Language : ಭಾರತೀಯರಾದ ನಮಗೆ ಇಂಗ್ಲಿಷ್ (English) ತುಸು ತುಟ್ಟಿಯೇ. ಒಂದು ಭಾಷೆಯನ್ನು ಅನಿವಾರ್ಯಕ್ಕಾಗಿ ಕಲಿಯುವುದು ಬೇರೆ. ಮಾತೃ ಅಥವಾ ರೂಢಿಗತ ಭಾಷೆಯಂತೆ ಅದು ನಮ್ಮೊಳಗೆ ಹೂತುಹೋಗುವುದು ಬೇರೆ. ಒಟ್ಟಿನಲ್ಲಿ ಭಾಷೆ ಎನ್ನುವುದು ಒಬ್ಬರಿಂದ ಒಬ್ಬರಿಗೆ ತಲುಪಲು ಇರುವ ಮಾರ್ಗ. ಇಬ್ಬರ ನಡುವಿನದು ಮಾತುಕತೆಯಾಗುತ್ತದೆ, ತಂಡದೊಂದಿಗೆ ಚರ್ಚೆ ಎನ್ನಿಸಿಕೊಳ್ಳುತ್ತದೆ, ಸಮೂಹದೊಂದಿಗೆ ಭಾಷಣ ಎನ್ನಿಸಿಕೊಳ್ಳುತ್ತದೆ. ಈ ಭಾಷಣ ಮಾಡುವ ವ್ಯಕ್ತಿ ಅಥವಾ ಪ್ರಭಾವಿ ಭಾಷಾಪ್ರೌಢಿಮೆಯೊಂದಿಗೆ ಜ್ಞಾನವಂತನೂ ಜವಾಬ್ದಾರಿಯುತನೂ ಆಗಿರಬೇಕಾಗುತ್ತದೆ. ಏಕೆಂದರೆ ಇಡೀ ಸಮೂಹವೇ ಸನ್ನಿಗೊಳಗಾದಂತೆ ಅವನ ಒಂದೊಂದು ಮಾತನ್ನು ಲಕ್ಷ್ಯಗೊಟ್ಟು ಕೇಳುತ್ತಿರುತ್ತದೆ. ಅಕಸ್ಮಾತ್ ಆ ಪ್ರಭಾವಿಗೆ ಸ್ಥಳೀಯ ಭಾಷೆ ಗೊತ್ತಿಲ್ಲವಾದಲ್ಲಿ ಆತ ವ್ಯಾಖ್ಯಾನಕಾರರನ್ನು ಅವಲಂಬಿಸಬೇಕಾಗುತ್ತದೆ. ವ್ಯಾಖ್ಯಾನಕಾರರು ಯಥಾವತ್ ಪ್ರಸ್ತುತಪಡಿಸಿದರೆ ಸರಿ, ಇಲ್ಲವಾದರೆ? ನೋಡಿ ಈ ಕೆಳಗಿನ ವಿಡಿಯೋ.
ಕಲಾವಿದರಾದ ಪ್ರಿನ್ಸಿ ಪಾರೀಖ್ (Princy Parikh) ಮತ್ತು ಝೆರ್ವಾನ್ ಜೆ ಬನ್ಶಾಹ್ (Zervaan J Bunshah) ಹೀಗೊಂದು ರೀಲ್ ಸೃಷ್ಟಿಸಿದ್ದು ಇದೀಗ ಭಾರೀ ವೈರಲ್ ಆಗುತ್ತಿದೆ. 10 ಮಿಲಿಯನ್ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 7 ಲಕ್ಷಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ಧಾರೆ. ಇಂಗ್ಲಿಷ್ನಲ್ಲಿ ಝೆರ್ವಾನ್ ಹೇಳುವುದನ್ನು ತತ್ಕ್ಷಣವೇ ಪ್ರಿನ್ಸಿ ಹಿಂದಿಯಲ್ಲಿ ಅನುವಾದಿಸಿ ಹೇಳುತ್ತಿದ್ದಾರೆ. ಏನು ಹೇಳುತ್ತಿದ್ದಾರೆ ಮತ್ತು ಆದ ಯಡವಟ್ಟು ಏನು ಎನ್ನುವುದನ್ನು ನೀವು ಕೇಳಿ ಬಿದ್ದು ಬಿದ್ದು ನಗುತ್ತಿರಬೇಕು. ನೆಟ್ಟಿಗರು ಈ ಬಗ್ಗೆ ಏನೆನ್ನುತ್ತಾರೆ?
ಇದನ್ನೂ ಓದಿ : Viral Video: ಹೀಗೊಂದು ಅಕ್ವೇರಿಯಂ ಟಾಯ್ಲೆಟ್, ಇದೆಲ್ಲಿದೆ ಗೊತ್ತೆ?
ಇಂಗ್ಲಿಷ್ ಟೀಚರ್ ಜೊತೆ ಪಿಟಿ ಟೀಚರ್. ಈ ವಿಡಿಯೋ ಮಾಡುವಾಗ ರಾಹುಲ್ ಗಾಂಧಿಗೆ ಧಕ್ಕೆಯಾಗಿಲ್ಲ ಎಂದುಕೊಳ್ಳುವೆ. ಆಕೆಯ ಆತ್ಮವಿಶ್ವಾಸ ಮಾತ್ರ ಸಖತ್. ಟೆಲಿಪ್ರಾಂಪ್ಟರ್ ಇಲ್ಲದ ಮೋದಿ (Narendra Modi) . ಮತ್ತೆ ಮತ್ತೆ ನೋಡಿ ನಗುತ್ತಿದ್ದೇನೆ. ಎಷ್ಟೇ ತಪ್ಪಾಗಲಿ ಆತ್ಮವಿಶ್ವಾಸ ಮಾತ್ರ ಅಖಂಡವಾಗಿರಬೇಕು. ರಾಹುಲ್ ಗಾಂಧಿ (Rahul Gandhi) ಮತ್ತು ಸ್ವರಾ ಭಾಸ್ಕರ್… ಹೀಗೆಲ್ಲ ತಮಾಷೆ ಮಾಡುತ್ತಿದ್ದಾರೆ ನೆಟ್ಟಿಗರು.
ನಮ್ಮ ರಾಜಕಾರಣಿಗಳ ಭಾಷೆ, ಭಾಷಣ ಮತ್ತು ಅನುವಾದಕರ ಅಥವಾ ಟೆಲಿಪ್ರಾಂಪ್ಟರ್ ಸಹಾಯ ಪಡೆಯುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:48 am, Wed, 28 June 23