮಸ್ಕ್ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಡೇಟಿಂಗ್‌ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಹೌದು ಈ ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಹ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ಇವರಿಬ್ಬರೂ ಡೇಟಿಂಗ್‌ ಮಾಡ್ತಿದ್ದಾರಾ ಎಂದು ಜನ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಸ್ವತಃ ಎಲಾನ್ ಮಸ್ಕ್ ಸ್ಪಷ್ಟನೆಯನ್ನು ನೀಡಿದ್ದಾರೆ.

ಇತ್ತೀಚಿಗೆ ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಟಲಿ ಪ್ರಧಾನಿ ಜಾರ್ಕಿಯಾ ಮೆಲೋನಿ ಬಿಲಿಯನೇರ್‌ ಎಲಾನ್ ಮಸ್ಕ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಅಲ್ಲದೆ ಈ ಇಬ್ಬರೂ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಹ ಫೋಟೋವೊಂದು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ಕುರಿತ ಪೋಸ್ಟ್‌ ಒಂದನ್ನು teslaownersSV ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇವರಿಬ್ಬರೂ ಡೇಟಿಂಗ್‌ ಮಾಡುತ್ತಿದ್ದಾರೆಯೇ? ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ಫೋಟೋದಲ್ಲಿ ಎಲೋನ್‌ ಮಸ್ಕ್‌, ಮೆಲೋನಿ ಪರಸ್ಪರ ಕಣ್ಣಲ್ಲಿ ಕಣ್ಣಿಟ್ಟು ನೋಡುವಂತಹ ದೃಶ್ಯವನ್ನು ಕಾಣಬಹುದು.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಈ ಫೋಟೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಇದಕ್ಕೆ ಉತ್ತರಿಸಿದ ಎಲಾನ್ ಮಸ್ಕ್ ನಾವಿಬ್ಬರೂ ಡೇಟಿಂಗ್‌ ಮಾಡ್ತಿಲ್ಲ ಎಂದು ಕಾಮೆಂಟ್‌ ಬಾಕ್ಸ್‌ನಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಈ ದೇಸಿ ಬ್ರಾಂಡ್‌ ವಿಸ್ಕಿ ಭಾರತದ ದುಬಾರಿ ಮದ್ಯವಂತೆ, ಇದರ ಬೆಲೆ ಕೇಳಿದ್ರೆ ಶಾಕ್​​​ ಆಗೋದು ಗ್ಯಾರಂಟಿ

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ಪೋಸ್ಟ್‌ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅವರು ತಮ್ಮ ಪ್ರೀತಿಯನ್ನು ಕಂಡುಕೊಂಡಿದ್ದಾರೆʼ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಆದ್ರೂ ಈ ಇಬ್ಬರ ಜೋಡಿ ಚೆನ್ನಾಗಿದೆಯಲ್ವಾʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ