
ಕಾಲೇಜು ಓದುವವರಿಗೆ ಹೋಲಿಸಿದ್ರೆ ಸಣ್ಣ ಮಕ್ಕಳಿಗೆ ಶಾಲೆಯಲ್ಲಿ (School) ಒತ್ತಡ ಹೆಚ್ಚು. ಸ್ವಲ್ಪ ಬಿಡುವು ನೀಡದೇನೆ ಒಂದಷ್ಟು ಹೋಮ್ ವರ್ಕ್, ಅಸೈನ್ಮೆಂಟ್ ಹಾಗೂ ಪ್ರಾಜೆಕ್ಟ್ ಗಳನ್ನು ಮಾಡಲು ಹೇಳ್ತಾರೆ. ಸಂಜೆ ಮನೆಗೆ ಬಂದ ಮಕ್ಕಳು ಅದರಲ್ಲೇ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಪುಣೆಯ (Pune) ಪೋಷಕರೊಬ್ಬರು ಮಕ್ಕಳಿಗೆ ಶೈಕ್ಷಣಿಕ ಒತ್ತಡ ಎಷ್ಟಿದೆ ಎಂದು ಹೇಳಿದ್ದಾರೆ. ಎಂಟನೇ ತರಗತಿಯಲ್ಲಿ ಓದುತ್ತಿರುವ ಮಗನ ಪ್ರಾಜೆಕ್ಟ್ ವರ್ಕ್ ನಿಂದ ನಿದ್ದೆಗೆಡುವಂತಾಗಿದೆ ಎಂದು ಇಂದಿನ ಶಿಕ್ಷಣವು ಹೇಗಿದೆ ಎಂದು ವಾಸ್ತವ ಸ್ಥಿತಿ ಬಿಚ್ಚಿಟ್ಟಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಇವರ ಮಾತನ್ನು ಒಪ್ಪಿಕೊಂಡಿದ್ದಾರೆ.
ಪುಣೆ ವ್ಯಕ್ತಿ ಹಾಗೂ ಔರಮ್ ಕ್ಯಾಪಿಟಲ್‌ನ ಸಹ-ಸ್ಥಾಪಕರಾದ ಹೂಡಿಕೆದಾರ ನಿತೀನ್ ಎಸ್ ಧರ್ಮಾವತ್ (Niteen S Dharmawat) ತಮ್ಮ ಎಕ್ಸ್ ಖಾತೆಯಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇಲ್ಲಿ ಶಾಲೆಗಳು ನಿಷ್ಪ್ರಯೋಜಕವಾಗಿವೆ. ಈಗ ಮಧ್ಯರಾತ್ರಿ 12 ಗಂಟೆ. 8ನೇ ತರಗತಿಯ ಮಗು ಮನೆಕೆಲಸ ಮುಗಿಸಿದ ನಂತರವೂ ಅರ್ಥವಿಲ್ಲದ ಪ್ರಾಜೆಕ್ಟ್ ಮಾಡುತ್ತಿದ್ದಾನೆ. ಅದನ್ನು ಮಾಡದಿದ್ದರೆ ಅವನಿಗೆ ನೆಚ್ಚಿನ ದೈಹಿಕ ಶಿಕ್ಷಣ ಅವಧಿಯಲ್ಲಿ ಭಾಗವಹಿಸಲು ಅವಕಾಶ ಸಿಗುವುದಿಲ್ಲ ಎಂಬ ಭಯ ಅವನೊಳಗಿದೆ. ಪ್ರತಿದಿನ ಅವನು ರಾತ್ರಿ 12 ರಿಂದ 12.30 ರವರೆಗೆ ಎಚ್ಚರವಾಗಿರುತ್ತಾನೆ. ಪೋಷಕರಾಗಿ, ಈ ಕೊಳೆತ ಶಿಕ್ಷಣ ವ್ಯವಸ್ಥೆಯ ಎದುರು ನಾನು ಸಂಪೂರ್ಣ ಅಸಹಾಯಕನಾಗಿದ್ದೇನೆ. ನಾನು ಏನೇ ವಿರೋಧಿಸಿದರೂ ಈಗ ನನ್ನ ಮಗುವಿನ ಪರವಾಗಿ ಎದುರಿಸಬೇಕಾಗಿದೆ ಎಂದು ಬರೆದುಕೊಂಡಿದ್ದಾರೆ.
Schools are useless. This is 12 midnight. 8th std Kid is still doing some nonsense project after completing homework. Terror is such that if he doesn’t do it he won’t be allowed to participate in his favorite PE period. Everyday he is awake till 12-1230. As a parent I’m feeling… pic.twitter.com/piLvVYdXQZ
— Niteen S Dharmawat, CFA (@niteen_india) October 15, 2025
ಇದನ್ನೂ ಓದಿ:ರೈಲು ಹತ್ತದ ಹುಡುಗಿ ವಿಮಾನ ಹತ್ತಲು ಸಜ್ಜು; ನಾಸಾ ಪ್ರವಾಸಕ್ಕೆ ಆಯ್ಕೆಯಾದ ಹನ್ನೆರಡರ ಪೋರಿ
ಅಕ್ಟೋಬರ್ 16 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಸಾಮಾನ್ಯ ವಾಗಿ ಶಿಕ್ಷಕರು ಪ್ರಾಜೆಕ್ಟ್ ಪೂರ್ಣಗೊಳಿಸಲು ಸಾಕಷ್ಟು ಸಮಯ ನೀಡುತ್ತಾರೆ. ಒಂದು ದಿನದ ಪ್ರಾಜೆಕ್ಟ್ ನೀಡುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು ಶಾಲೆಯನ್ನು ಬದಲಿಸಿ, ಈ ರೀತಿ ಪ್ರಾಜೆಕ್ಟ್ ನೀಡದ ಇತರ ಶಾಲೆಗಳಿವೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಪೋಷಕರು ಅರ್ಥವಿಲ್ಲದ ಯೋಜನೆಗಳನ್ನು ಮಾಡಲೇಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ