ಅಬ್ಬಬ್ಬಾ, ಬಾಲಿವುಡ್ ಹಾಡಿಗೆ ಜಬರ್ದಸ್ತ್ ಸ್ಟೆಪ್ ಹಾಕಿದ ತುಂಬು ಗರ್ಭಿಣಿ

ದಿನಬೆಳಗಾದರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಕೆಲವು ವಿಡಿಯೋಗಳು ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸಿದರೆ, ಇನ್ನು ಕೆಲ ವಿಡಿಯೋಗಳು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತದೆ. ಹೌದು ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತುಂಬು ಗರ್ಭಿಣಿಯಾಗಿರುವ ಡಾ. ಸೋನಮ್ ದಹಿಯಾ ಅವರು ಬಾಲಿವುಡ್ ಹಾಡಿಗೆ ಜಬರ್ದಸ್ತ್ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಅಬ್ಬಬ್ಬಾ, ಬಾಲಿವುಡ್ ಹಾಡಿಗೆ ಜಬರ್ದಸ್ತ್ ಸ್ಟೆಪ್ ಹಾಕಿದ ತುಂಬು ಗರ್ಭಿಣಿ
ವೈರಲ್ ವಿಡಿಯೋ
Image Credit source: Instagram

Updated on: May 08, 2025 | 4:26 PM

ತಾಯಿ (mother)ಯಾಗುವುದು ಹೆಣ್ಣಿಗೆ ಸಿಕ್ಕಂತಹ ವರಗಳಲ್ಲಿ ಒಂದು. ಹೌದು ಒಂದು ಮಗುವಿಗೆ ಜನ್ಮ ನೀಡುವುದು ಎಂದರೆ ಆ ಹೆಣ್ಣು ಮರುಜನ್ಮ ಪಡೆದಂತೆಯೇ ಸರಿ. ಹೀಗಾಗಿ ಗರ್ಭಿಣಿ (pregnant) ಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಹೆಚ್ಚು ಭಾರದ ವಸ್ತುಗಳನ್ನು ಎತ್ತುವುದು ಹಾಗೂ ದೇಹವಾಗಿ ಬಲವಾಗಿ ದಂಡಿಸುವಂತಹ ಕೆಲಸಗಳಿಂದ ಸ್ವಲ್ಪ ದೂರವಿರುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಅವಳಿ ಮಕ್ಕಳನ್ನು ಹೊಟ್ಟೆಯಲ್ಲಿ ಹೊತ್ತಕೊಂಡ ತುಂಬು ಗರ್ಭಿಣಿ ಮಹಿಳೆಯೊಬ್ಬರು ಬಾಲಿವುಡ್ ಡಿಂಗ್ ಡಾಂಗ್ ಡೋಲ್ ಹಾಡಿಗೆ ಕೊರಿಯೋಗ್ರಾಫರ್ ಜೊತೆಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಈ ಮಹಿಳೆಯೂ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಡಾನ್ಸ್ ಕೂಡ ಹೌದು, ಇವರ ಹೆಸರು ಡಾ. ಸೋನಮ್ ದಹಿಯಾ (Dr.Sonam dahiyaa)ಈ ತುಂಬು ಗರ್ಭಿಣಿ ಮಹಿಳೆಯ ಡಾನ್ಸ್ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.

artist dance community ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಬಾಲಿವುಡ್ ‘ಡಿಂಗ್ ಡಾಂಗ್ ಡಿಂಗ್’ ಹಾಡಿಗೆ ನೃತ್ಯ ಸಂಯೋಜಕ ಆದಿಲ್ ಖಾನ್ ಅವರೊಂದಿಗೆ ತುಂಬು ಗರ್ಭಿಣಿಯಾಗಿರುವ ಡಾ. ಸೋನಮ್ ದಹಿಯಾ ಭರ್ಜರಿ ಡಾನ್ಸ್ ಮಾಡುವುದನ್ನು ನೋಡಬಹುದು. ಈ ಡ್ಯಾನ್ಸ್ ವಿಡಿಯೋದೊಂದಿಗೆ ಸೋನಮ್ ಅವರು ಗರ್ಭಧಾರಣೆ ಮತ್ತು ಫಿಟ್ ನೆಸ್ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು ತಮ್ಮ ಕನಸು ನನಸಾದ ಬಗ್ಗೆ ಕೂಡ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ
ಭಾರತದಲ್ಲಿ ಇರುವ ಏಕೈಕ ಪುರುಷ ನದಿ ಯಾವುದು ಗೊತ್ತಾ?
ಭಾರತದಲ್ಲಿ ಆರಾಮ ಜೀವನ ನಡೆಸೋದೆ ಕಷ್ಟ ಎಂದ ಬೆಂಗಳೂರಿನ ಮಹಿಳೆ
ಮೋದಿಗೆ ಹೋಗಿ ಹೇಳು ಎಂದಿದ್ದವರಿಗೆ ದಿಟ್ಟ ಉತ್ತರ: #Itoldmodi ವೈರಲ್‌!
ಪಾಕ್ ಪರಿಸ್ಥಿತಿ ನೆನೆದು ಲೈವ್ ನಲ್ಲೇ ಅತ್ತ ಪಾಕಿಸ್ತಾನಿ ಸುದ್ದಿನಿರೂಪಕಿ

ಈ ವಿಡಿಯೋದೊಂದಿಗೆ, ಆದಿಲ್ ಖಾನ್ ಅವರೊಂದಿಗೆ ನೃತ್ಯ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಧನ್ಯವಾದ, ಇಂದು ನಾನು ಕಂಡ ಕನಸು ನನಸಾಯಿತು ಎಂದಿದ್ದಾರೆ. ಈ ವ್ಯಾಯಾಮವು ವೈಯಕ್ತಿಕ ಪ್ರಯಾಣ, ನಾನು ವ್ಯಾಯಾಮ ಮಾಡುವಾಗ ಏನು ಧರಿಸುತ್ತೇನೆ ಹಾಗೂ ಹೇಗೆ ಆರೋಗ್ಯ ಕಾಪಾಡಿಕೊಳ್ಳುತ್ತೇನೆ ಎಂಬುದು ನನ್ನ ಆಯ್ಕೆ. ಹೀಗಾಗಿ ಆರೋಗ್ಯಕರವಾದ ದೈಹಿಕ ಚಟುವಟಿಕೆಯೂ ಸುರಕ್ಷಿತವಾಗಿದ್ದು, ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿ. ಈ ದೈಹಿಕ ವ್ಯಾಯಾಮವು ಗರ್ಭಪಾತ, ಕಡಿಮೆ ತೂಕದ ಮಗುವಿನ ಜನನ, ಅಕಾಲಿಕ ಹೆರಿಗೆಯ ಅಪಾಯವನ್ನು ಹೆಚ್ಚಿಸುವುದಿಲ್ಲ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಆದರೆ ಈ ಗರ್ಭಿಣಿಯರು ಮೊದಲು ವೈದ್ಯರನ್ನು ಭೇಟಿಯಾಗಿ ತಾವು ಮಾಡುವ ಚಟುವಟಿಕೆ ಸರಿಯಾಗಿದೆಯೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಸ್ವಂತ ನಿರ್ಧಾರ ತೆಗೆದುಕೊಳ್ಳುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂದಿದ್ದಾರೆ. ಅದಲ್ಲದೇ ಈ ಸಾಂಸ್ಕೃತಿಕ ವೈವಿಧ್ಯತೆಯನ್ನು ಗೌರವಿಸುವ ಮೂಲಕ, ಪ್ರತಿಯೊಬ್ಬರೂ ತಮಗೆ ಸರಿಯೆನಿಸಿದ್ದನ್ನು ಮಾಡಬೇಕು. ಎಲ್ಲರಿಗೂ ತಮಗೆ ಸರಿಯೆನಿಸಿರುವುದನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ :ಆಪರೇಷನ್ ಸಿಂಧೂರ್ ನಂತರ ಪಾಕ್ ಜನರಿಗೆ ನಕ್ಷತ್ರ ನೋಡಿದ್ರು ಭಾರತ ಕ್ಷಿಪಣಿಯಂತೆ ಕಾಣುತ್ತಿದೆ

ಈ ವಿಡಿಯೋವೊಂದು ಎಪ್ಪತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ತುಂಬು ಗರ್ಭಿಣಿ ಮಹಿಳೆಯ ಡಾನ್ಸ್ ನೋಡಿ ಶಾಕ್ ಆಗಿದ್ದಾರೆ. ಬಳಕೆದಾರರೊಬ್ಬರು, ‘ಈ ಸಮಯದಲ್ಲಿ ಈ ರೀತಿ ಡಾನ್ಸ್ ಮಾಡುವ ನಿಮ್ಮ ಧೈರ್ಯಕ್ಕೆ ನನ್ನೊಂದು ಸಲಾಂ’ ಎಂದಿದ್ದಾರೆ. ಮತ್ತೊಬ್ಬರು, ‘ನೀವು ಅತ್ಯದ್ಭುತ ನೃತ್ಯಗಾರ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ತುಂಬು ಗರ್ಭಿಣಿಯಾಗಿದ್ದರೂ ಅದ್ಭುತವಾಗಿ ಡಾನ್ಸ್ ಮಾಡುತ್ತೀರಿ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಅವಳಿ ಮಕ್ಕಳಿಗೆ ತಾಯಿಯಾದ ಬಳಿಕ ಕೂಡ ಹೀಗೆಯೇ ಡಾನ್ಸ್ ಮಾಡಿ, ನೀವು ನಿಜಕ್ಕೂ ಗ್ರೇಟ್’ ಎಂದಿದ್ದಾರೆ. ಕೆಲವರು ಟೀಕಿಸಿದರೆ, ಇನ್ನು ಕೆಲವರು ಹೃದಯದ ಸಿಂಬಲ್ ಕಳುಹಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ