3,000 ಕ್ಕೂ ಹೆಚ್ಚು ಕೃಷ್ಣಮೃಗಗಳು ರಸ್ತೆ ದಾಟುತ್ತಿರುವ ವೀಡಿಯೊ ಹಂಚಿಕೊಂಡ ಪ್ರಧಾನಿ ಮೋದಿ; ಅದ್ಭುತ ದೃಶ್ಯವನ್ನು ಮಿಸ್​ ಮಾಡ್ಕೊಳ್ಬೇಡಿ

| Updated By: shruti hegde

Updated on: Jul 29, 2021 | 10:47 AM

Black Bucks Crossing Road: ಇಲಾಖೆಯ ಪ್ರಕಾರ 3,000ಕ್ಕೂ ಹೆಚ್ಚು ಕೃಷ್ಣ ಮೃಗಗಳು ರಸ್ತೆಯಲ್ಲಿ ಎತ್ತರಕ್ಕೆ ಹಾರುತ್ತಿವೆ. ಒಂದಾದ ಮೇಲೊಂದು ಸಾಲಿನಲ್ಲಿ ರಸ್ತೆ ದಾಟುತ್ತಿರುವುದು ನೋಡಲು ಅದ್ಭುತ ದೃಶ್ಯವಾಗಿದೆ.

3,000 ಕ್ಕೂ ಹೆಚ್ಚು ಕೃಷ್ಣಮೃಗಗಳು ರಸ್ತೆ  ದಾಟುತ್ತಿರುವ ವೀಡಿಯೊ ಹಂಚಿಕೊಂಡ ಪ್ರಧಾನಿ ಮೋದಿ; ಅದ್ಭುತ ದೃಶ್ಯವನ್ನು ಮಿಸ್​ ಮಾಡ್ಕೊಳ್ಬೇಡಿ
ಕೃಷ್ಣ ಮೃಗಗಳು
Follow us on

3,000 ಕ್ಕೂ ಹೆಚ್ಚು ಕೃಷ್ಣ ಮೃಗಗಳು(Black Bucks) ರಸ್ತೆ ದಾಟುತ್ತಿರುವ ವಿಡಿಯೋವನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಗುಜರಾತಿನ ಭಾವನಗರ್​ನಲ್ಲಿನ ರಾಷ್ಟ್ರೀಯ ಉದ್ಯಾನವನದ ದೃಶ್ಯ ಇದಾಗಿದ್ದು, ಅದ್ಭುತ ಎಂದು ಶೀರ್ಷಿಕೆ ನೀಡುವುದರ ಮೂಲಕ ವಿಡಿಯೋ ಹಂಚಿಕೊಳ್ಳಲಾಗಿದೆ. ವೇಲವದರ್ ಕೃಷ್ಣಮೃಗ ರಾಷ್ಟ್ರೀಯ ಉದ್ಯಾನವನದ(Velavadar Blackbuck National Park) ಈ ಸುಂದರ ದೃಶ್ಯವನ್ನು ಗುಜರಾತಿನ ಮಾಹಿತಿ ಇಲಾಖೆ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ರೀಟ್ವೀಟ್ ಮಾಡಿದ್ದಾರೆ.

ಇಲಾಖೆಯ ಪ್ರಕಾರ 3,000ಕ್ಕೂ ಹೆಚ್ಚು ಕೃಷ್ಣ ಮೃಗಗಳು ರಸ್ತೆಯಲ್ಲಿ ಎತ್ತರಕ್ಕೆ ಹಾರುತ್ತಿವೆ. ಒಂದಾದ ಮೇಲೊಂದು ಸಾಲಿನಲ್ಲಿ ರಸ್ತೆ ದಾಟುತ್ತಿರುವುದು ನೋಡಲು ಅದ್ಭುತ ದೃಶ್ಯವಾಗಿದೆ.

ಕೃಷ್ಣಮೃಗ ಸಂರಕ್ಷಿತ ಪ್ರಾಣಿಗಳು ಮತ್ತು ಅವುಗಳ ಬೇಟೆಯನ್ನು ವನ್ಯಜೀವಿ ಕಾಯ್ದೆಯ ಅಡಿಯಲ್ಲಿ ನಿಷೇಧಿಸಲಾಗಿದೆ. ಒಂದು ಕಾಲದಲ್ಲಿ ಭಾರತದಲ್ಲಿ ಕೃಷ್ಣಮೃಗಗಳ ವಾಸ ವ್ಯಾಪಕವಾಗಿತ್ತು. ಆದರೆ ಅತಿಯಾದ ಬೇಟೆ, ಅರಣ್ಯನಾಶದಿಂದ ಅವನತಿ ಹೊಂದುತ್ತಿವೆ.

ಭಾವನಗರ್​ನ ಉತ್ತರ ಭಾಗಕ್ಕೆ ಪ್ರಯಾಣ ಕೈಗೊಂಡರೆ ವೇಲಾವದರ್ ರಾಷ್ಟ್ರೀಯ ಉದ್ಯಾನವನವನ್ನು ನೋಡಬಹುದು. ಕೃಷ್ಣಮೃಗಗಳ ವಾಸಕ್ಕೆ ಹೆಸರು ಪಡೆದಿರುವ ಈ ಉದ್ಯಾನವನ ಜನಪ್ರಿಯತೆ ಗಳಿಸಿಕೊಂಡಿದೆ. ಈ ಅರಣ್ಯ ಸುಮಾರು 34 ಚದರಮೀಟರ್ ವಿಸ್ತಾರದಲ್ಲಿದೆ. ಕೃಷ್ಣಮೃಗಗಳನ್ನು ಹೊರತುಪಡಿಸಿದರೆ ಅನೇಕ ಜಾತಿಯ ಪಕ್ಷಿಗಳು, ಪ್ರಾಣಿ ಪ್ರಭೇದಗಳನ್ನು ಕಾಣಬಹುದು. ಪೆಲಿಕಾನ್​ ಮತ್ತು ಫ್ಲೆಮಿಂಗೊಗಳಂತಹ ಹಲವಾರು ಜಾತಿಯ ವಲಸೆ ಪಕ್ಷಿಗಳನ್ನು ಇಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ:

ಹತ್ತಾರು ಎಕರೆ ಅರಣ್ಯ ಭಸ್ಮ; ಬೆಂಕಿಯಿಂದ ತಪ್ಪಿಸಿಕೊಳ್ಳಲು ಜಿಂಕೆ, ಕೃಷ್ಣಮೃಗಗಳ ಪರದಾಟ

ಹಾವೇರಿಯಲ್ಲಿ ಕೃಷ್ಣಮೃಗಗಳ ಬಿಂದಾಸ್​ ಲೈಫ್​; ಕಣ್ಣಿಗೆ ಹಬ್ಬ ಇವುಗಳ ಓಡಾಟ-ಕಾದಾಟ..!

Published On - 10:44 am, Thu, 29 July 21