Viral Video: ಅಣ್ಣತಂಗಿಯ ಜಬರ್​ದಸ್ತ್ ಡ್ಯಾನ್ಸ್​; ಉತ್ಸಾಹದಲ್ಲಿ ನೆಟ್ಟಿಗರು

|

Updated on: Jul 26, 2023 | 10:10 AM

Dance : ಈಗಲೇ ನನ್ನ ಅಕ್ಕತಂಗಿಯರೊಂದಿಗೆ ಡ್ಯಾನ್ಸ್​ ಮಾಡಬೇಕು ಎನ್ನಿಸುತ್ತಿದೆ ಎಂದು ಒಬ್ಬರು. ಈ ವೀಕೆಂಡ್​ನಲ್ಲಿ ತಂಗಿಯನ್ನು ಮನೆಗೆ ಆಹ್ವಾನಿಸುತ್ತೇನೆ, ನಿಮ್ಮ ನೃತ್ಯದಿಂದ ಸ್ಫೂರ್ತಿಗೊಂಡಿದ್ದೇನೆ ಎಂದು ಇನ್ನೊಬ್ಬರು. ನೀವು?

Viral Video: ಅಣ್ಣತಂಗಿಯ ಜಬರ್​ದಸ್ತ್ ಡ್ಯಾನ್ಸ್​; ಉತ್ಸಾಹದಲ್ಲಿ ನೆಟ್ಟಿಗರು
ಅಣ್ಣ ತಂಗಿಯ ನೃತ್ಯ
Follow us on

Brother Sister : ಸ್ನೇಹಿತರು, ಪ್ರೇಮಿಗಳು, ಗಂಡ ಹೆಂಡತಿ ಜೋಡಿನೃತ್ಯ ಮಾಡುವುದನ್ನು ನೋಡಿದ್ದೀರಿ. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅಣ್ಣತಂಗಿ ಭಲೇ ಹುರುಪಿನಿಂದ ಡ್ಯಾನ್ಸ್ (Dance)​ ಮಾಡಿದ್ದಾರೆ. ಈತನಕ ಸುಮಾರು 9 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 3 ಲಕ್ಷ ಜನರು ಇದನ್ನು ಲೈಕ್ ಮಾಡಿದ್ದಾರೆ. ಸಾವಿರಕ್ಕಿಂತಲೂ ಹೆಚ್ಚು ಜನರು ಪ್ರತಿಕ್ರಿಯಿಸಿದ್ದಾರೆ. ಹಾಗಿದ್ದರೆ ಈ ಡ್ಯಾನ್ಸ್​ ಬಹಳ ವಿಶೇಷವಾಗಿಯೇ ಇರಬೇಕು ಎಂದು ನೀವಂದುಕೊಳ್ಳುತ್ತಿದ್ದೀರಿ ಅಲ್ಲವೆ? ನೋಡಿಬಿಡಿ!

ಫ್ಯಾಮಿಲಿ ಕ್ರ್ಯೂ ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ರಸ್ತೆಯ ಮೇಲೆ ಇವರು ಹೀಗೆ ಫ್ರೀ ಸ್ಟೈಲ್​ನಲ್ಲಿ ಡ್ಯಾನ್ಸ್​ ಮಾಡಿರುವುದನ್ನು ನೋಡಿ ಈ ಚಳಿಮಳೆಯಲ್ಲಿ ನೆಟ್ಟಿಗರು ಆಹಾ ಎನ್ನುತ್ತಿದ್ದಾರೆ, ನಿಮ್ಮ ಈ ಉತ್ಸಾಹ ನಮ್ಮನ್ನೂ ಕುಣಿಯಲು ಪ್ರೇರೇಪಿಸುತ್ತಿದೆ ಎನ್ನುತ್ತಿದ್ದಾರೆ. ನಿಮ್ಮ ಎನರ್ಜಿ, ಸ್ಟೆಪ್ಸ್​, ಎಕ್ಸ್​ಪ್ರೆಷನ್​ ಎಲ್ಲವೂ ಸೂಪರ್​ ಎಂದಿದ್ಧಾರೆ ಒಬ್ಬರು. ಅದ್ಭುತವಾದ ಜೋಡಿ ನಿಮ್ಮದು. ನಾನು ಸ್ವಲ್ಪ ಕುಳ್ಳಗೆ ದಪ್ಪಗೆ, ನನಗೆ ಡ್ಯಾನ್ಸ್​ ಗೊತ್ತಿದ್ದರೂ ಏನೋ ಸಂಕೋಚ. ಆದರೆ ಇದೀಗ ನಿಮ್ಮ ನೃತ್ಯ ನೋಡಿ ನನಗೂ ರೀಲ್ಸ್​ ಮಾಡಬೇಕು ಎಂದೆನ್ನಿಸುತ್ತಿದೆ ಎಂದಿದ್ದಾರೆ ಕೆಲವರು.

ಇದನ್ನೂ ಓದಿ : Viral Video: 10 ಬಿಯರ್​ ಮಗ್​​ಗಳನ್ನು ತಲೆಯ ಮೇಲಿಟ್ಟುಕೊಂಡು ಮೆಟ್ಟಿಲೇರಿದ ಈ ವ್ಯಕ್ತಿ

ಸಿಸ್ ಅಂಡ್​ ಬ್ರೋ ನೀವು ರಾಕಿಂಗ್​! ಕೊನೆಯತನಕವೂ ನಿಮ್ಮ ಬಾಂಧವ್ಯ ಹೀಗೇ ಇರಲಿ ಎಂದು ಹಾರೈಸಿದ್ದಾರೆ ಅನೇಕರು. ಹುಷಾರು ರೀಲ್ಸ್​ ಮಾಡುವಾಗ, ರಸ್ತೆಯಲ್ಲಿ ಗಾಡಿಗಳು ಓಡಾಡುತ್ತಿರುತ್ತವೆ. ಇದೀಗ ಪೊಲೀಸರು ವೈರಲ್ ಆದ ಇಂಥ ವಿಡಿಯೋಗಳನ್ನು ಗಮನಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಜೂ. 2ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಅಂದಿನಿಂದಲೂ ಇಂದಿನವರೆಗೂ ಇದನ್ನು ನೋಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ