AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಈ ದೇಸಿ ಬ್ರಾಂಡ್‌ ವಿಸ್ಕಿ ಭಾರತದ ದುಬಾರಿ ಮದ್ಯವಂತೆ, ಇದರ ಬೆಲೆ ಕೇಳಿದ್ರೆ ಶಾಕ್​​​ ಆಗೋದು ಗ್ಯಾರಂಟಿ

ಭಾರತದಲ್ಲಿಯೂ ಹಲವಾರು ಬ್ರಾಂಡ್‌ಗಳ ವಿಸ್ಕಿ, ವೈನ್‌, ಬಿಯರ್‌ಗಳಿವೆ. ಮದ್ಯಪ್ರಿಯರಿಗಂತೂ ಈ ಎಲ್ಲಾ ಬ್ರಾಂಡ್‌ಗಳ ಬಗ್ಗೆಯೂ ತಿಳಿದಿರುತ್ತದೆ. ಆದ್ರೆ ಅದರಲ್ಲಿ ಯಾವ ಬ್ರಾಂಡ್‌ನ ಮದ್ಯ ತುಂಬಾನೇ ದುಬಾರಿ ಎಂಬ ಬಗ್ಗೆ ನಿಮಗೆ ಗೊತ್ತಿದೆಯಾ? ನಮ್ಮ ದೇಶದಲ್ಲಿಯೇ ತಯಾರಾಗುವಂತಹ ಈ ಒಂದು ದೇಸಿ ವಿಸ್ಕಿ ನಮ್ಮ ಭಾರತದ ದುಬಾರಿ ವಿಸ್ಕಿಯಂತೆ. ಅದು ಯಾವ ಬ್ರಾಂಡ್‌, ಅದರ ಬೆಲೆ ಎಷ್ಟು ಈ ಎಲ್ಲದರ ಮಾಹಿತಿ ಇಲ್ಲಿದೆ.

Viral: ಈ ದೇಸಿ ಬ್ರಾಂಡ್‌ ವಿಸ್ಕಿ ಭಾರತದ ದುಬಾರಿ ಮದ್ಯವಂತೆ, ಇದರ ಬೆಲೆ ಕೇಳಿದ್ರೆ ಶಾಕ್​​​ ಆಗೋದು ಗ್ಯಾರಂಟಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on:Sep 25, 2024 | 12:46 PM

Share

ಈ ಪ್ರಪಂಚದಲ್ಲಿ ಹಲವಾರು ಬ್ರಾಂಡ್‌ಗಳ ಮದ್ಯಗಳಿವೆ. ಅದರಲ್ಲಿ ಇಸಾಬೆಲ್ಲಾ ಇಸ್ಲೇ ಒರಿಜಿನಲ್‌ ವಿಸ್ಕಿ ವಿಶ್ವದ ಅತ್ಯಂತ ದುಬಾರಿ ವಿಸ್ಕಿ ಅನ್ನೋ ವಿಚಾರ ಬಹುತೇಕ ಎಲ್ಲರಿಗೂ ಗೊತ್ತಿದೆ. ಇದರ ಬೆಲೆ ಬರೋಬ್ಬರಿ ಆರು ಮಿಲಿಯನ್‌ ಡಾಲರ್‌ಗಳಿಗಿಂತಲೂ ಹೆಚ್ಚು. ಅಂದ್ರೆ ಸುಮಾರು 22.7 ಕೋಟಿ ರೂ. ಆದ್ರೆ ಭಾರತದಲ್ಲಿನ ದುಬಾರಿ ವಿಸ್ಕಿ ಯಾವುದು ಎಂಬ ಬಗ್ಗೆ ತಿಳಿದಿದೆಯಾ. ನಮ್ಮ ದೇಶದಲ್ಲಿಯೇ ತಯಾರಾಗುವ ಈ ಒಂದು ದೇಸಿ ವಿಸ್ಕಿ ನಮ್ಮ ಭಾರತದ ದುಬಾರಿ ವಿಸ್ಕಿಯಂತೆ. ಅದು ಯಾವ ಬ್ರಾಂಡ್‌, ಅದರ ಬೆಲೆ ಎಷ್ಟು ಈ ಎಲ್ಲದರ ಮಾಹಿತಿ ಇಲ್ಲಿದೆ.

ಭಾರತದ ದುಬಾರಿ ವಿಸ್ಕಿ:

ವಿದೇಶದಲ್ಲಿನ ಹಲವು ಪ್ರಸಿದ್ಧ ಕಂಪೆನಿಗಳು ತಮ್ಮ ದುಬಾರಿ ಆಲ್ಕೋಹಾಲ್‌ ವೋಡ್ಕಾ, ವಿಸ್ಕಿ, ವೈನ್, ರಮ್‌ಗಳನ್ನು ಭಾರತದಲ್ಲಿಯೂ ಮಾರಾಟ ಮಾಡುತ್ತದೆ. ಆದ್ರೆ ಭಾರತದಲ್ಲಿಯೇ ತಯಾರಾಗುವ ದುಬಾರಿ ವಿಸ್ಕಿ ಯಾವುದು ಗೊತ್ತಾ? ಅದುವೇ “ರಾಂಪುರ ಸಿಗ್ನೇಚರ್‌ ರಿಸರ್ವ್‌ ಸಿಂಗಲ್‌ ಮಾಲ್ಟ್‌ ವಿಸ್ಕಿ” ಇದು ನಮ್ಮ ದೇಶದ ಅತ್ಯಂತ ದುಬಾರಿ ವಿಸ್ಕಿಯಾಗಿದೆ. ರಾಡಿಕೋ ಖೈತಾನ್‌ ಲಿಮಿಟೆಡ್‌ ಈ ದುಬಾರಿ ಮದ್ಯದ ತಯಾರಕ ಕಂಪೆನಿಯಾಗಿದೆ. ಈ ವಿಶೇಷ ಆವೃತ್ತಿಯ ಪ್ರೀಮಿಯಂ ವಿಸ್ಕಿಯನ್ನು ರಾಂಪುರ್‌ ಡಿಸ್ಟಿಲರಿಯ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಪರಿಚಯಿಸಲಾಯಿತು. ವಿಶೇಷವೆಂದರೆ ಈವರೆಗೆ 400 ಬಾಟಲ್‌ ವಿಸ್ಕಿಯನ್ನು ಮಾತ್ರ ಉತ್ಪಾದಿಸಲಾಗಿದ್ದು, ಅದರಲ್ಲಿ ಈಗ ಕೇವಲ 2 ಮಾತ್ರ ಉಳಿದಿದೆ.

ಇದನ್ನೂ ಓದಿ: ಹದ್ದಿನ ಕಣ್ಣು ನಿಮ್ಮದಾಗಿದ್ದರಷ್ಟೇ 8ರ ಮಧ್ಯೆ ಅಡಗಿರುವ 3ರನ್ನು ಪತ್ತೆ ಹಚ್ಚಲು ಸಾಧ್ಯ

ಬೆಲೆ ಎಷ್ಟು?

ರಾಂಪುರ ಸಿಗ್ನೇಚರ್‌ ರಿಸರ್ವ್‌ ಸಿಂಗಲ್‌ ಮಾಲ್ಟ್‌ ವಿಸ್ಕಿಯನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಬಾಟಲಿಗೆ 5 ಲಕ್ಷ ರೂ. ಗಳಿಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಕೈಗೆಟಕುವ ದರದಲ್ಲಿಯೂ ಈ ಕಂಪೆನಿಯ ವಿವಿಧ ಆವೃತ್ತಿಯ ವಿಸ್ಕಿಗಳಿವೆ. ರಾಂಪುರ ಸೆಲೆಕ್ಟ್‌ ವಿಸ್ಕಿಯನ್ನು 14 ಸಾವಿರಕ್ಕೆ ಮಾರಾಟ ಮಾಡಲಾಗುತ್ತದೆ. ಈ ವಿಸ್ಕಿ ಸ್ಯಾನ್‌ ಫ್ರಾನ್ಸಿಸ್ಕೋ ವರ್ಲ್ಡ್‌ ವೈನ್‌ ಮತ್ತು ಸ್ಪಿರಿಟ್ಸ್‌ ಪ್ರಶಸ್ತಿ ಗೆದ್ದಿದೆ. ಪಿ.ಎಕ್ಸ್‌ ಶೆರ್ರಿ ವಿಸ್ಕಿಯ ಬೆಲೆ ಪ್ರತಿ ಬಾಟಲಿಗೆ 12 ಸಾವಿರ. ರಾಂಪುರ ಜುಗಲ್‌ ಬಂದಿ ವಿಸ್ಕಿಯ ಬೆಲೆ 40 ಸಾವಿರ ರೂ. 1943 ರಲ್ಲಿ ಶುರುವಾದ ಈ ಮದ್ಯ ಕಂಪೆನಿ ಪ್ರಸ್ತುತ 102 ಕ್ಕೂ ದೇಶಗಳಿಗೆ ತನ್ನ ಬ್ರಾಂಡ್‌ನ ವಿವಿಧ ಆವೃತ್ತಿಯ ಮದ್ಯಗಳನ್ನು ರಫ್ತು ಮಾಡುತ್ತಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Wed, 25 September 24

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ