Viral Video: ದೂಧಸಾಗರ; ರೈಲ್ವೆ ಹಳಿ ದಾಟಿದ್ದಕ್ಕೆ ಚಾರಣಿಗರಿಂದ ಬಸ್ಕಿ ಹೊಡೆಸಿದ ಪೊಲೀಸರು

|

Updated on: Jul 18, 2023 | 11:28 AM

Punishment : 1,017 ಅಡಿಯಿಂದ ಧುಮುಕುವ ಈ ಹಾಲಿನ ಸಮುದ್ರವನ್ನು ಮಳೆಗಾಲದಲ್ಲಿ ನೋಡುವುದೇ ಛಂದ. ಆದರೆ ಇತ್ತೀಚೆಗೆ ಸಂಭವಿಸಿದ ಅಪಘಾತದಿಂದಾಗಿ ಗೋವಾ ಸರ್ಕಾರ ಇಲ್ಲಿ ಚಾರಣವನ್ನು ನಿಷೇಧಿಸಿದೆ. ಆದರೂ ಈ ತಂಡ...

Viral Video: ದೂಧಸಾಗರ; ರೈಲ್ವೆ ಹಳಿ ದಾಟಿದ್ದಕ್ಕೆ ಚಾರಣಿಗರಿಂದ ಬಸ್ಕಿ ಹೊಡೆಸಿದ ಪೊಲೀಸರು
ದೂಧಸಾಗರಕ್ಕೆ ಹೊರಟಿದ್ದ ಚಾರಣಿಗರ ದಂಡನ್ನು ಪೊಲೀಸರು ಬಸ್ಕಿ ಹೊಡೆಸುತ್ತಿರುವುದು.
Follow us on

Dudhsagar : ಗೋವಾ-ಕರ್ನಾಟಕ ಗಡಿಯಲ್ಲಿರುವ ದೂಧಸಾಗರ್ ಜಲಪಾತದ ಮನೋಹರ ದೃಶ್ಯವನ್ನು ನೋಡಲು ಮಳೆಗಾಲದ ಈ ಸಮಯ ಅತ್ಯಂತ ಪ್ರಶಸ್ತ. ಹಾಗಾಗಿ ಇಲ್ಲಿ ಪ್ರವಾಸಿಗರ ದಂಡೇ ನೆರೆದಿರುತ್ತದೆ. ಇದೀಗ ಇಂಥದೊಂದು ಚಾರಣಿಗರ ಗುಂಪಿಗೆ (Trekking Group) ಪೊಲೀಸರು ದಂಡಿಸಿದ ವಿಡಿಯೋ ವೈರಲ್ ಆಗಿದೆ. ಜಲಪಾತವನ್ನು ನೋಡಲು ಈ ಚಾರಣಿಗರು ನಿಗದಿತ ಸ್ಥಳಕ್ಕಿಂತ ಮೊದಲೇ ರೈಲಿನಿಂದ ಇಳಿದಿದ್ದಕ್ಕಾಗಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಚಾರಣಿಗರು ಮಾಡಿದ ತಪ್ಪಿಗೆ ಸಾಲಾಗಿ ನಿಂತು ಬಸ್ಕಿ ಹೊಡೆಯುತ್ತಿರುವ ಈ ವಿಡಿಯೋ ಇಲ್ಲಿದೆ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

Railway Police Punish Trekkers at Dudhsagar Waterfall. #Dudhsagar #travel pic.twitter.com/hM94awOmcy

ಬೆಂಗಳೂರು, ಮಂಗಳೂರು, ಬೆಳಗಾವಿ, ಉತ್ತರ ಕನ್ನಡ, ಹುಬ್ಬಳ್ಳಿ, ಧಾರವಾಡ, ಬಾಗಲಕೋಟೆ ಮತ್ತು ಮಹಾರಾಷ್ಟ್ರದ ಅನೇಕ ಜಿಲ್ಲೆಗಳಿಂದ ಚಾರಣಿಗರ ದಂಡು ಈ ಜಲಪಾತವನ್ನು ನೋಡಲು ಬರುತ್ತದೆ. ಸಾಮಾನ್ಯವಾಗಿ ಚಾರಣಿಗರು ಗೋವಾದ ಕೊಲ್ಲಮ್​ ನಿಲ್ದಾಣದಲ್ಲಿ ಇಳಿದು ನೈಋತ್ಯ ರೈಲ್ವೆ ಹಳಿಗುಂಟ ನಡೆದುಕೊಂಡು ದೂಧಸಾಗರವನ್ನು ತಲುಪುವುದು ವಾಡಿಕೆ.

ಇದನ್ನೂ ಓದಿ : Viral Video: ಬಸ್ಸಿಗೆ ಹಾಯ್ದು ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ವಿಡಿಯೋ ವೈರಲ್

ಆದರೆ ಇತ್ತೀಚೆಗೆ ಸಂಗೂಯೆಮ್ ತಾಲೂಕಿನ ಮೈನಾಪಿ ಜಲಪಾತದಲ್ಲಿ ಇತ್ತೀಚೆಗೆ ಇಬ್ಬರು ಮುಳುಗಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಗೋವಾ ಸರ್ಕಾರ, ಅರಣ್ಯ ಇಲಾಖೆ ಮತ್ತು ಪೊಲೀಸ್​ ಇಲಾಖೆಯು ಮಳೆಗಾಲದ ಸಂದರ್ಭದಲ್ಲಿ ಜಲಪಾತಗಳಿಗೆ ಪ್ರವಾಸಿಗರು ಭೇಟಿ ನೀಡುವುದನ್ನು ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಚಾರಣಿಗರನ್ನು ರೈಲ್ವೆ ಹಳಿ ಬಳಿ ಪೊಲೀಸರು ತಡೆದು, ಪರಿಣಾಮದ ಬಗ್ಗೆ ವಿವರಿಸಿ, ದಂಡಿಸಿ ವಾಪಾಸು ಕಳಿಸಿದ್ದಾರೆ.

ಹಾಗಾಗಿ ಪ್ರವಾಸಿಗರು ದೂಧಸಾಗರ್​ ಜಲಪಾತದ ಸೌಂದರ್ಯವನ್ನು ರೈಲಿನೊಳಗೇ ಕುಳಿತು ಆಸ್ವಾದಿಸಬೇಕು ಎಂಬ ಕಟ್ಟಾಜ್ಞೆಯನ್ನು ಪಾಲಿಸುವುದು ಅನಿವಾರ್ಯ. ಇಲ್ಲವಾದಲ್ಲಿ ಪ್ರವಾಸಿಗರು ಮತ್ತು ರೈಲು ಪ್ರಯಾಣಿಕರು ಪರಸ್ಪರ ಅಪಾಯಕ್ಕೆ ಒಳಗಾಗಬೇಕಾಗುತ್ತದೆ. ಅಲ್ಲದೆ ಈ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ರೈಲ್ವೇ ಕಾಯಿದೆ ಸೆಕ್ಷನ್​ 147 ಮತ್ತು 159 ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ. ಆದ್ದರಿಂದ ಪ್ರವಾಸಿಗರು ಸುರಕ್ಷತೆಗಾಗಿ ನಿಯಮಗಳನ್ನು ಪಾಲಿಸಲೇಬೇಕು ಎಂದು ನೈಋತ್ಯ ರೈಲ್ವೆ ಟ್ವೀಟ್ ಮಾಡಿದೆ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 11:26 am, Tue, 18 July 23