ಮದುವೆ ಮೊದಲು ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಈಗ ಸಾಮಾನ್ಯವಾಗಿದೆ. ಈ ಸಮಯದಲ್ಲಿ ನವಜೋಡಿ ವಿವಿಧ ಥೀಮ್‌ಗಳನ್ನು ಆಧರಿಸಿ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳುತ್ತಾರೆ. ಇದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಂಭ್ರಮಿಸುವುದು ಕೂಡ ಸಾಮಾನ್ಯ. ಕೆಲವು ಫೋಟೋ ಶೂಟ್ಗಳಿಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವು ಫೋಟೋ ಶೂಟ್ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದೀಗ ಅಂತದ್ದೇ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ವಿಡಿಯೋ ಕಂಡು ನೆಟ್ಟಿಗರು ಗರಂ ಆಗಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ನವ ಜೋಡಿ ಪಾಶ್ಚಿಮಾತ್ಯ ಶೈಲಿಯಲ್ಲಿ ಚುಂಬಿಸುತ್ತಾ ಇರುವುದನ್ನು ಕಾಣಬಹುದು. ಲಿಪ್ ಲಾಕ್ ಮಾಡುತ್ತಾ ಮುಳುಗಿದ್ದ ಜೋಡಿಯನ್ನು ಕಂಡು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿ ಅಸಭ್ಯವಾಗಿ ಮಿತಿ ಮೀರಿದ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಯಾಕೆ ಬೇಕು? ಎಂದು ನೆಟ್ಟಿಗರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
Pre wedding photo shoot 🌝 pic.twitter.com/UL7ymLsf67
— Baba MaChuvera 💫 Parody of Parody (@indian_armada) October 2, 2024
ಇದನ್ನೂ ಓದಿ: Viral Video: ರಾಮನಾಮ ಜಪಿಸುತ್ತಿರುವ ಶ್ವಾನ; ವಿಡಿಯೋ ವೈರಲ್
@indian_armada ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 1.2 ಮಿಲಿಯನ್ ಅಂದರೆ 10ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ