Gold Paan : ಈ ಪಾನ್ ಬೀಡಾದ ಬೆಲೆ ಬರೋಬ್ಬರಿ 1 ಲಕ್ಷ ರೂ.; ಏನಿದರ ವಿಶೇಷತೆ?

|

Updated on: Aug 20, 2024 | 11:49 AM

20, 30 ರೂಪಾಯಿಗೆ ಸಿಗುವ ಪಾನ್​​ ಬೀಡಾ ಬಿಟ್ಟು ಲಕ್ಷ ಲಕ್ಷ ಹಣ ಖರ್ಚು ಮಾಡಲು ಈ ಪಾನ್​​ನಲ್ಲಿ ಅಂತಹ ವಿಶೇಷತೆ ಏನಿದೆ ಅಂತಾ ನಿಮಗೆ ಅನಿಸಬಹುದು. ಆದರೆ ಇದು ಸಾಮಾನ್ಯ ಪಾನ್​​ ಅಲ್ಲ, ತೆಳುವಾದ ಬಂಗಾರದ ಲೇಪನದಿಂದ ತಯಾರಿಸಲಾದ ಪಾನ್​. ಇನ್ನಷ್ಟು ವಿವರ ಇಲ್ಲಿದೆ ಓದಿ.

Gold Paan : ಈ ಪಾನ್ ಬೀಡಾದ ಬೆಲೆ ಬರೋಬ್ಬರಿ 1 ಲಕ್ಷ ರೂ.; ಏನಿದರ ವಿಶೇಷತೆ?
Graduate Selling 24 Carat Gold Paan
Follow us on

ಊಟ ಆದ ಮೇಲೆ ಒಂದ್ ಪಾನ್ ತಿಂದರೆ ಅಜೀರ್ಣದ ಸಮಸ್ಯೆ ಇರುವುದಿಲ್ಲ, ತಿಂದ ಆಹಾರ ಸರಿಯಾಗಿ ಜೀರ್ಣ ಆಗುತ್ತೆ ಎಂದು ಸಾಕಷ್ಟು ಜನರು ಪಾನ್​​ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಇದಲ್ಲದೇ ಮದುವೆಯಂತಹ ಶುಭ ಸಮಾರಂಭ ಇದ್ದಾಗ ಪಾನ್​ ಬೀಡಾದ ವ್ಯವಸ್ಥೆ ಮಾಡಿರುತ್ತಾರೆ. ಸಾಮಾನ್ಯವಾಗಿ ಪಾನ್​ ಬೀಡಾಗೆ 20 ರೂಪಾಯಿ ಇರುತ್ತದೆ. ಆದರೆ ಎಂದಾದರೂ ಲಕ್ಷ ರೂ. ಬೆಲೆ ಬಾಳುವ ಬೀಡಾವನ್ನು ತಿಂದಿದ್ದೀರಾ? ಸದ್ಯ ಇದಕ್ಕೆ ಸಂಬಂಧಿಸಿದ ಫೋಸ್ಟ್​​ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗುತ್ತಿದೆ.

ಮುಂಬೈನ ಮಹೀಮ್ ಪಾನ್ ಸ್ಟಾಲ್ನಲ್ಲಿ ಸಿಗುವ ಈ ದುಬಾರಿ ಪಾನ್​ ಬೀಡಾಗೆ ಎಲ್ಲಿಲ್ಲದ ಬೇಡಿಕೆ. ಈ ಅಂಗಡಿಯ ಮಾಲೀಕ ನೌಶಾದ್ ಶೇಖ್. ಎಂಬಿಎ ಪದವೀಧರ ನೌಶಾದ್ ಶೇಖ್ ಸಾಕಷ್ಟು ಕಂಪನಿಗಳ ಉದ್ಯೋಗ ತೊರೆದು ಪಾನ್ ಬೀಡಾ ಸ್ಟಾಲ್ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರ ಮುಂದೆಯೇ ಮೆಟ್ರೋದಲ್ಲಿ ಕಿಸ್ ಮಾಡ್ಕೊಂಡು ಪ್ರಯಾಣಿಸಿದ ಜೋಡಿ

20, 30 ರೂಪಾಯಿಗೆ ಸಿಗುವ ಪಾನ್​​ ಬೀಡಾ ಬಿಟ್ಟು ಲಕ್ಷ ಲಕ್ಷ ಹಣ ಖರ್ಚು ಮಾಡಲು ಈ ಪಾನ್​​ನಲ್ಲಿ ಅಂತಹ ವಿಶೇಷತೆ ಏನಿದೆ ಅಂತಾ ನಿಮಗೆ ಅನಿಸಬಹುದು. ಆದರೆ ಇದು ಸಾಮಾನ್ಯ ಪಾನ್​​ ಅಲ್ಲ, ತೆಳುವಾದ ಬಂಗಾರದ ಲೇಪನದಿಂದ ತಯಾರಿಸಲಾದ ಪಾನ್​. ಇದಲ್ಲದೇ ಇದಕ್ಕೆ ಸಾಕಷ್ಟು ಡ್ರೈ ಫೂಟ್ಸ್​ಗಳನ್ನು ಹಾಕುವುದರಿಂದ ಇದರ ಬೆಲೆ ಇಷ್ಟೊಂದು ಎಂದು ಹೇಳಲಾಗುತ್ತದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:45 am, Tue, 20 August 24