ಹತ್ತಾರು ಎಕರೆ ಅರಣ್ಯ ಭಸ್ಮ; ಬೆಂಕಿಯಿಂದ ತಪ್ಪಿಸಿಕೊಳ್ಳಲು ಜಿಂಕೆ, ಕೃಷ್ಣಮೃಗಗಳ ಪರದಾಟ

ಬೆಂಕಿಯಿಂದ ತಪ್ಪಿಸಿಕೊಳ್ಳಲು ಜಿಂಕೆಗಳು ಮತ್ತು ಕೃಷ್ಣ ಮೃಗಗಳು ಪರದಾಡುತ್ತಿರುವ ಕರುಣಾಜಕನ ದೃಶ ವಿಡಿಯೋದಲ್ಲಿ ಸೆರೆಯಾಗಿದೆ. ಗ್ರಾಮದ ಹೊರವಲಯದಲ್ಲಿ ಕಟ್ಟೆ ಮಾದೇಶ್ವರ ದೇವಸ್ಥಾನದ ಬಳಿಯ ಹಳ್ಳವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಳೆದ 2 ತಿಂಗಳಲ್ಲಿ ಈ ಪ್ರದೇಶದಲ್ಲಿ 5 ಬಾರಿ ಅರಣ್ಯ ಭಾಗಕ್ಕೆ ಬೆಂಕಿ ತಾಗಿದೆ.

ಹತ್ತಾರು ಎಕರೆ ಅರಣ್ಯ ಭಸ್ಮ; ಬೆಂಕಿಯಿಂದ ತಪ್ಪಿಸಿಕೊಳ್ಳಲು ಜಿಂಕೆ, ಕೃಷ್ಣಮೃಗಗಳ ಪರದಾಟ
ಹತ್ತಾರು ಎಕರೆ ಅರಣ್ಯ ಭಸ್ಮ.. ಬೆಂಕಿಯಿಂದ ತಪ್ಪಿಸಿಕೊಳ್ಳಲು ಜಿಂಕೆಗಳು, ಕೃಷ್ಣಮೃಗಗಳ ಪರದಾಟ
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:Apr 01, 2021 | 4:55 PM

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಕೋಣನೂರು ಕಿರು ಅರಣ್ಯ ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಹತ್ತಾರು ಎಕರೆಯಲ್ಲಿದ್ದ ಅರಣ್ಯ ಸಂಪತ್ತು ಬೆಂಕಿಗಾಹುತಿಯಾಗಿದೆ. ಕೋಣನೂರು ಕಿರು ಅರಣ್ಯ ಪ್ರದೇಶದಲ್ಲಿ ನಿನ್ನೆ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ಹತ್ತಾರು ಎಕರೆ ಅರಣ್ಯ ಪ್ರದೇಶ ಭಸ್ಮವಾಗಿದೆ.

ಬೆಂಕಿಯಿಂದ ತಪ್ಪಿಸಿಕೊಳ್ಳಲು ಜಿಂಕೆಗಳು ಮತ್ತು ಕೃಷ್ಣ ಮೃಗಗಳು ಪರದಾಡುತ್ತಿರುವ ಕರುಣಾಜನಕ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಗ್ರಾಮದ ಹೊರವಲಯದಲ್ಲಿ ಕಟ್ಟೆ ಮಾದೇಶ್ವರ ದೇವಸ್ಥಾನದ ಬಳಿಯ ಹಳ್ಳವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಳೆದ 2 ತಿಂಗಳಲ್ಲಿ ಈ ಪ್ರದೇಶದಲ್ಲಿ 5 ಬಾರಿ ಅರಣ್ಯ ಭಾಗಕ್ಕೆ ಬೆಂಕಿ ತಾಗಿದೆ. ಇದೀಗ ಬಿರುಬೇಸಿಗೆ ಹೆಚ್ಚಾಗಿದೆ. ಹಾಗಾಗಿ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಆತಂಕ ಮತ್ತಷ್ಟು ಹೆಚ್ಚಾಗಿದೆ.

Published On - 10:20 am, Thu, 1 April 21